Connect with us

Hi, what are you looking for?

ಪ್ರಮುಖ ಸುದ್ದಿ

ಕೋವಿಡ್ ಕೇರ್ ಸೆಂಟರ್ ಗಳ ಪ್ರಾರಂಭ ಸರ್ಕಾರದ ಮೊದಲ ಆದ್ಯತೆ; ಸಚಿವ ಬಿ.ಶ್ರೀರಾಮುಲು

ಸುದ್ದಿಒನ್, ಚಿತ್ರದುರ್ಗ, (ಮೇ.25) : ಕೋವಿಡ್-19 ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪನೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 22 ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.

ನಗರದ ತಮಟಕಲ್ಲು ರಸ್ತೆಯಲ್ಲಿನ ಬಿ.ಸಿ.ಎಂ.ಹಾಸ್ಟೆಲ್‍ನಲ್ಲಿ ಜಿಲ್ಲಾಡಳಿತ ಹಾಗೂ ಪ್ರಕಾಶ್ ಸ್ಪಾಂಜ್ ರವರ ಪ್ರಾಯೋಜಕತ್ವದಲ್ಲಿ ಸುಮಾರು 250 ಬೆಡ್ ಸಾಮಾಥ್ರ್ಯದ ಕೋವಿಡ್ ಕೇರ್ ಸೆಂಟರ್ ಹಾಗೂ 20 ಆಕ್ಸಿಜನ್‍ನೆಟೆಡ್ ಬೆಡ್ ಸೌಲಭ್ಯವಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 5,600 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆ ಇದೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಂಡಿದ್ದು, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.

ಕೋವಿಡ್-19 ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ಕಾಪಾಡುವ ನಿಟ್ಟಿನಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳಿರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಿ, ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣ ಪಡಿಸುವ ಕೆಲಸವನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಡೆ ಆಕ್ಸಿಜನ್ ಬೆಡ್ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯ 519 ಹಳ್ಳಿಗಳು ಕೋವಿಡ್ ಸೋಕಿತ ಗ್ರಾಮಗಳಾಗಿದ್ದು ಜನರು ತೊಂದರೆಗೆ ಒಳಗಾಗಿದ್ದು, ಇನ್ನೂ ಮುಂದೆ ಕೋವಿಡ್ ಸೋಂಕು ಹರಡದಂತೆ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಅಗತ್ಯ ಸಹಕಾರ ನೀಡಬೇಕು ಮನವಿ ಮಾಡಿದರು.

ಬ್ಲಾಕ್ ಫಂಗಸ್ ಮತ್ತು ವೈಟ್ ಫಂಗಸ್‍ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೂ 27 ಪ್ರಕರಣಗಳು ವರದಿಯಾಗಿವೆ. ಬ್ಲಾಕ್ ಮತ್ತು ವೈಟ್ ಫಂಗಸ್ ಚಿಕಿತ್ಸೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಔಷಧಿಯನ್ನು ಪೂರೈಕೆ ಮಾಡಲಿದೆ. ಹಾಗಾಗಿ ಜಿಲ್ಲೆಯ ಜನರು ಭಯ, ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ನಗರದ ಬಿವಿಎಸ್‍ಕೆ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ 70 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಮಾಡಿದ್ದು ಇಲ್ಲಿಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು.

ಪ್ರಸ್ತುತ ಇಲ್ಲಿ 68 ಜನರು ದಾಖಲಾಗಿದ್ದು ಈಗಾಗಲೇ ದಾಖಲಾದವರಲ್ಲಿ 37 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇವರಿಗೆ ಊಟ, ವಸತಿ, ಬಿಸಿನೀರು ಹಾಗೂ ಎಲ್ಲಾ ಔಷಧವನ್ನು ಸರ್ಕಾರವೇ ಒದಗಿಸಲಾಗುತ್ತಿದ್ದು ಇವರ ಚಿಕಿತ್ಸೆಗಾಗಿ ಒಬ್ಬರು ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳಿರುವರು ಆದ್ದರಿಂದ ಜನರು ಯಾರು ಆತಂಕಪಡಬಾರದು. ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಪಡೆಯಬೇಕು.

ಯಾರಿಗೆ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲವೊ ಅವರಿಗಾಗಿ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದ್ದು ಜನರು ಇವುಗಳ ಉಪಯೋಗ ಪಡೆದು ತಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿದ ಅವರು ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಇಲ್ಲಿ ಮಹಿಳೆಯರು ಇದ್ದು ಇವರನ್ನು ಮಾತನಾಡಿಸಿ ಧೈರ್ಯ ತುಂಬಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Latest

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

ಪ್ರಮುಖ ಸುದ್ದಿ

ಬೆಂಗಳೂರು :ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೊನೆ ಕ್ಷಣದಲ್ಲಿ ತನ್ನ ಪಾಳಯದ ಬಸವರಾಜ್ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಿ ಇದೀಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ ಬಿ.ಎಸ್.ಯಡಿಯೂರಪ್ಪ. ದೆಹಲಿಯಲ್ಲಿ ಸಚಿವ ಸಂಪುಟ ಕಸರತ್ತು...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!