
ಒಡಿಶಾ: ಗನ್ ಪ್ರೇಮಿ, ಕಾರುಗಳ ಪ್ರೇಮಿಯಾಗಿದ್ದ ಒಡಿಶಾದ ಆರೋಗ್ಯ ಸಚಿವನಿಗೆ ಪೊಲೀಸ್ ಗುಂಡೇಟು ತಾಗಿ ನಿಧನರಾಗಿದ್ದರು. ಆದ್ರೆ ಗುಂಡೇಟು ಹೊಡೆದ ಆರೋಪಿಯನ್ನು ವಿಚಾರಣೆ ನಡೆಸಿ, ತಪಾಸಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ಬೆಳಕಿಗೆ ಬಂದಿದೆ. ಸಚಿವ ನಬ ಕಿಶೋರ್ ಹತ್ಯೆ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ.

ಗೋಪಾಲಕೃಷ್ಣ ದಾಸ್ ಗೆ ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆ ಇದೆ ಎನ್ನಲಾಗಿದೆ. ಅಲ್ಲದೆ ಆತನಿಗೆ ರಿವಾಲ್ವರ್ ಕೊಟ್ಟು, ಬ್ರಜರಾಜನಗರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಅಲ್ಲಿಯೇ ಆತ ಸಚಿವರಿಗೆ ಗುಂಡೇಟು ಹೊಡೆದಿದ್ದಾನೆ. ಈ ಕಾಯಿಲೆ ಇರುವವರು ಅತ್ಯಂತ ಒತ್ತಡದಿಂದ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಆಪ್ತ ಸಮಾಲೋಚನೆಯಂತಹ ಚಿಕಿತ್ಸೆಯಿಂದ ಈ ಕಾಯಿಲೆ ಗುಣಪಡಿಸಬಹುದು.
ವೈದ್ಯರು ಹೇಳುವ ಪ್ರಕಾರ, ಸುಮಾರು ಹತ್ತು ವರ್ಷಗಳ ಹಿಂದೆಯೇ ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದ. ಮಾನಸಿಕ ಕಾಯಿಲೆಯಿಂದ ಗೋಪಾಲಕೃಷ್ಣ ಬಳಲುತ್ತಿದ್ದ. ಬಹಳ ಬೇಗನೆ ಕೋಪಗೊಳ್ಳುತ್ತಿದ್ದ. ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದ. ಆದರೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದನಾ ಎಂಬ ಖಚಿತತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

GIPHY App Key not set. Please check settings