Connect with us

Hi, what are you looking for?

ಪ್ರಮುಖ ಸುದ್ದಿ

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ನಿಂದ ಮೆಚ್ಚುಗೆ ಪಡೆದ ಕನ್ನಡದ ಸಿಂಗರ್…!

ಕನ್ನಡದ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಅಪ್ರತಿಮ ಪ್ರತಿಭೆ ನಿಹಾಲ್ ತಾವ್ರೋ.. ಮೂಲತಃ ಮಂಗಳೂರಿನವರಾದ ನಿಹಾಲ್, ಸರಿಗಮಪ ಶೋನಲ್ಲಿ ಭಾಗಿಯಾಗಿ ಫೈನಲ್ ವರೆಗೆ ತಲುಪಿದ್ದರು. ಆದ್ರೆ ಸರಿಗಮಪ ಟ್ರೋಫಿಗೆ ಮುತ್ತಿಡಲು ಆಗಲಿಲ್ಲ. ಹಾಗಂತ ನಿಹಾಲ್ ಗೆ ಅವಕಾಶವೇನು ಕಡಿಮೆ ಸಿಗಲಿಲ್ಲ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲಿಯೂ ಅವಕಾಶ ಗಿಟ್ಟಿಸಿಕೊಂಡು ಇಂದು ಹಿಂದಿ ಸಿಂಗಿಂಗ್ ಶೋನಲ್ಲಿ ಬಾಲಿವುಡ್ ಸಿಂಗರ್ಸ್ ನಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ತಮ್ಮ ಅದ್ಭುತ ಗಾಯನದ ಮೂಲಕ ಇಂಡಿಯನ್ ಐಡಲ್ ರಿಯಾಲಿಟಿ ಶೋನ ತೀರ್ಪುಗಾರರಾದ
ನೇಹಾ ಕಕ್ಕರ್, ವಿಶಾಲ್ ದದ್ಲಾನಿ, ಹಿಮೇಶ್ ರೇಶ್ಮಿಯಾನಿಂದ ಈಗಾಗ್ಲೇ ಶಬ್ಬಾಸ್ ಎನಿಸಿಕೊಂಡಿದ್ದಾರೆ. ಇದೀಗ ಸಂಗೀತ ಮಾಂತ್ರಿಕಾ ಎ.ಆರ್.ರೆಹಮಾನ್ ಅವರು ನಿಹಾಲ್ ಗಾಯನ ಮೆಚ್ಚುಗೊಂಡಿದ್ದಾರೆ.

‘ಇಂಡಿಯನ್ ಐಡಲ್’ 12ರ ಶೋನಲ್ಲಿ ಎಆರ್ ರೆಹಮಾನ್ ಗೆಸ್ಟ್ ಆಗಿ ಆಗಮಿಸಿದ್ದರು. ಸ್ಪರ್ಧಿಗಳು ಎ.ಆರ್. ರೆಹಮಾನ್ ನೋಡಿ ಸಖತ್ ಖುಷಿಪಟ್ಟಿದ್ದಾರೆ. ಎಲ್ಲ ಸ್ಪರ್ಧಿಗಳ ಹಾಡನ್ನು ಕೇಳಿದ ರೆಹಮಾನ್ ಅವರು ಒಂದಷ್ಟು ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ..

ನಿಹಾಲ್ ತಾವ್ರೊ ‘ರೋಜಾ ಜಾನೆಮನ್’ ಹಾಡನ್ನು ಹಾಡಿದ್ದರು. ಈ ಹಾಡಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ತುಂಬ ಚೆನ್ನಾಗಿ ಹಾಡಿದ್ದೀಯಾ ಎಂದು ರೆಹಮಾನ್ ನಿಹಾಲ್ಗೆ ಹೇಳಿದ್ದಾರೆ. ಈ ಹಾಡಿನ ಬಗ್ಗೆ ತುಂಬ ನೆನಪಿದೆ. ಈ ಹಾಡನ್ನು ತಮಿಳಿನಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ತುಂಬ ನಿರರ್ಗಳವಾಗಿ ಹಾಡಿದ್ದರು. ನಿಮಗೆ ನಾಲಿಗೆ ಸರಿಯಾಗಿ ಹೊರಡುತ್ತಿಲ್ಲ. ಹೀಗಾಗಿ ಚೆನ್ನಾಗಿ ಹಾಡಿದ್ದೀರಿ ಎಂದು ರೆಹಮಾನ್ ನಿಹಾಲ್ ತಾವ್ರೊಗೆ ಹೇಳಿದ್ದಾರೆ

ಬಳಿಕ ನಿಹಾಲ್, ನಾನು ನಿಮ್ಮ ದೊಡ್ಡ ಅಭಿಮಾನಿ, ಇಂಡಿಯನ್ ಐಡಲ್ನಲ್ಲಿರುವ ಎಲ್ಲರೂ ನಿಮ್ಮ ಅಭಿಮಾನಿಗಳು. ಈಗಾಗಲೇ ಸಾಕಷ್ಟು ಬಾರಿ ನಿಮ್ಮ ಲೈವ್ ಶೋಗಳನ್ನು ನೋಡಿದ್ದೇನೆ. ಅಲ್ಲಿ ಒಂದೇ ಬಾರಿಗೆ ಎಲ್ಲ ಸಂಗೀತ ಉಪಕರಣ ನುಡಿಸುತ್ತೀರಿ, ಇದು ಹೇಗೆ ಸಾಧ್ಯ? ಅಂತ ನಿಹಾಲ್ ರೆಹಮಾನ್ಗೆ ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ರೆಹಮಾನ್, ನಾನು ಚಿಕ್ಕವಳಿದ್ದಾಗಲೇ ನನ್ನ ತಂದೆ ನನಗಾಗಿ ಸಾಕಷ್ಟು ಉಪಕರಣ ಬಿಟ್ಟು ಹೋಗಿದ್ದರು. 9ನೇ ವಯಸ್ಸಿನಲ್ಲಿದ್ದಾಗ ನನ್ನ ಬಳಿ 5 ಉಪಕರಣ ಇತ್ತು. ಅವುಗಳನ್ನು ನುಡಿಸುತ್ತ ಕಲಿಯುತ್ತ ಹೋದೆ. 13ನೇ ವಯಸ್ಸಿನಲ್ಲಿಯೇ ದೂರದರ್ಶನದಲ್ಲಿ ಉಪಕರಣ ನುಡಿಸುತ್ತಿದ್ದೆ ಎಂದು ಎಆರ್ ರೆಹಮಾನ್ ತಿಳಿಸಿದ್ದಾರೆ.

ಅಂದಹಾಗೇ ನಿಹಾಲ್, ಗಿಣಿರಾಮ, ಜೊತೆ ಜೊತೆಯಲಿ, ನನ್ನರಸಿ ರಾಧೆ, ಯಾರಿವಳು ಮುಂತಾದ ಸೀರಿಯಲ್ ಗಳ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ಅಲ್ಲದೇ ಲವ್ ಮಾಕ್ಟೇಲ್ ಸಿನಿಮಾದಲ್ಲಿ ‘ನೀನೆ ಎಂದಿಗೂ’, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ‘ನಾ ಹುಡುಕುವ ನಾಳೆ’, ಗಿರ್ಗಿಟ್ ಸಿನಿಮಾದಲ್ಲಿಯೂ ಹಾಡು ಹಾಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕನ್ನಡ ಚಿತ್ರರಂಗದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರಿಗೆ ಕೊರೋನಾ ಸೋಂಕು ತಗುಲಿದೆ. ಕೊರೊನಾ ಪಾಸಿಟಿವ್ ವರದಿ ಬಂದ ಕಾರಣ ತಕ್ಷಣ ಜನ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅರ್ಜುನ್...

ಪ್ರಮುಖ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ಮ್ಯೂಸಿಕ್ ಡೈರೆಕ್ಟರ್ ವೀಣಾ ವಿದ್ವಾಂಸ ಚಂದ್ರಶೇಖರ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು ಎಂಟು ವರ್ಷಗಳ ಬಳಿಕ ಕೋರ್ಟ್ ಚಂದ್ರಶೇಖರ್ ಗೆ ಶಿಕ್ಷೆ ಪ್ರಕಟಿಸಿದೆ. ಮ್ಯೂಸಿಕ್ ಡೈರೆಕ್ಟರ್...

error: Content is protected !!