ಚುನಾವಣೆಗಳಲ್ಲಿ ಆಸ್ತಿ ವಿವರಣೆಯನ್ನು ಅಭ್ಯರ್ಥಿಗಳು ನೀಡಲೇಬೇಕು. ಹೀಗಾಗಿ ಎಲೆಕ್ಷನ್ ಸಮಯದಲ್ಲಿ ಯಾರ್ಯಾರ ಆಸ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಜಕಾರಣಿಗಳ ಆಸ್ತಿ ಕಡಿಮೆಯಾಗಿದ್ದೆ ಇಲ್ಲ. ಇದೀಗ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಆಸ್ತಿಯನ್ನು ಹೆಚ್ಚಿಸಿಕೊಂಡ ಸಂಸದರ ಪಟ್ಟಿ ಬಹಿರಂಗವಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯೂ ವರದಿ ಬಿಡುಗಡೆ ಮಾಡಿದ್ದಾರೆ. ಈ ವರದಿಯಲ್ಲಿ 23 ಸಂಸದರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೇಕಾ ಗಾಂಧಿ ಸೇರಿದಂತೆ 23 ಸಂಸದರ ಪಟ್ಟಿ ಇದ್ದು, ಕರ್ನಾಟಕ ಸಂಸದರ ಹೆಸರು ಕೂಡ ಇದೆ. ಕರ್ನಾಟಕದ ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಯವರ ಆಸ್ತಿ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 9,098ರಷ್ಟು ಏರಿಕೆಯಾಗಿದೆ. 2004ರಲ್ಲಿ ರೂ. 54.8 ಲಕ್ಷದಷ್ಟಿದ್ದ ಇವರ ಆಸ್ತಿ ಮೌಲ್ಯವು 2019ರ ವೇಳೆಗೆ ರೂ. 50.41 ಕೋಟಿಯಾಗಿದೆ.
ರಮೇಶ್ ಜಿಗಜಿಣಗಿ(ವಿಜಯಪುರ)- 54.8 ಲಕ್ಷದಷ್ಟಿದ್ದ ಆಸ್ತಿ ಮೌಲ್ಯ 50.41 ಕೋಟಿಗೆ ಏರಿಕೆಯಾಗಿದೆ. ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ) ಆಸ್ತಿ ಮೌಲ್ಯವು ರೂ. 46.39 ಲಕ್ಷದಿಂದ ರೂ. 20.93 ಕೋಟಿಗೆ ಏರಿಕೆಯಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ್ (ದಾವಣಗೆರೆ) ಆಸ್ತಿ ಮೌಲ್ಯವು ರೂ. 5.02 ಕೋಟಿಯಿಂದ ರೂ. 38.01 ಕೋಟಿಗೆ ಏರಿಕೆಯಾಗಿದೆ. ಪಿ.ಸಿ.ಗದ್ದಿಗೌಡರ್ (ಬಾಗಲಕೋಟೆ) ಆಸ್ತಿ ಮೌಲ್ಯವು ರೂ. 53.75 ಲಕ್ಷದಿಂದ ರೂ. 4.39 ಕೋಟಿಗೆ ಏರಿಕೆಯಾಗಿದೆ. ಇದು ಕಳೆದ ಇಪ್ಪತ್ತು ವರ್ಷದಲ್ಲಿ ಏರಿಕೆಯಾದ ಆಸ್ತಿಯಾಗಿದೆ. 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ ಒಟ್ಟಾರೆ ಆಸ್ತಿ ಮೌಲ್ಯವು ರೂ. 35.18 ಕೋಟಿಯಿಂದ ರೂ. 402.79 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…