ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 20 : ಶಿಕ್ಷಣದಿಂದ ಮಾತ್ರ ಕಂದಾಚಾರ, ಮೂಢನಂಬಿಕೆಗಳಿಂದ ಹೊರ ಬರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ಕಿರಣ್‍ಕುಮಾರ್ ಯಾದವ್ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿ ಕೊಳಾಳು ಕದುರೆದೇವರಹಟ್ಟಿಯಲ್ಲಿ ನೆಲೆಸಿರುವ ಕಾಟಲಿಂಗೇಶ್ವರಸ್ವಾಮಿ ಹಾಗೂ ಕದುರೆ ನರಸಿಂಹಸ್ವಾಮಿಯ ದೊಡ್ಡ ದೇವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಾತ್ರೆಗಳನ್ನು ಅದ್ದೂರಿಯಾಗಿ ಆಚರಿಸಿ ದುಂದು ವೆಚ್ಚ ಮಾಡುವ ಬದಲು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವುದು ಮುಖ್ಯ. ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಬಹುದಲ್ಲದೆ. ಮೌಢ್ಯದಿಂದ ದೂರವಿರಲು ನೆರವಾಗಲಿದೆ. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದರಿಂದ ಇತರೆ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆಂದು ಹೇಳಿದರು.
ಅಹೋಬಲ ನರಸಿಂಹಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಜಾತ್ರೆ ಎನ್ನುವುದು ಮನುಷ್ಯರಲ್ಲಿ ಜಾಗೃತಿಯನ್ನು ಮೂಡಿಸುವಂತಿರಬೇಕು. ಕೇವಲ ಪೂಜೆ ಪುನಸ್ಕಾರಕ್ಕಷ್ಟೆ ಜಾತ್ರೆ ಸೀಮಿತವಾಗಿರಬಾರದು. ಮೂಢನಂಬಿಕೆ, ಕಂದಾಚಾರಗಳಿಂದ ದೂರವಿರುವ ಎಚ್ಚರಿಕೆಯನ್ನು ಜಾತ್ರೆಗಳ ಮೂಲಕ ಮೂಡಿಸಿಕೊಳ್ಳಬೇಕೆಂದರು.
ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗೋವಿಂದಪ್ಪ ಮಾತನಾಡುತ್ತ ಜಾತ್ರೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ಸಂದ ಗೌರವ. ಇದರಿಂದ ಬೇರೆ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಲು ಉತ್ತೇಜಿಸಿದಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಿರಣ್‍ಕುಮಾರ್ ಯಾದವ್ ಅಧ್ಯಕ್ಷತೆ ವಹಿಸಿದ್ದರು.
ಗೌರಮ್ಮ ತಿಮ್ಮಯ್ಯ, ಚಿತ್ತಪ್ಪ ಎಂ. ನಿವೃತ್ತ ಪ್ರಾಧ್ಯಾಪಕ ಕೆ.ಪರಮೇಶ್ವರಪ್ಪ, ಚಿತ್ರದುರ್ಗ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ತಿಮ್ಮರಾಯ, ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಬಿ.ಜೆ.ಗಿರೀಶ, ಪೊಲೀಸ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತರಾಜು, ಕೆ.ಚಿಕ್ಕಣ್ಣ, ಗಿರಿಯಪ್ಪ, ಆರ್.ಮಂಜುನಾಥ, ಸಾಹುಕಾರ್ ಚಿತ್ತಪ್ಪ, ಎಂ.ಜಯಪ್ಪ,
ಬಿ.ಡಿ.ತಿಪ್ಪೇಸ್ವಾಮಿ, ಈರಪ್ಪ, ಕದುರಪ್ಪ ಇವರುಗಳು ವೇದಿಕೆಯಲ್ಲಿದ್ದರು.
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 22 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 22) ಹತ್ತಿ ಮಾರುಕಟ್ಟೆ…
ಬೆಳಗಾವಿಯಲ್ಲಿ ಮರಾಠಿ ಪುಂಡರ ನಡವಳಿಕೆಗೆ ಬೇಸತ್ತ ಕಮ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಕನ್ನಡಪರ ಹೋರಾಟಗಾರ…
ಚಿತ್ರದುರ್ಗ. ಮಾ.22: ಜಲಮೂಲ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ…
ಬೆಂಗಳೂರು; ಬೆಳಗಾವಿಯಲ್ಲಿ ಮರಾಠಿಗಳ ಪುಂಡಾಟ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಹಲವು ಸಂಘಟನೆಗಳು ಕೂಡ…
ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ನಮ್ಮ ಆರೋಗ್ಯವನ್ನ ಕಾಪಾಡುತ್ತವೆ. ಆ ಬಗ್ಗೆ ನಮ್ಮ ಹಿರಿಯರು ಈಗಾಗಲೇ ಸಾಕಷ್ಟು ಸಲ…
ಈ ರಾಶಿಯವರಿಗೆ ಆಕಸ್ಮಿಕ ಮದುವೆಯ ಶುಭ ಸುದ್ದಿ ಸಂದೇಶ ಬರಲಿದೆ, ಈ ರಾಶಿಯವರು ಮದುವೆಗೆ ನಿರಾಕರಿಸುವರು, ಶನಿವಾರದ ರಾಶಿ ಭವಿಷ್ಯ…