in

ಶಿವಚಾರ್ಯರ ಸಮಾಧಿಯನ್ನ ಮ್ಯೂಸಿಯಂ ಮಾಡಲು ಪ್ಲಾನ್.. ಸಾಧನೆಯನ್ನ ಯುವ ಪೀಳಿಗೆಗೆ ತಿಳಿಸುವ ಉದ್ದೇಶ : ಶಿವಮೂರ್ತಿ ಶಿವಾಚಾರ್ಯ

suddione whatsapp group join

ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ: ಲಿಂಗೈಕ್ಯ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಮಾಧಿಯನ್ನು ಮುಂದಿನ ದಿನಗಳಲ್ಲಿ ಮ್ಯೂಸಿಯಂನ್ನಾಗಿ ಮಾಡಿ ಅವರ ಸಾಧನೆ ಮತ್ತು ಮಠ ಕಟ್ಟಲು ಕಷ್ಟಪಟ್ಟಿದ್ದು, ಅವರೊಡನೆ ಶ್ರೀಮಠದ ಭಕ್ತಾಧಿಗಳು ನೀಡಿದ ಸಹಕಾರವನ್ನು ಸ್ಮರಿಸುವ ಮಾಹಿತಿಯನ್ನು ಇಂದಿನ ಯುವ ಪೀಳಿಗೆಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುವುದು ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಸಿರಿಗೆರೆಯಲ್ಲಿರುವ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶುಕ್ರವಾರ ನಡೆಯಲಿರುವ ಲಿಂಗ್ಯಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 29 ನೇ ಶ್ರದ್ದಾಂಜಲಿಯ ಪ್ರಯುಕ್ತ ಗುರುವಾರ ಮುತ್ತುಗದೂರಿನಲ್ಲಿರುವ ಗುರುಗಳ ವಿಶ್ರಾಂತಿ ಐಕ್ಯ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದೆಹಲಿಯಲ್ಲಿ ಪಿ.ಹೆಚ್.ಡಿ.ವ್ಯಾಸಂಗ ಮಾಡುತ್ತಿರುವ ನಮ್ಮ ಮಠಕ್ಕೆ ಸಂಬಂಧಿಸಿದ ನವೀನ್ ಎನ್ನುವ ಯುವಕ ವಿಶ್ರಾಂತಿ ಧಾಮ ಉಪೇಕ್ಷೆಗೆ ಒಳಗಾಗಿರುವ ವೀಡಿಯೋ ತುಣುಕನ್ನು ನನಗೆ ವಾಟ್ಸ್‍ಪ್ ಮಾಡಿದ ಕೂಡಲೆ ಅದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಸ್ಥಳೀಯರು ಇದನ್ನು ಗಮನಿಸಲಿಲ್ಲವಲ್ಲ. ಅದಕ್ಕಾಗಿ ಕೂಡಲೆ ಸುಣ್ಣ ಬಣ್ಣ ಬಳಸಿ ಪುನರುಜ್ಜೀವನಗೊಳಿಸಲಾಯಿತು. ಮುಂದೆ ಇದನ್ನು ಖ್ಯಾತ ಮ್ಯೂಸಿಯಂನ್ನಾಗಿ ಮಾಡಿ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಹಿರಿಯ ಗುರುಗಳು ಮಠ ಕಟ್ಟುವ ಆರಂಭದ ದಿನಗಳಲ್ಲಿ ಸಾಕಷ್ಟು ಕಟ್ಟಪಟ್ಟಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಮಠವೂ ಬೇಡ. ಇದರ ಸಹವಾಸವೂ ಬೇಡ ಎಂದು ಓಡಿ ಹೋಗುತ್ತಿದ್ದರು. ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರಲ್ಲಿ ಸಂಸ್ಕøತದ ಬಗ್ಗೆ ಹೆಚ್ಚಿನ ಒಲವಿದ್ದುದರಿಂದ ಬನಾರನ್ ಮತ್ತು ಕಾಶಿಗೆ ಸಂಸ್ಕøತ ಕಲಿಯುವುದಕ್ಕಾಗಿ ನನ್ನನ್ನು ಕಳಿಸಿದರು ಎಂದು ಸ್ಮರಣೆ ಮಾಡಿಕೊಂಡರು.

ಲಿಂಗೈಕ್ಯ ಗುರುಗಳ ಮಾರ್ಗದರ್ಶನದಲ್ಲಿ ಇಂದಿಗೂ ಮಠ ಮುನ್ನಡೆಯುತ್ತಿರುವುದರಿಂದ ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ಹಾಗೂ ಶಿಕ್ಷಣ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಕೋವಿಡ್‍ನಂತ ಅಪಾಯಕಾರಿ ಸ್ಥಿತಿಯಲ್ಲಿ ನಮ್ಮ ಸಂಸ್ಥೆಯಲ್ಲಿಯೇ ಕೊಠಡಿಗಳನ್ನು ನೀಡಿ ಚಿಕಿತ್ಸೆಗೆ ನೆರವಾಗಿದ್ದೇವೆ. ಅದಕ್ಕಾಗಿ ಇಂದಿನ ಶ್ರದ್ದಾಂಜಲಿ ಸಮಾರಂಭದಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಭಕ್ತರಿಗೆ ಸೂಚಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಲಿಂಗೈಕ್ಯ ಹಿರಿಯ ಜಗದ್ಗುರುಗಳು ಹಾದಿಯಲ್ಲಿ ನಡೆಯುತ್ತಿರುವ ಈಗಿನ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಮೊದಲಿನಂತೆಯೇ ಶಿಕ್ಷಣವನ್ನು ಎಲ್ಲರೂ ಪಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಅವರ ಕಾಲದಲ್ಲಿ ಕೆರೆ, ಕಟ್ಟೆ, ಚೆಕ್ ಡ್ಯಾಂಗಳಿಗೆ ಹೆಚ್ಚಿನ ಒತ್ತು ನೀಡಿ. ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಉಪಯೋಗವಾಗುವ ಅನೇಕ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆಂದು ನೆನಪು ಮಾಡಿಕೊಂಡರು.

ಬಿಜೆಪಿ.ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಮಾತನಾಡಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಠವಾದಿಗಳಾಗಿದ್ದರಿಂದ ಹಿಡಿದ ಕೆಲಸವನ್ನು ಬಿಡದೆ ಹಗಲಿರುಗಳು ಶ್ರಮಪಟ್ಟು ಮಠ ಕಟ್ಟಿ. ದೇಶ ವಿದೇಶಗಳಲ್ಲಿಯೂ ಸಿರಿಗೆರೆ ಇದೆ ಎನ್ನುವುದನ್ನು ತೋರಿಸಿದ್ದಾರೆ. ಅವರ ಮಾರ್ಗದರ್ಶನದಂತೆ ಈಗಿನ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಎಲ್ಲಾ ಜಾತಿ ವರ್ಗದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿರುವುದು ದೊಡ್ಡ ಸಾಧನೆ ಎಂದು ಗುಣಗಾನ ಮಾಡಿದರು.

ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್ ಮಾತನಾಡಿ ಹೊಳಲ್ಕೆರೆ ಪಟ್ಟಣದಲ್ಲಿ ಎಲ್ಲರ ಅನುಕೂಲಕ್ಕಾಗಿ ಆಧುನಿಕ ರೀತಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸುವಂತೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಲ್ಲಿ ಮನವಿ ಮಾಡಿ. ಇದಕ್ಕೆ ಭಕ್ತರ ಸಹಕಾರವೂ ಇರುತ್ತದೆ ಎಂದು ಹೇಳಿದ್ದಕ್ಕೆ ಈ ವರ್ಷದಲ್ಲಿಯೇ ಕಲ್ಯಾಣ ಮಂಟಪ ನಿರ್ಮಿಸುವುದಾಗಿ ತಿಳಿಸಿದರು.
ಹೆಚ್.ಇಂದ್ರಪ್ಪ, ಎಂ.ಕೆ.ರುದ್ರಪ್ಪ, ನುಲೇನೂರು ಈಶ್ವರಪ್ಪ, ಶಿವಕುಮಾರ್, ನಟರಾಜ್, ದೇವರಾಜ್, ಚಿದಾನಂದ್, ಪ್ರಕಾಶ್ ಸೇರಿದಂತೆ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

17 ತಿಂಗಳ ಬಳಿಕ ಸವದತ್ತಿ ಯಲ್ಲಮ್ಮ ದರ್ಶನ ಕೊಡಲಿದ್ದಾಳೆ..!

6 ವರ್ಷಗಳಿಂದ ಇಂಗ್ಲಿಷ್ ಟೀಚರ್ ಇಲ್ಲ..ಈ ಬಾರಿಯಾದರೂ ಇಂಗ್ಲೀಷ್ ಶಿಕ್ಷಕರನ್ನ ನೀಡಲು ವಿದ್ಯಾರ್ಥಿಗಳ ಮನವಿ..!