ಯುಗಾದಿ ಅಮವಾಸ್ಯೆ ದಿನವೇ ಭೀಕರ ಅಪಘಾತ : ಮೂವರು ಸಾವು, 6 ಮಂದಿಗೆ ಗಂಭೀರ ಗಾಯ

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಚಳ್ಳಕೆರೆ, ಮಾರ್ಚ್. 29 : ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಫ್ಯಾಕ್ಟರಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ಟೆಂಪೋ ಟ್ರಾವೆಲರ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಆರು ಮಂದಿಗೆ ಗಂಭೀರ ಗಾಯಗಳಾಗಿವೆ.

ಬೆಂಗಳೂರಿನಿಂದ ತಮ್ಮ ಗ್ರಾಮವಾದ ತಳಕು ಜೆಮ್ಲಾ ನಾಯಕನಹಟ್ಟಿ ಗ್ರಾಮಕ್ಕೆ ಟಿ.ಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ವಾಹನ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ‌ವೇಳೆ ಟಿ.ಟಿ ವಾಹನದಲ್ಲಿ ಒಟ್ಟು ಚಾಲಕ ಸೇರಿದಂತೆ ಒಟ್ಟು 10 ಮಂದಿ ಇದ್ದು ಇವರಲ್ಲಿ ಕುಮಾರ ನಾಯ್ಕ್ (46 ವರ್ಷ) ಶಂಕರ್ ಬಾಯಿ (65) ಮತ್ತು ಶ್ವೇತ ಎ.(38) ಮೃತರು. ಗಾಯಳುಗಳಾದ ಲಕ್ಷ್ಮೀ ಬಾಯಿ,(75) ಪ್ರಶಾಂತ (38) ಶೈಲಜ (38), ಪುಷ್ಪವತಿ(19) ಟಿ.ಕೆ.ಪ್ರೀತಮ್ ಕುಮಾರ್ (16) ತಿಪ್ಪೇಸ್ವಾಮಿ(43) ಯವರಿಗೆ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

suddionenews

Recent Posts

ಈ ಸಮಸ್ಯೆಗಳಿರುವವರು ಖರ್ಜೂರ ತಿನ್ನಲೇಬಾರದು…!

ಸುದ್ದಿಒನ್ : ಖರ್ಜೂರ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ, ಇದರಿಂದ ಕೇವಲ ಪ್ರಯೋಜನಗಳು ಮಾತ್ರ ಇದೆ ಎಂದು ನೀವು…

4 hours ago

ಈ ರಾಶಿಯವರಿಗೆ ಲೇಟ್ ಆದರೂ ಪರವಾಗಿಲ್ಲ ಒಳ್ಳೆ ಸಂಗಾತಿ ಸಿಗುವರು

ಈ ರಾಶಿಯವರಿಗೆ ಲೇಟ್ ಆದರೂ ಪರವಾಗಿಲ್ಲ ಒಳ್ಳೆ ಸಂಗಾತಿ ಸಿಗುವರು, ಈ ರಾಶಿಯ ದಂಪತಿಗಳಿಗೆ ಸಂತಾನ ಫಲ, ಬುಧವಾರದ ರಾಶಿ…

6 hours ago

ರಾಜ್ಯದಲ್ಲಿ ಡಿಸೇಲ್ ದರ ಏರಿಕೆ ; ಇಂದು ಮಧ್ಯರಾತ್ರಿಯಿಂದಾನೇ ನೂತನ ದರ ಅನ್ವಯ, ಎಷ್ಟು ಏರಿಕೆಯಾಗಲಿದೆ..?

ಬೆಂಗಳೂರು; ಇಂದಿನಿಂದ ರಾಜ್ಯದಲ್ಲಿ ಹಲವು ಬದಲಾವಣೆಗಳು ಆಗಿವೆ. ಹಲವು ವಸ್ತುಗಳ ದರ ಏರಿಕೆಯೂ ಆಗಿದೆ. ಇದರ ಬೆನ್ನಲ್ಲೇ ಡಿಸೇಲ್ ದರವೂ…

13 hours ago

ಶ್ರೀ ಸದ್ಗುರು ಎರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವ ನಿಷೇಧ : ಯಾಕೆ ಗೊತ್ತಾ ? ಜಿಲ್ಲಾಧಿಕಾರಿ ಆದೇಶದಲ್ಲೇನಿದೆ ?

ಬಳ್ಳಾರಿ,ಏ.01 :‌ ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದಲ್ಲಿ ಏ.04 ರಂದು ನಡೆಯುವ ಶ್ರೀ ಸದ್ಗುರು ಎರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವನ್ನು ಕರ್ನಾಟಕ…

16 hours ago

ಅಂಬೇಡ್ಕರ್ ಜಯಂತಿ : ಅದ್ದೂರಿ ಹಾಗೂ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

ಚಿತ್ರದುರ್ಗ.ಎಪ್ರಿಲ್.01: ಮುಂಬರುವ ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಲು ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ…

16 hours ago

ಸಾರ್ವಕಾಲಿಕ ದಾಖಲೆ ತಲುಪಿದ ಚಿನ್ನದ ಬೆಲೆ : ಲಕ್ಷ ರೂಪಾಯಿ ಗಡಿ ದಾಟುತ್ತಾ ?

ಸುದ್ದಿಒನ್ : ಮಂಗಳವಾರ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನದ…

16 hours ago