ಬೆಂಗಳೂರು: ಈ ನಟ-ನಟಿಯರ ಬಗ್ಗೆ ಆಗಾಗ ಕೆಲವೊಂದು ರೀತಿಯ ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇರುತ್ತವೆ. ಅದು ಅವರ ಬದುಕಿನ ಬಗ್ಗೆ. ಇದೀಗ ಹಿರಿಯ ನಟ ದ್ವಾರಕೀಶ್ ಅವರ ಬಗ್ಗೆಯೂ ಅಂತದ್ದೊಂದು ಸುಳ್ಳು ಸುದ್ದಿ ಹಬ್ಬಿತ್ತು. ದ್ವಾರಕೀಶ್ ಇಲ್ಲವಂತೆ. ಅನಾರೋಗ್ಯಕ್ಕೆ ತುತ್ತಾಗಿ, ಎಲ್ಲರನ್ನು ಅಗಲಿ ಹೋಗಿಯೇ ಬಿಟ್ಟರಂತೆ ಎಂದು. ಆದ್ರೆ ಈ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಹಿರಿಯ ನಟ ದ್ವಾರಕೀಶ್ ಅವರೇ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.
ದ್ವಾರಕೀಶ್ ಇನ್ನಿಲ್ಲ ಎಂಬ ಸುದ್ದಿ : ನಗುತ್ತಲೇ ಉತ್ತರಿಸಿದ ಹಿರಿಯ ನಟ..! pic.twitter.com/LOPu6nmwMy
— suddione-kannada News (@suddione) April 30, 2023
ವಿಡಿಯೋವೊಂದನ್ನು ಮಾಡಿದ ದ್ವಾರಕೀಶ್ ಅವರು, ಈ ಸುದ್ದಿಗೆ ಆಶ್ಚರ್ಯಕ್ಕಿಂತ ನಗು ವ್ಯಕ್ತಪಡಿಸಿದ್ದಾರೆ. ಬದುಕಿದ್ದವರನ್ನೇ ಸಾಯಿಸಿ ಬಿಟ್ಟವರಲ್ಲ ಎಂದು ಶಾಕ್ ಆಗಿದ್ದಾರೆ. ಈ ವಿಡಿಯೋ ಮೂಲಕ “ಎಲ್ಲರಿಗೂ ನಮಸ್ಕಾರ ನಮಸ್ಕಾರ ನಮಸ್ಕಾರ. ನಾನು ದ್ವಾರಕೀಶ್. ನೀವೂ ಸಾಕಿದ ದ್ವಾರಕೀಶ್, ನೀವೂ ಬೆಳೆಸಿದ ದ್ವಾರಕೀಶ್. ಚೆನ್ನಾಗಿದ್ದೀನಿ. ನಿಮ್ಮೆಲ್ಲರ ಆಶೀರ್ವಾದ ಬೇಕು. ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆಇಲ್ಲ. ನಗು ನಗುತ್ತಾ ಇದ್ದೀನಿ. ನಿಮ್ಮ ವಿಶ್ವಾಸ, ಪ್ರೀತಿ ಇದೆ ರೀತಿ ಇರಲಿ.ನಿಮ್ಮ ಆಶೀರ್ವಾದ ಇರುವ ತನಕ ನನಗೆ ಏನು ಆಗಲ್ಲ” ಎಂದಿದ್ದಾರೆ.
ದ್ವಾರಕೀಶ್ ಬಗ್ಗೆ ಈ ರೀತಿಯ ಸುದ್ದಿ ಇದೆ ಮೊದಲಲ್ಲ. ಸಾಕಷ್ಟು ಸಲ ಅವರ ಆರೋಗ್ಯದ ಬಗ್ಗೆಯೂ ಸುದ್ದಿ ಹಬ್ಬಿದೆ. ದ್ವಾರಕೀಶ್ ಮಾತ್ರವಲ್ಲ ಬೇರೆ ಬೇರೆ ಹಿರಿಯ ಕಲಾವಿದರ ಬಗ್ಗೆ ಹೀಗೆ ಸುದ್ದಿಗಳು ಹರಿದಾಡಿದ್ದಾಗ ಸ್ಪಷ್ಟನೆ ಕೂಡ ನೀಡಿದ್ದಾರೆ.





GIPHY App Key not set. Please check settings