ರಾಜ್ಯದಲ್ಲಿ ಕೊರೋನಾ ನಿಯಮ ಸರಳೀಕರಣಗೊಳಿಸಲು ಸರ್ಕಾರ ಚಿಂತನೆ

suddionenews
1 Min Read

 

ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಕೋವಿಡ್ ನಿಯಮಗಳನ್ನ ಸರಳೀಕರಣಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿಯನ್ನ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಗಡಿಭಾಗ ಹಾಗೂ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಹೀಗಾಗಿ, ರಾಜ್ಯದಲ್ಲಿ ನಿಯಮ ಸರಳೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ.

1ರಿಂದ 5ರವರೆಗೂ ಶಾಲೆಗಳನ್ನ ಆರಂಭಿಸುವ ಯೋಜನೆ ಮಾಡಲಾಗಿದೆ. ಈ ಸಂಬಂಧ ಶಿಕ್ಷಣ ತಜ್ಞರು ಕೋವಿಡ್ ನಿಯಮಗಳ ಬಗ್ಗೆ ಎರಡು ದಿನಗಳಲ್ಲಿ ಪರಿಣಿತರ ಜೊತೆಗೆ ಚರ್ಚೆ ನಡೆಸಲಾಗುವುದು. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನು, ಬೊಮ್ಮಾಯಿ ಸಿಎಂ ಸೀಟ್ ನವೆಂಬರ್ ನಲ್ಲಿ ಅಂತ್ಯವಾಗುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಿ ಎಂ ಇಬ್ರಾಹಿಂಗೆ ಯಾವಾಗ, ಏನೇನು ಜ್ಞಾನೋದಯ ಆಗುತ್ತೆ ಗೊತ್ತಿಲ್ಲ. ಆತನ ಜೊತೆ ನಾನೇ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ, ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಗೆ ಎರಡು ಕ್ಷೇತ್ರಗಳಲ್ಲಿ ಎರಡೆರಡು ದಿನ ಸಿಎಂ ಮತ್ತು ಯಡಿಯೂರಪ್ಪ ಪ್ರಚಾರ ನಡೆಸಲು ನಿರ್ಧರಿಸುವುದಾಗಿ ಹೇಳಿದ್ದಾರೆ. ಬಿಎಸ್ ವೈ ಕೂಡ ಬರಲು ಒಪ್ಪಿದ್ದು, ಪ್ರಚಾರ ಕೊನೆಯಲ್ಲಿ ಭರ್ಜರಿ ರೋಡ್ ಶೋ ನಡೆಸುವುದಾಗಿ ಸಿಎಂ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *