in

ಮೈಸೂರು ಆಯ್ತು ಈಗ ಬೆಳಗಾವಿಯಲ್ಲೂ ದೇವಸ್ಥಾನ ತೆರವಿಗೆ ಮುಂದಾದ ಸರ್ಕಾರ..!

suddione whatsapp group join

ಬೆಳಗಾವಿ: ದೇವರೆಂದರೆ, ದೇವಸ್ಥಾನಗಳೆಂದರೆ ಹಿಂದೂಗಳಿಗೆ ಭಯ-ಭಕ್ತಿ-ಗೌರವ ಇದ್ದೇ ಇದೆ. ದೇವಸ್ಥಾನಕ್ಕೆ ಸ್ವಲ್ಪ ಏರುಪೇರಾದ್ರೆನೇ ಏನಾದರೂ ತೊಂದರೆಯಾದರೆ ಎಂದು ಭಯ ಪಡುವ ಜನರಿರುವಾಗಾ ದೇವಸ್ಥಾನಗಳನ್ನೇ ಸಂಪೂರ್ಣವಾಗಿ ಕೆಡವಿದ್ರೆ ಜನರ ಮನಸ್ಥಿತಿ ಏನಾಗಬೇಡ. ಮೈಸೂರಲ್ಲಾಗಿದ್ದು ಅದೇ. ಸುಪ್ರೀಂ ಆದೇಶ ನೀಡಿದೆ ಅಂತ ದೇವಸ್ಥಾನಗಳನ್ನ ಕೆಡವಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದೀಗ ಮೈಸೂರು ನಗರದ ಬೆನ್ನಲ್ಲೇ ಬೆಳಗಾವಿಯಲ್ಲೂ ದೇವಸ್ಥಾನಗಳ ತೆರವಿಗೆ ಮುಂದಾಗಿದೆ ರಾಜ್ಯ ಸರ್ಕಾರ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 46 ದೇವಸ್ಥಾನಗಳ ತೆರವಿಗೆ ಮುಂದಾಗಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸ್ಥಳೀಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆ ಬಳಿಕ ತೆರವು ಕಾರ್ಯ ಮಾಡಲಾಗುವುದು. 39 ದೇವಸ್ಥಾನಗಳನ್ನು ಗಣೇಶ ಚತುರ್ಥಿಯ ದಿನ ಮುಗಿದ ಮೇಲೆ ತೆರವು ಮಾಡಬೇಕೆಂದುಕೊಂಡಿದ್ದೆವು. ನಿಪ್ಪಾಣಿಯಲ್ಲಿ ದೇವಸ್ಥಾನಗಳ ಸ್ಥಳಾಂತರ ಮಾಡಬೇಕಾಗಿದೆ. ಸ್ಥಳಾಂತರ ಮಾಡಿದ್ದಕ್ಕೆ ಇಲ್ಲಿವರೆಗೂ ಯಾರು ವಿರೋಧ ಮಾಡಿಲ್ಲ. ರಸ್ತೆ, ಸಾರ್ವಜನಿಕ ಸ್ಥಳವನ್ನ ಅತಿಕ್ರಮಣ ಮಾಡಿಕೊಂಡು ಕಟ್ಟಿರುವ ದೇವಸ್ಥಾನಗಳಿವೆ. ತೆರವು ಮಾಡಲೇಬೇಕಾದ ದೇವಸ್ಥಾನ, ಮಸೀದಿಗಳ ಲೀಸ್ಟ್ ಅನ್ನು ಅದಾಗಲೇ ಸಿದ್ಧ ಮಾಡಿಕೊಂಡಿದ್ದೇವೆ. ಸ್ಥಳೀಯರ ಮನವೊಲಿಸಿ ಈ ಕೆಲಸ ನಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Please wait while flipbook is loading. For more related info, FAQs and issues please refer to DearFlip WordPress Flipbook Plugin Help documentation.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರಿಗೆ ಲಗ್ನ ಸ್ಥಾನದಲ್ಲಿ ಗುರು ಮತ್ತು ಪಂಚಮ ಸ್ಥಾನದಲ್ಲಿ ಗುರುಬಲ ಇದ್ದರೆ ಸಂತತಿ ಭಾಗ್ಯ ಲಭಿಸುತ್ತದೆ!

1-5ನೇ ತರಗತಿ ಆರಂಭಕ್ಕೆ ಮುಂದಾದ ಶಿಕ್ಷಣ ಸಚಿವರಿಗೆ ಸಿಎಂ ಕ್ಲಾಸ್..!