ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಅವಮಾನ ಮಾಡಿದ ಪುಂಡರು..!

suddionenews
0 Min Read

ಬೆಳಗಾವಿ: ಜಿಲ್ಲೆಯಲ್ಲಿ ಕನ್ನಡಕ್ಕೆ ಆಗಾಗ ಅವಮಾನ ಎದುರಾಗುತ್ತಲೆ ಇದೆ. ಕನ್ನಡ ಬಾವುಟ ಸುಟ್ಟು ಕನ್ನಡಕ್ಕೆ ಅವಮಾನ ಮಾಡಿದ ಘಟನೆಯೇ ಇನ್ನು ಮಾಸಿಲ್ಲ. ಇದರ ಬೆನ್ನಲ್ಲೇ ಇದೀಗ ಮತ್ತೆ ಕನ್ನಡಕ್ಕೆ ಅವಮಾನವಾದಂತ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಕನ್ನಡ ಅಕ್ಷರವಿರುವ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಆ ನಾಮಫಲಕದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿಯನ್ನ ಕನ್ನಡದಲ್ಲಿ ಬರೆಯಲಾಗಿತ್ತು. ಅದೇ ನಾಮಫಲಕಕ್ಕೆ ಮಸಿ ಬಳಿಯಲಾಗಿದೆ.

ಈ ಮೂಲಕ ಮತ್ತೆ ಕನ್ನಡಿಗರನ್ನ ಕೆಣಕಿದ್ದಾರೆ ನಾಡದ್ರೋಹಿಗಳು. ಈ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *