Connect with us

Hi, what are you looking for?

ಪ್ರಮುಖ ಸುದ್ದಿ

ವಿಲಾಸಿ ಬದುಕಿನ ನಾಗಲೋಟಕ್ಕೆ ಮಾನವೀಯ ಪಾಠದ ಅಗತ್ಯವಿದೆ : ಕೊರ್ಲಕುಂಟೆ ತಿಪ್ಪೇಸ್ವಾಮಿ

ಸುದ್ದಿಒನ್, ಚಿತ್ರದುರ್ಗ, (ಮೇ.25) : ತನುಶ್ರೀ ಪ್ರಕಾಶನ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದೆ.

ಕಡೂರು ತಾಲೂಕಿನ ಸುಪ್ರಿಯಾ ಮಲ್ಲಿಕ್ ಪ್ರಥಮ, ರಾಯಚೂರಿನ ಸುಖಲತ ದ್ವಿತೀಯ ಮತ್ತು ಚಳ್ಳಕೆರೆ ಪಿ.ಡಿ. ಮಂಜುನಾಥ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಕುಮುಟಾ ಎನ್.ಕೆ. ಲಕ್ಷ್ಮಿ, ಹೊಸದುರ್ಗ ಭಾಗ್ಯ ಗಿರೀಶ್, ಶಿವಮೊಗ್ಗ ಆರ್.ನಿತ್ಯಾಶ್ರೀ, ಬೆಂಗಳೂರು ಕೆ.ಬಿ.ಲಕ್ಷ್ಮಿ ಮೆಚ್ಚುಗೆ ಬಹುಮಾನಕ್ಕೆ ಅರ್ಹರಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 45ಕ್ಕೂ ಹೆಚ್ಚು ಕವಿತೆಗಳನ್ನು ವಿಮರ್ಶಿಸಿರುವ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಕಾಶಕರಾದ ಸೂಲೇನಹಳ್ಳಿ ರಾಜು ತಿಳಿಸಿದ್ದಾರೆ.

ಕವಿತೆಗಳ ಬಗ್ಗೆ ಮಾತನಾಡಿರುವ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು, ವಿಲಾಸಿ ಬದುಕಿನ ನಾಗಲೋಟದಲ್ಲಿರುವ ಪ್ರಸ್ತುತ ಸಮಾಜಕ್ಕೆ ಮಾನವೀಯ ಪಾಠದ ಅಗತ್ಯವಿದೆ ಎನಿಸುತ್ತದೆ. ಈ ಕರೊನಾ ರೋಗದ ವಿಷಮ ಸ್ಥಿತಿಯಲ್ಲೂ ಮಾಧ್ಯಮವನ್ನು ವೇದಿಕೆಯಾಗಿ ರೂಪಿಸಿಕೊಳ್ಳುವ ಮೂಲಕ ಸಾಹಿತ್ಯ ಅಭಿರುಚಿ ಕಾರ್ಯ ಮಾಡಿರುವುದು ಅಭಿನಂದನಾರ್ಹ. ಸಂಬಂಧಗಳ ಮೌಲ್ಯ ಕುಸಿತ ಸಮಾಜದಲ್ಲಿ ಚಿಂತೆಗಚ್ಚುವ ರೀತಿಯಲ್ಲಿ ಮಾನವೀಯ ಕುರಿತಾಗಿ ಕವಿತಾ ಸ್ಪರ್ಧೆ ಪ್ರಸ್ತುತ ಅನಿಸಿತು.

ಪರಸ್ಪರ ಸಮೃದ್ಧ ಪ್ರೀತಿ, ಅಭಿಮಾನ ಕಂಡಿರುವ ಸಮಾಜ ಬದಲಾಗಿದೆ. ಸ್ವಾರ್ಥ ಮನೋಭಾವದಲ್ಲಿ ಒಂಟಿತನದ ಬದುಕಾಗಿಸಿಕೊಳ್ಳುತ್ತಿರುವ ವೇದನೆಯನ್ನು ಮಾನವೀಯ ನೆಲೆಯಲ್ಲಿ ಬಹುಪಾಲು ಕವಿಗಳು, ಮತ್ತೆ ಮಾನವೀಯತೆ ಮರುಕಳಿಸಲಿ ಎನ್ನುವ ಉತ್ತಮ ಕವಿತೆಗಳಲ್ಲಿ ಆಯ್ಕೆ ಮಾಡುವುದು ಕಷ್ಟ ಅನಿಸಿತು. ಏರ್ಪಡುವ ಇಂತಹ ಸ್ಪರ್ಧೆಗಳು ಬರಹವನ್ನು ಪರಿಪೂರ್ಣವಾಗಿಸಿಕೊಳ್ಳಲು ಮತ್ತು ಸಮಾಜದೊಟ್ಟಿಗೆ ನಾವು ಬೆರೆತುಕೊಳ್ಳುವ ಅವಕಾಶಗಳೇ ಹೊರೆತು ಅಂತಿಮವಾಗಿರುವುದಿಲ್ಲ. ಸದಾಕ್ರಿಯಾಶೀಲ ಬರವಣಿಗೆಯೊಂದಿಗೆ ನಮ್ಮನ್ನು ನಾವು ತೊಡಗಿಸುವ ಕ್ರಿಯೆ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಸುಪ್ರಿಯಾ ಮಲ್ಲಿಕ್ ಅವರ ಕವಿತೆ ಸಾಲುಗಳಲ್ಲಿ ‘ಕರುಣೆ ಇಲ್ಲದ ಸ್ವಾರ್ಥದಲ್ಲಿ ಮೆರೆಯಬೇಡ, ಇಂದೊ ನಾಳೆಯೊ ಮುಗಿಯುವ ಬದುಕಿನಲ್ಲಿ ಮಾನವೀಯತೆಯ ಬೆಳಕಾಗು’ ಎನ್ನುವ ಆಶಾಭಾವನೆಯಲ್ಲಿ ಸಮಾಜಕ್ಕೆ ಮತ್ತೊಮ್ಮೆ ಮಾನವೀಯ ಗುಣ ಕಲಿಸುವ ನಿರೀಕ್ಷೆ ಕವಿ ಇರಿಸಿಕೊಂಡಿದ್ದಾರೆ. ಇನ್ನು ರಾಯಚೂರಿನ ಸುಖಲತಾ ಕವಿತೆಯಲ್ಲಿ ‘ತನುಮನದಲ್ಲಿ ಮಂಗಮಾಯವಾಗಿರುವ ಮಾನವೀಯ ಗುಣ ಮತ್ತೆ ಮೆರೆಯಲಿ’ ಎನ್ನುವ ಚಿಂತನೆಯಲ್ಲಿ ಸಮಾಜದ ಯಾವ ಸ್ತರದಲ್ಲೂ ಮಾನವೀಯತೆ ಉಳಿದುಕೊಂಡಿಲ್ಲ. ಆದರೂ, ಇಲ್ಲಿ ಬದುಕುವ ಮನುಷ್ಯತನ್ನೊಟ್ಟಿಗೆ ಮಾನವೀಯತೆ ಕಟ್ಟಿಕೊಳ್ಳಬೇಕಾಗಿದೆ ಎನ್ನುವ ಸೂಕ್ಷ್ಮತೆ ತಿಳಿಸಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಪಿ.ಡಿ.ಮಂಜುನಾಥ ಅವರ ಕವಿತೆಯಲ್ಲಿ ‘ಸತ್ತ ಮಾನವೀಯತೆ ಕಾಣಲು, ಸಮಾಧಿ ಕೆದಕಿದರೂ ಸಿಗುತ್ತಿಲ್ಲ ಅದರ ಅವಶೇಷವೂ’ ಎನ್ನುವ ಬರವಣಿಗೆಯಲ್ಲಿ ಶೂನ್ಯ ಸಮಾಜದಲ್ಲಿ ಬದುಕೇ ಬೇಸರವಾಗಿ, ಹಿರಿಯರೊಟ್ಟಿಗೆ ಸತ್ತು ಸಮಾಧಿ ಸೇರಿರುವ ಮಾನವೀಯತೆಯನ್ನು ಸ್ಮಶಾನದಲ್ಲಿ ಹುಡುಕಾಟ ಮಾಡಲು ಪಯಣ ಮಾಡಿದ್ದಾರೆ. ಇದರಿಂದ ಪ್ರತಿಯೊಬ್ಬರಲ್ಲೂ ಮಾನವೀಯತೆಯ ಹುಡುಕಾಟದ ಗುಣ ಬೆಳೆಯಬೇಕಾಗಿದೆ. ಬದುಕಿರುವ ಜೀವಗಳು ಸಮಾಜವನ್ನೂ ಮಾನವೀಯ ಉಸಿರಾಗಿ ಬೆಳೆಸಿಕೊಳ್ಳಬೇಕಾಗಿದೆ ಎನ್ನುವ ಕವಿ ಸಂದೇಶ ಸಮಾಜಕ್ಕೆ ಪ್ರಸ್ತುತವಾಗಿ ಕಾಣುತ್ತದೆ. ಇಂತಹ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ ಹೆಚ್ಚಾಗಲಿ ಎಂದು ಆಶಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Latest

Home

  ಸುದ್ದಿಒನ್, ದಾವಣಗೆರೆ, (ಆ.05): ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದ್ದಾರೆ. ದೆಹಲಿಯ ಕೃಷಿ ಭವನದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.05) : ಜನಸ್ನೇಹಿಯಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂಬುದು ಚಿತ್ರದುರ್ಗ ಜಿಲ್ಲಾಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಜಿಲ್ಲೆಗೆ ಕಾಲಿಟ್ಟ ದಿನದಿಂದಲೂ ಜನರ ನೋವು ನಲಿವಿಗೆ ತಾಯಿಯಂತೆ ಕಿವಿಯಾಗಿದ್ದಾರೆ. ಮೊಳಕಾಲ್ಮೂರು...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಸಹಜ. ಸಾಕಷ್ಟು ಜನ ರೈತರ ಬೆಳೆ ನಾಶವಾಗಿದೆ. ಇದೀಗ ಮೂಡಿಗೆರೆ ತಾಲೂಕಿನ ಕಾರ್ ಬೈಲ್ ಗ್ರಾಮದಲ್ಲೂ ರೈತ ಬೆಳೆನಾಶವಾಗಿರೋ ಘಟನೆ ನಡೆದಿದೆ. ಕಾರ್ ಬೈಲ್ ಗ್ರಾಮದ ತೋಟವೊಂದಕ್ಕೆ...

ಪ್ರಮುಖ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಕ್ಸ್ಟ್ ಸಿಎಂ ಯಾರಾಗ್ತಾರೆ ಅನ್ನೋ ರೇಸ್ ನಲ್ಲಿ ತೀರಾ ಹತ್ತಿರದಲ್ಲಿ ಕಾಂಪೀಟೇಷನ್ ಕೊಟ್ಟವರು ಅರವಿಂದ್ ಬೆಲ್ಲದ್. ಸಾಕಷ್ಟು ಜನರು ಸಾಲಿನಲ್ಲಿದ್ರು ಅರವಿಂದ್ ಬೆಲ್ಲದ್...

ಪ್ರಮುಖ ಸುದ್ದಿ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 5 ಜನ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ರನ್ನ ನೇಮಕ ಮಾಡಲಾಗಿದೆ. ವಾರ್ತಾ...

ಪ್ರಮುಖ ಸುದ್ದಿ

  ಸುದ್ದಿಒನ್, ಚಿತ್ರದುರ್ಗ, (ಆ.05) : ಹಿಂದುಳಿದ ವರ್ಗಗಳ ನಾಯಕಿ, ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ...

You May Also Like

ಆರೋಗ್ಯ

ಮಾಹಿತಿ: ಮಂಜುನಾಥ ಯಾದವ್ (97417 38979) ಬೇಳೆಕಟ್ಟು ಸಾರು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಎರಡ್ಮೂರು ದಿನ ಕೂಡ ಈ ಸಾಂಬಾರ್ ತಿನ್ನೋದು ಅಂದ್ರೆ ಟೇಸ್ಟೋ ಟೇಸ್ಟೂ..ಆದ್ರೆ ಕೆಲವೊಬ್ರಿಗೆ ಈ ಸಾಂಬಾರ್ ಮಾಡೋಕೆ...

ಪ್ರಮುಖ ಸುದ್ದಿ

ಮುಂಬೈ : ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದಾರೆ. ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದ್ದು, ಒಂದೊಂದೆ ವಿಚಾರಗಳು ಬಯಲಿಗೆ ಬರ್ತಿವೆ. ಇದೀಗ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ರಾಜ್...

ಆರೋಗ್ಯ

ನಮ್ಮ ಸುತ್ತ ಮುತ್ತ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ವಸ್ತುವನ್ನ ನಾವೂ ನೆಗ್ಲೆಕ್ಟ್ ಮಾಡ್ತೀವಿ. ಚಿಕ್ಕವರಿದ್ದಾಗ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥಗಳನ್ನ ಬೆಳೀತಾ ಬೆಳೀತಾ ಮರೆತೆ ಹೋಗ್ತೀವಿ. ಆದ್ರೆ ಅಂದು ಖುಷಿಗಾಗಿ ತಿನ್ನುವ...

ಪ್ರಮುಖ ಸುದ್ದಿ

ಕಾಬೂಲ್: ಕಂಧರ್ ಪ್ರಾಂತ್ಯದ ಜೀರೊಯ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಹತರಾಗಿದ್ದಾರೆ. ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ...

Copyright © 2021 Suddione. Kannada online news portal

error: Content is protected !!