ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ ಸರ್ಕಾರಿ ಶಾಲೆಗೆ ಜಾಸ್ತಿ ಕೊಡ್ಲಿ ; ಆರ್ ಅಶೋಕ್ ಆಗ್ರಹ

ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಶುರುವಾಗಿದ್ದು, ಸ್ಪೀಕರ್ ಯುಟಿ ಖಾದರ್, ಸರ್ಕಾರಿ ಶಾಲೆಗೆ ಇರುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. 151 ಬುಕ್ ಸ್ಟಾಲ್ ಇದಾವೆ. ಒಂದು ಲೈಬ್ರರಿಗೆ ಸೀಮಿತವಾದ ಪುಸ್ತಕಗಳನ್ನ ಕೊಡುತ್ತೇವೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್ ಕಲಿಯಬೇಕು ಅಂದ್ರೆ ಅದರಲ್ಲಿ ಮಾಹಿತಿ ಇರೋದಿಲ್ಲ. ಹೀಗಾಗಿ ಪುಸ್ತಗಳನ್ನ ಗುರುತು ಮಾಡಿ ಹೇಳಿ ಎಂದು ತಿಳಿಸಿದರು.

ಇದೇ ವೇಳೆ ಆರ್.ಅಶೋಕ್ ಮಾತನಾಡಿ, ಸಭಾಧ್ಯಕ್ಷರೇ ಇದು ಒಳ್ಳೆಯ ಯೋಜನೆ. ಇದು ಒಳ್ಳೆಯ ಯೋಜನೆ. ಶಾಲಾ ಮಕ್ಕಳಿಗೆ, ಲೈಬ್ರರಿಗೆ ಪುಸ್ತಕಗಳು ಸರ್ಕಾರದ ವತಿಯಿಂದ ಹೋಗುವುದು ಕಡಿಮೆ. ಯಾರೋ ದಾನಿಗಳು ಕೊಡೋದು, ಎನ್ಜಿಒ ಗಳು ಕೊಡುವುದನ್ನ ನಾವೂ ನೋಡಿದ್ದೇವೆ. ನಾವ್ಯಾರು ಕೊಟ್ಟಿಲ್ಲ. ಆದರೆ ಸರ್ಕಾರ ಯಾಕೆ ಕಂಜೂಸುತನ ಮಾಡ್ತಾ ಇದೆ. ನಮಗೆ ಕೊಟ್ಟಿರೋದು 2 ಕೋಟಿಯನ್ನು ಅಭಿವೃದ್ಧಿಗೆ ಕೊಟ್ಟಿರೋದು. ಬಜೆಟ್ ಅನೌನ್ಸ್ ಮಾಡುವಾಗ, ಕನ್ನಡದ ಬಗ್ಗೆ ಅಭಿಮಾನವಿದೆ, ಪುಸ್ತಕದ ಬಗ್ಗೆ ಅಭಿಮಾನವಿದೆ ಅಂತಾರೆ. ಅಭಿಮಾನವಿದ್ದರೆ ಈ ಸರ್ಕಾರಕ್ಕೆ, ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ ಜಾಸ್ತಿ ಕೊಡಲಿ ಒಳ್ಳೆಯದಲ್ವಾ.

ಆಗ ಸರ್ಕಾರಕ್ಕೆ ಕಾಳಜಿ ಇದೆ ಎಂಬುದು ಅರ್ಥವಾಗುತ್ತದೆ. ಅದರಲ್ಲಿಯೇ ನೀವೂ ಮೆಂಟೈನ್ ಮಾಡೋದಕ್ಕೆ ಹೋದ್ರೆ ಏನ್ ಬಂತು ಕಾಳಜಿ. ಈಗಾಗಲೇ ಸರ್ಕಾರದ ಬಿಲ್ಡಿಂಗ್ ಗಳಿಗೆ ದುಡ್ಡನ್ನ ಕೊಡ್ತಾ ಇದ್ದೀವಿ. ಅದರಲ್ಲಿಯೇ ಡಿಸ್ಕೌಂಟ್ ಹೊಡೆಯೋದಕ್ಕೆ ನೋಡ್ತಾ ಇದ್ದೀರಾ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರ್ಲಿ, ಮುಖ್ಯಮಂತ್ರಿಗಳಿಗೂ ಒಳ್ಳೆಯ ಹೆಸರು ಬರಲಿ. ನಮ್ಮ ಬಜೆಟ್ ಅನೌನ್ಸ್ ಮಾಡೋದ್ರಲ್ಲೂ ಡಿಸ್ಕೌಂಟ್ ಮಾಡಬೇಡಿ ಎಂದಿದ್ದಾರೆ.

suddionenews

Recent Posts

ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ

ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ, ಈ ರಾಶಿಯವರಿಗೆ ಆದಾಯ ಕುಂಠಿತ, ಸೋಮವಾರದ ರಾಶಿ ಭವಿಷ್ಯ 17 ಮಾರ್ಚ್…

36 minutes ago

ಅದ್ದೂರಿಯಾಗಿ ನೆರವೇರಿದ ಅಂಬಿ‌ ಮೊಮ್ಮಗನ ನಾಮಕರಣ ; ತಾತನ ಹೆಸರು, ಗಣ್ಯರ ಹಾರೈಕೆ, ಯಾರೆಲ್ಲಾ ಬಂದಿದ್ರು..?

ಬೆಂಗಳೂರು; ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನೆರವೇರಿದ್ದು, ಮೊಮ್ಮಗನಿಗೆ ತಾತನ…

10 hours ago

ನಮ್ಮದು ಸಾಮರಸ್ಯವನ್ನು ಎತ್ತಿಹಿಡಿಯುವ ಶಾಂತಿಪ್ರಿಯ ದೇಶ : ಲೆಕ್ಸ್ ಫ್ರೀಡ್ಮನ್ ಜೊತೆ ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್

ಸುದ್ದಿಒನ್ : ಪ್ರಧಾನಿ ಮೋದಿ ಮತ್ತು AI ಸಂಶೋಧಕ ಲೆಕ್ಸ್ ಫ್ರೀಡ್ಮನ್ ನಡುವೆ ಆಸಕ್ತಿದಾಯಕ ಪಾಡ್‌ಕ್ಯಾಸ್ಟ್ ನಡೆಯಿತು. ಸ್ವಲ್ಪ ಸಮಯದ…

11 hours ago

ಕುಡಿಯುವ ನೀರಿಗಾಗಿ ಜಗಳ : ಮುರಿದು ಬಿದ್ದ ಮದುವೆ

ಸುದ್ದಿಒನ್, ಹಿರಿಯೂರು, ಮಾರ್ಚ್. 16  : ಆರತಕ್ಷತೆಯ ನಂತರ ಏರ್ಪಡಿಸಿದ್ದ ಭೋಜನದಲ್ಲಿ ಕೊನೆಗೆ ಬಂದ ಕೆಲವರಿಗೆ ಕುಡಿಯುವ ನೀರು ಸಿಗಲಿಲ್ಲ…

11 hours ago

ಸುನೀತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ಎದುರಾಗಲಿವೆ ಈ ಆರೋಗ್ಯ ಸಮಸ್ಯೆ..!

    ಬೆಂಗಳೂರು; ಕಡೆಗೂ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ಸಮಯ ಹತ್ತಿರವಾಗಿದೆ. ಆದರೆ ಕಳೆದ…

11 hours ago

ನಾಯಕನಹಟ್ಟಿ ಜಾತ್ರೆ : ಬಾರಿ ಮೊತ್ತಕ್ಕೆ ಹರಾಜಾದ ಮುಕ್ತಿ ಬಾವುಟ

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 16 : ಮಧ್ಯ ಕರ್ನಾಟಕದ ಪವಾಡ ಪುರುಷ, ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಅದ್ದೂರಿಯಾಗಿ…

12 hours ago