ರಾಯಚೂರು: ರಾಜಕೀಯ ಪಕ್ಷದ ನಾಯಕರುಗಳು ಯಾವಾಗಲೇ ಭಾಷಣ ಮಾಡಿದರು ಆರೋಪ – ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ. ಆದ್ರೆ ಚುನಾವಣೆ ಇರುವ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಆರೋಪ – ಪ್ರತ್ಯರೋಪ ಮಾಡುವುದು, ವೈಯಕ್ತಿಕವಾಗಿ ಟೀಕೆ ಮಾಡುವುದು ಆರ್ ಪಿ ಆಕ್ಟ್ ಉಲ್ಲಂಘನೆಯಾಗುತ್ತದೆ.
ಇದೇ ಮೇ 5ರಂದು ಮಸ್ಕಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಬಸನಗೌಡ ಯತ್ನಾಳ್, ಭಾಷಣ ಮಾಡಿದ್ದರು. ಅಬ್ಬರದ ಭಾಷಣ ಮಾಡಿ ಆರ್ ಪಿ ಆಕ್ಟ್ ಉಲ್ಲಂಘನೆ ಮಾಡಿದ್ದರು. ಅಬ್ಬರದ ಭಾಷಣ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಈಗ ಮತ್ತೊಂದು ನೋಟೀಸ್ ಜಾರಿಯಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷದ ಹಾವು ಎಂದಿದ್ದರು. ಖರ್ಗೆ ತಾವೇನು ಹೆಬ್ಬಾವಾ ಎಂದಿದ್ದ ಯತ್ನಾಳ್, ರಾಹುಲ್ ಗಾಂಧಿ ಒಬ್ಬ ಅರೇ ಹುಚ್ಚ ಎಂದಿದ್ದರು. ಈ ಭಾಷಣಕ್ಕೆ ಸಂಬಂಧಿಸಿದಂತೆ ಇದೀಗ ನೋಟೀಸ್ ಜಾರಿ ಮಾಡಲಾಗಿದೆ.





GIPHY App Key not set. Please check settings