ತೈಲ ಬೆಲೆ ದಾಖಲೆ ಏರಿಕೆಯ ಮೂಲಕ ಜನಸಾಮಾನ್ಯರ ಬದುಕು ದುರ್ಭರ: ಟಿ ಎ ಶರವಣ

suddionenews
2 Min Read

ಬೆಂಗಳೂರು: ಪೆಟ್ರೋಲ್ ಜೊತೆ ಜೊತೆಗೆ ಡೀಸೆಲ್ ದರ ಕೂಡ ಶತಕ ಬಾರಿಸುವ ಮೂಲಕ ಬಡವರು , ಮದ್ಯಮ ವರ್ಗದ ಜನರು ಬೆಚ್ಚಿ ಬೀಳಿಸುವ ವಾತಾವರಣ ಉಂಟಾಗಿದೆ ಎಂದು ಮಾಜಿ , ವಿಧಾನಪರಿಷತ್ ಸದಸ್ಯ ಟಿ ಎ.ಶರವಣ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ದರ ಏರಿಕೆಯಿಂದ ಬಡವರ ಮತ್ತು ಮಧ್ಯಮವರ್ಗದ
ಬದುಕುಗಳು ಛಿದ್ರಗೊಂಡಿದ್ದು , ದೈನಂದಿಕ ಚಟುವಟಿಕೆ ಮೇಲೆ ಮತ್ತೊಮ್ಮೆ ಬರೆ ಬಿದ್ದಿದೆ.
ಬಡವರು, ಮದ್ಯಮ ವರ್ಗದ ಜನರ ಬದುಕಿಗೆ ಕೊಳ್ಳಿ ಇಟ್ಟು ಅದನ್ನು ಇನ್ನಷ್ಟು ದುಸ್ತರ ಮಾಡುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೆ ದಿನ್ ಇರಬಹುದೇ ಎನ್ನುವ ಗುಮಾನಿ ಉಂಟಾಗಿದೆ ಎಂದು ಟೀಕಿಸಿದ್ದಾರೆ.

ಆಡಳಿತ ವ್ಯವಸ್ಥೆಯ ಮೇಲೆ ಕೇಂದ್ರಕ್ಕೆ ಸಂಪೂರ್ಣ ಹತೋಟಿ ತಪ್ಪಿದೆಯೆ ಎನ್ನುವ ಅನುಮಾನ.
ಕೆಳೆದ ವಾರವಷ್ಟೇ ಅಡಿಗೆ ಅನಿಲ ದರ ಸತತ ಏರಿಕೆ ಆಗಿ ಸಿಲಿಂಡರ್ ಒಂದಕ್ಕೆ ಒಂದು ಸಾವಿರ ರೂಪಾಯಿ ನತ್ತ ದಾಪುಗಾಲು ಹಾಕಿದೆ. ಅದರ ಬೆನ್ನಲ್ಲೇ ಪೆಟ್ರೋಲ್ ಜತೆ ಡೀಸೆಲ್ ದರ ಕೂಡ ನೂರು ರೂಪಾಯಿ ಮೀರಿದ್ದು, ಇದರಿಂದ ಸರಕು ಸಾಕಾಣಿಕೆ ವೆಚ್ಚ ಹೆಚ್ಚಾಗಿ, ದಿನನಿತ್ಯದ ಅಗತ್ಯ ವಸ್ತುಗಳ ದರ ಏರಿಕೆ ಖಂಡಿತ. ಜನಸಾಮಾನ್ಯರು ಬದುಕಬೇಕೋ? ಬೇಡವೋ ? ಎಂದು ಶರವಣ ಕಳವಳ ವ್ಯಕ್ತ ಪಡಿಸಿದ್ದಾರೆ

ಡೀಸೆಲ್ ದರ ದಾಖಲೆ ಏರಿಕೆ ಆಗಿರುವುದರಿಂದ ಸಹಜವಾಗಿ ಪ್ರಯಾಣ ದರ ಅಷ್ಟೇ ಅಲ್ಲ, ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗಿ ದಿನೋಪಯೋಗಿ ವಸ್ತುಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೆ ಹೋಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದೀಗ ಪಲಾಯನ ನೀತಿ ಅನುಸರಿಸದೆ ತಕ್ಷಣ ಮದ್ಯ ಪ್ರವೇಶಿಸಿ ಜನರ ನೆರವಿಗೆ ಮುಂದಾಗಬೇಕು. ದರ ಏರಿಕೆ ನಿಯಂತ್ರಿಸಬೇಕು ಎಂದು ಶರವಣ ಆಗ್ರಹ ಪಡಿಸಿದ್ದಾರೆ.

ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರ ಸರಕಾರಿ ಬಸ್ ಪ್ರಯಾಣ ದರ ಏರಿಕೆ ಮಾಡಿದೆ ಆದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ಕೇಂದ್ರ ಸರ್ಕಾರವಂತೂ ನಿಯಂತ್ರಣ ಕಳೆದು ಕೊಂಡಿದ್ದು,ದರ ಏರಿಕೆಗೆ ತಾನು ಕಾರಣವಲ್ಲ ಎಂದು ಹೊಣೆಯಿಂದ ನುಣುಚಿ ಕೊಂಡಿದೆ. ಇಂಥ ಸಂದರ್ಭದಲ್ಲಿ ದುಬಾರಿ ಪ್ರವೇಶ ತೆರಿಗೆ ಹಾಕುವ ರಾಜ್ಯ ಸರ್ಕಾರ ತುರ್ತಾಗಿ ಮದ್ಯ ಪ್ರವೇಶ ಮಾಡಬೇಕು ಎಂದು ಟಿ. ಎ.ಶರವಣ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಕರೆದು, ಡೀಸೆಲ್, ಪೆಟ್ರೋಲ್ ಮೇಲೆ ಹಾಕಿರುವ ತೆರಿಗೆಯನ್ನು ರದ್ದು ಪಡಿಸಬೇಕು. ಇದರಿಂದ ತೈಲ ದರ ಏರಿಕೆ ಕೊಂಚ ಮಟ್ಟಿಗೆ ಕಡಿಮೆ ಆಗಿ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯ ವಿಧಿಸುತ್ತಿರುವ ತೆರಿಗೆ ಕಡಿಮೆ ಮಾಡದಿದ್ದರೆ ಜಾತ್ಯತೀತ ಜನತಾದಳ ಬಿಜೆಪಿ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *