in ,

ಹಲವೆಡೆ ಹಿಂದೂ ದೇವಾಲಯಗಳನ್ನು ಧ್ವಂಸ ; ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಖಂಡನೆ

suddione whatsapp group join

 

ಸುದ್ದಿಒನ್, ಚಿತ್ರದುರ್ಗ, (ಸೆ.18) : ರಾಜ್ಯದ ಹಲವೆಡೆ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತೊಮ್ಮೆ ವಪರಿಶೀಲಿಸಿ ಕ್ರಮಕೈಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿಶ್ವಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರುನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಉಪವಿಭಾಗ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ / ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ, ಚರ್ಚ, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ, ಸ್ಥಳಾಂತರಿಸುವ, ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವ ಹಿಂದು ಪರಿಷತ್, ಭಜರಂಗದಳ ಗೌರವಿಸುತ್ತದೆ.

ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟನ ಆದೇಶವನ್ನು ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾ ಕೇಂದ್ರದ  ಪ್ರತ್ಯೇಕವಾಗಿ ವಿಮರ್ಶೆಮಾಡಿ ಸಕ್ರಮ, ಸ್ಥಳಾಂತರ, ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರುಗಿಸಬೇಕೆಂದಿದೆ. ಆದರೆ ಮೈಸೂರಿನ ಜಿಲ್ಲಾಡಳಿತ ಮೇಲ್ಕಂಡ ಯಾವುದೇ ಕ್ರಮ ಕೈಗೊಳ್ಳದೇ ಪುರಾತನ ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿರುವುದು ಖಂಡನೀಯ.

ಅಲ್ಲದೆ ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಕೇವಲ ಹಿಂದು ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ, ಮಂಡಳಿಗಳಿಗೆ ತಿಳಿಸದೆ ಏಕಾಏಕಿ ಜೆ.ಸಿ.ಬಿ.ಗಳನ್ನು ತಂದು ಧ್ವಂಸಗೊಳಿಸುತ್ತಿರುವುದನ್ನು ವಿಶ್ವಹಿಂದೂ ಪರಿಷತ್ ಭಜರಂಗದಳವು ತೀವ್ರವಾಗಿ ಖಂಡಿಸುತ್ತದೆ.

ಕಳೆದ 2 ವರ್ಷಗಳಿಂದ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿಇಕಾರಿಗೆ ನಲ್ಲಿ ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿದ್ದು ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜು ರಸ್ತೆಯ ಘೋರಿಯು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ. ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದೆ. ಅದೇ ರೀತಿ ಚಿತ್ರದುರ್ಗ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದ ಬಳಿಯ ಘೋರಿಯು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ.

ಇಲ್ಲಿ ಸಹ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಿಲ್ಲ. ಅದರೆ ಚಿತ್ರದುರ್ಗ ಜಿಲ್ಲಾಡಳಿತವು ಈಗಾಗಲೇ ಹಲವು ಹಿಂದೂ ದೇವಾಲಯಗಳನ್ನ ನೆಲಸಮ ಗೊಳಿಸಿದ್ದರೂ ಘೋರಿಯ ಕಡೆ ಗಮನ ಹರಿಸಿಲ್ಲ.

ಹೀಗೆ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಹಿಂದೂ ದೇವಾಲಯಗಳನ್ನು ಮಾತ್ರ ತೆರವುಗೊಳಿಸುತ್ತಿದ್ದು ಇದು ಹಿಂದೂ ವಿರೋಧಿ ನೀತಿಯೆ ಸರಿ. ಇದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್  ಆದೇಶ ಸರ್ವರಿಗೂ ಸಮಾನವಾಗಿ ಪಾಲನೆಯಾಗದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ಈ ಸಂದರ್ಭದಲ್ಲಿ  ಪಿ. ರುದ್ರೇಶ್ (ಜಿಲ್ಲಾ ಗೋರಕ್ಷಕ್ ಪ್ರಮುಖ್, ವಿ.ಹೆಚ್.ಪಿ.) ಕೇಶವ್ (ಗ್ರಾಮಾಂತರ ಸಂಚಾಲಕ್) ರೋಹಿತ್ (ನಗರ ಉಪಾಧ್ಯಕ್ಷರು ವಿ.ಹೆಚ್.ಪಿ) ಕಾರ್ಯಕರ್ತರಾದ ತೇಜು, ಸಂಪತ್, ಸಂಜಯ್ ಜಾಲಿಕಟ್ಟೆ, ಸ್ವಾಮಿ, ಕಿಶೋರ್, ದೇವು, ಮಲ್ಲೇಶ್, ದೀಪಕ್  ಮುಂತಾದವರು ಹಾಜರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ದಾದಾನನ್ನ ನೆನೆದ ಫ್ಯಾನ್ಸ್..ಉಪ್ಪಿಗೆ ಸ್ಪೆಷಲ್ ಡೇ..ಶೃತಿಗೆ ಸಿಕ್ತು ಶುಭಾಶಯಗಳ ಮಹಾಪೂರ

ರಾತ್ರೋ ರಾತ್ರಿ ವಿಷ್ಣು ಪ್ರತಿಮೆ..ಬೆಳಗ್ಗೆ ನೋಡಿದ್ರೆ ಪೊಲೀಸರು ಏನ್ ಮಾಡಿದ್ರು ಗೊತ್ತಾ..?