ವಿಜೃಂಭಣೆಯಿಂದ ನೆರವೇರಿದ ತುರುವನೂರು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

 

ಸುದ್ದಿಒನ್, ಚಿತ್ರದುರ್ಗ, (ಫೆ. 13) : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಮಹೋತ್ಸವವು ಮಾಘ ನಕ್ಷತ್ರದ ಶುಭ ಮುಹೂರ್ತದಲ್ಲಿ ಸಕಲಮಂಗಲ ವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ಗುರುವಾರ ಬೆಳಿಗ್ಗೆ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ಜಾತ್ರೆಯ ದಿನವಾದ ಇಂದು (ಗುರುವಾರ) ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ದೃಶ್ಯ

ಗೋಪುರಕ್ಕೆ ಕಳಸಾರೋಹಣ ಹಾಗೂ ವಿಶೇಷ ಪೂಜೆ ನೆರವೇರಿಸಿ, ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತೇರಿಗೆ ದೊಡ್ಡ ಗಾತ್ರದ ಹೂವಿನ ಹಾರ ಮತ್ತು ಬಾವುಟಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ನಂತರ ತೆಂಗಿನಕಾಯಿ ಹೊಡೆದು ನೆರೆದಿದ್ದ ಭಕ್ತ ಸಮೂಹ ಭಕ್ತಿ ಸಮರ್ಪಿಸಿದರು.

ದೇವರಿಗೆ ಹಾಕಿದ್ದ ಹಾರಗಳ ಹರಾಜು ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ 11 ಗಂಟೆಗೆ ತೇರನ್ನು ಸಾವಿರಾರು ಭಕ್ತರು ಎಳೆದು ಸಂಭ್ರಮಿಸಿದರು. ಅಡವಿ ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ತೇರನ್ನು ಎಳೆದರು. ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಮುಂತಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಭಕ್ತರು ತೇರಿಗೆ ಬಾಳೆ ಹಣ್ಣು ಎಸೆದ ಧನ್ಯತಾ ಭಾವ ಮೆರೆದರು. ತುರುವನೂರು, ಕೂನಬೇವು, ಬೆಳಗಟ್ಟ, ದೊಡ್ಡಘಟ್ಟ, ಕಡಬನಕಟ್ಟೆ, ಮುಸ್ಟೂರು, ಬಂಗಾರಕ್ಕನಹಳ್ಳಿ, ಹವಳೇನಹಳ್ಳಿ, ಚಿಕ್ಕಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕಾಯಿ-ಕರ್ಪೂರ, ಮುಡಿಪು ಸಮರ್ಪಿಸಿದರು. ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಏರಪಡಿಸಲಾಗಿತ್ತು.

ತೇರು ಮತ್ತು ದೇವಸ್ಥಾನದ ಮುಂದೆ ನಿಂತು ಭಕ್ತರು ಮೊಬೈಲ್‌ ನಲ್ಲಿ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದರು.ಮುಂಜಾಗ್ರತೆ ಕ್ರಮವಾಗಿ ಜಾತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ವರ್ಷದ ವಿಶೇಷ : ದೇವಾಲಯದ ಆವರಣದಲ್ಲಿ ನೂತನವಾಗಿ ಮಂಟಪವನ್ನು ಗ್ರಾಮದ ಭಕ್ತರಾದ ಮೂಲಂಗಿ ರಾಮಕೃಷ್ಣಾರೆಡ್ಡಿ ಯವರ ಸಹಕಾರದಿಂದ ನಿರ್ಮಿಸಲಾಗಿದೆ. ಅತ್ಯಾಕರ್ಷಕವಾದ ಮಂಟಪಕ್ಕೆ ವಿದ್ಯುತ್ ದೀಪಗಳು ಮತ್ತು ವಿಶೇಷ ಬಗೆಬಗೆಯ ಹೂವುಗಳಿಂದ ಅಲಂಕರಿದ್ದು ಭಕ್ತರ ಗಮನ ಸೆಳೆಯಿತು.

ಮುಖ್ಯ ಅತಿಥಿಗಳಿಗೆ ಸನ್ಮಾನ : ಈ ವರ್ಷದ ಪ್ರಮುಖ ಆಕರ್ಷಣೆ ಊರಿನ ಹೊರವಲಯದಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ವಿರಾಟ್ ಆಂಜನೇಯಸ್ವಾಮಿ ರೇಖಾ ಚಿತ್ರವನ್ನು ನಿರ್ಮಿಸುವ ಮೂಲಕ ವಿಶ್ವದ ಗಮನ ಸೆಳೆದ ಇದೇ ಊರಿನವರಾದ ಮಂಜುನಾಥ ರೆಡ್ಡಿಯವರನ್ನು ಮತ್ತು ಮಂಕಿಮ್ಯಾನ್ ಎಂದೇ ಹೆಸರು ಪಡೆದಿರುವ ಸಾಹಸಿ ಜ್ಯೋತಿರಾಜ್ ಅವರನ್ನು ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

suddionenews

Recent Posts

ನಿನ್ನೆ ಇಳಿಕೆಯಾಗಿದ್ದ ಚಿನ್ನ ಇಂದು ಏರಿಕೆ : ಎಷ್ಟಿದೆ ಬೆಲೆ..?

ಬೆಂಗಳೂರು:  ಚಿನ್ನದ ದರದಲ್ಲಿ ಏರಿಳಿತ ಮುಂದುವರೆದಿದೆ. ಒಂದು ದಿನ ಏರಿಕೆಯಾದ್ರೆ ಮರು ದಿನವೇ ಏರಿಕೆಯಾಗುತ್ತಿದೆ. ನಿನ್ನೆಯಷ್ಟೇ 70 ರೂಪಾಯಿ ಅಷ್ಟು…

2 hours ago

ಮೆಟ್ರೋ ಪ್ರಯಾಣಿಕರ ಇಳಿಕೆ : BMRCLಗೆ ಸಿಎಂ ಸೂಚನೆ : ದರ ಇಳಿಕೆಯ ನಿರೀಕ್ಷೆ..!

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಾರಿ ಹಿಡಿಯುತ್ತಿದ್ದರು ಜನ. ಹಾಗಂತ ಶ್ರೀಮಂತರ್ಯಾರು ಕಾರು ಬಿಟ್ಟು ಮೆಟ್ರೋ…

4 hours ago

ಜಾನಪದ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರೆ ಬೊಮ್ಮಗೌಡ ನಿಧನ..!

ಕಾರವಾರ: ಹಾಡುಹಕ್ಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಇಂದು ವಿಧಿವಶರಾಗಿದ್ದಾರೆ. ಸುಕ್ರೆ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ…

5 hours ago

ಈ ವರ್ಷವೂ ಉತ್ತಮ ಫಸಲು : ಮೈಲಾರ ಕಾರ್ಣಿಕದಲ್ಲಿ ನುಡಿದ ಭವಿಷ್ಯವೇನು..?

ವಿಜಯಪುರ: ಮೈಲಾರ ಕಾರ್ಣಿಕಕ್ಕೆ ಸಾಕಷ್ಟು ಜನ ಕಾಯುತ್ತಿರುತ್ತಾರೆ. ಈ ದೈವವಾಣಿಯಿಂದ ರಾಜ್ಯದ ಮುಂದಿನ ಭವಿಷ್ಯ ಏನಾಗಲಿದೆ ಎಂದು ಅಂದಾಜಿಸುತ್ತಾರೆ. ನಿನ್ನೆಯಿಂದಾನೇ…

5 hours ago

ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ : ಈ ವರ್ಷದಿಂದ ಹೊಸ ಮುರುಡಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಎಂದರೆ…

5 hours ago

ಇಂದು ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರ ಬ್ರಹ್ಮರಥೋತ್ಸವ : ಇದರ ಹಿನ್ನೆಲೆ ಗೊತ್ತಾ..?

  ಸುದ್ದಿಒನ್, ಹಿರಿಯೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಇಂದು (ಗುರುವಾರ,…

9 hours ago