ಬಿಗ್ ಬಾಸ್ ಮನೆಯಲ್ಲಿ ʻಮಾನಗೆಟ್ಟವರʼ ಜಗಳ.. ಮನೆ ಮಂದಿಯೆಲ್ಲಾ ಶಾಕ್..!

1 Min Read

 

ಬಿಗ್ ಬಾಸ್ ಮನೆಯಲ್ಲಿ ಆಗಾಗ ಜಗಳಗಳು ಆಗುತ್ತಾನೆ ಇರುತ್ತವೆ. ಟಾಸ್ಕ್ ವಿಚಾರಕ್ಕೋ, ಮತ್ತೊಂದು ವಿಚಾರಕ್ಕೋ ಅದು ಹೆಲ್ದಿ ಆರ್ಗ್ಯೂಮೆಂಟ್ ಆಗಿರುತ್ತದೆ. ಆದ್ರೆ ಪ್ರಶಾಂತ್ ಸಂಬರ್ಗಿ ಹಾಗೂ ರಾಜಣ್ಣ ಜಗಳ ಆಡುತ್ತಿರುವುದನ್ನು ನೋಡಿದರೆ ಮನೆಮಂದಿಯೇ ಹೆದರಿಕೊಂಡು ಸುಮ್ಮನೆ ಆಗಿ ಬಿಡುತ್ತಾರೆ. ಬಳಸುವ ಪದ ಹಾಗೂ ಜೋರು ಧ್ವನಿಯಲ್ಲಿ ಮಾತನಾಡುವುದೇ ಮನೆ ಮಂದಿಗೆ ಭಯವನ್ನುಂಟು ಮಾಡಿದೆ.

ಅನುಪಮಾ ವಿಚಾರಕ್ಕೆ ಮನೆ ಬಿಟ್ಟು ಹೊರಟಿದ್ದ ರಾಜಣ್ಣ ಮತ್ತೆ ವಾಪಾಸ್ಸಾಗಿದ್ದಾರೆ. ಈ ವಿಚಾತ ತೆಗೆದು ಸಂಬರ್ಗಿ ಮಾತುಕತೆಯಲ್ಲಿ ಜೋರು ಗಲಾಟೆಯಾಗಿದೆ. ಅನುಪಮಾ ನಿಂತಲ್ಲಿಯೇ ಶಾಕ್ ಆಗಿದ್ದಾರೆ. ಅವರ ಮಾತಿನ ಚಕಮಕಿ ಹೀಗಿತ್ತು:

ರೂಪೇಶ್ ರಾಜಣ್ಣ: ನಡೆದಿರುವ ಅನ್ಯಾಯವನ್ನು ಬಿಟ್ಟು, ನನ್ನನ್ನು ನೆಗಟಿವ್ ಆಗಿ ಪೋಟ್ರೆ ಮಾಡುವುದನ್ನು ಬಿಡಿ ಪ್ರಶಾಂತ್ ಸಂಬರ್ಗಿ.

ಸಂಬರ್ಗಿ: ಓ ಸತ್ಯವಂತ..ರೀ ರೂಪೇಶ್ ರಾಜಣ್ಣ ಅವ್ರೇ..

ರಾಜಣ್ಣ : ಮಾನಗೆಟ್ಟವರ ಥರ ಆಡಬೇಡಿ.

ಸಂಬರ್ಗಿ: ನೀನು ಮಾನಗೆಟ್ಟವನು.

ರಾಜಣ್ಣ: ನಾನು ಸಾವಿರ ಹೇಳ್ತಿನಿ.
ಸಂಬರ್ಗಿ: ನೀನು ನಂಗೆ ಜೋಕರ್ ಥರ ಕಾಣ್ತಾ ಇದ್ದೀಯಾ, ಬಫೂನ್ ಥರ ಕಾಣ್ತಾ ಇದ್ದೀಯಾ.

ರಾಜಣ್ಣ: ಬ್ಯಾಗ್ ಒಳಗೆ ಇಟ್ಟಿದ್ದು ನನಗೆ ಮತ್ತು ಬಿಗ್ ಬಾಸ್ ಗೆ ಬಿಟ್ಟಿದ್ದು.

ಸಂಬರ್ಗಿ: ಮತ್ತೆ ಯಾಕೆ ನಾಟಕವಾಡ್ತೀಯಾ..? ಹೋಗಬೇಕಾಗಿತ್ತು. ಸುಮ್ನೆ ನಾಟಕ.

ರಾಜಣ್ಣ: ನಿಮ್ಮ ಒಳಗಿನ ಬುದ್ದಿ ನಿಮಗೆ ಕೀಳು ಬುದ್ದಿ ಅನ್ನಿಸಲ್ವಾ

ಸಂಬರ್ಗಿ: ಇವ ಮಾತನಾಡೋದಕ್ಕೆ ಹಕ್ಕಿದೆಯಂತೆ.. ನಾವೂ ಮಾತನಾಡೋದಕ್ಕೆ ಹಕ್ಕಿಲ್ಲವಂತೆ

ರಾಜಣ್ಣ: ಮೂರು ಕಾಸಿನ ಚಿಲ್ಲರೆ ಮಗ.

Share This Article
Leave a Comment

Leave a Reply

Your email address will not be published. Required fields are marked *