Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಸಾರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

Facebook
Twitter
Telegram
WhatsApp

ಚಿತ್ರದುರ್ಗ, (ಏ.19) : ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಸಲ್ಲದು. ಖಾಸಗಿ ಹಾಗೂ ಕೆಎಸ್‍ಆರ್‍ಟಿಸಿ ವಾಹನ ಚಾಲಕರು  ರಸ್ತೆ ಸುರಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಾಹನ ಚಾಲನೆ ಮಾಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಖಾಸಗಿ ಬಸ್‍ಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಟಾಪ್‍ನಲ್ಲಿ ಕುರಿಸಿಕೊಂಡು ಓಡಾಟ ನೆಡೆಸಬಾರದು. ಖಾಸಗಿ ಹಾಗೂ ಕೆಎಸ್‍ಆರ್‍ಟಿಸಿ ಚಾಲಕರು ಅಪಾಯಕಾರಿ ರೀತಿಯಲ್ಲಿ, ಪೈಪೋಟಿಗೆ ಬಿದ್ದಂತೆ ಬಸ್ ಓಡಿಸುತ್ತಾರೆ, ಇಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಖಾಸಗಿ ಜಾಹೀರಾತು ಪ್ರದರ್ಶನಕ್ಕೆ ವಾರ್ಷಿಕವಾಗಿ ಸಣ್ಣವಾಹನಗಳಿಗೆ ರೂ.750, ಬಸ್ ಸೇರಿದಂತೆ ಇತರೆ ದೊಡ್ಡ ವಾಹನಗಳಿಗೆ ರೂ.2000  ಶುಲ್ಕ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ರದ್ದು ಪಡಿಸಿದ ರಹದಾರಿಗಳನ್ನು ಪುನರ್‍ಪರಿಶೀಲಿಸಿ, ರಹದಾರಿಗಳನ್ನು ಪುನಃ ನೀಡುವಂತೆ ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ಕೋರಿದರು.

ನಿಗಧಿತ ದಂಡ ಹಾಗೂ ಶುಲ್ಕ ಪಡೆದು ರಹದಾರಿ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕೆಲವು ಖಾಸಗಿ ಮಾಲೀಕರು ರಹದಾರಿ ರದ್ದತಿಗೆ ಸ್ವಯಂ ಅರ್ಜಿಗಳನ್ನು ಪ್ರಾಧಿಕಾರ ಸಭೆಯಲ್ಲಿ ಮಂಡಿಸಿದರು.

ರಹದಾರಿ ವರ್ಗಾವಣೆಯನ್ನು ಕಾನೂನಾತ್ಮಕವಾಗಿಕೈಗೊಳ್ಳಲು ಹಾಗೂ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳ  ಸಂಚಾರದ ವೇಳಾ ಪಟ್ಟಿಯನ್ನು ಪರಿಷ್ಕರಿಸಲು ಪ್ರಾಧಿಕಾರದಿಂದ ಸಭೆಯಲ್ಲಿ ಅನುಮತಿ ನೀಡಲಾಯಿತು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಪ್ರಾಧಿಕಾರದ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ, ಕೆ.ಎಸ್.ಆರ್.ಟಿ.ಸಿ ಚಿತ್ರದುರ್ಗ ವಿಭಾಗೀಯ ಅಧಿಕಾರಿ  ಕೆ.ಸತ್ಯಸುಂದರಂ, ಖಾಸಗಿ ಬಸ್ ಮಾಲೀಕರು, ನ್ಯಾಯವಾದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!