Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀಟ್ ಮರುಪರೀಕ್ಷೆಗೂ ಮುನ್ನ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್: ವಿಪಿಎನ್ ಬಳಸಿ ನಿಷೇಧ ಉಲ್ಲಂಘಿಸುತ್ತಿರುವ ಬಳಕೆದಾರರು!

---Advertisement---

ಮುಂಬೈ.ಜೂನ್ 17: ಮುಂಬರುವ ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪ್ರಮುಖ ಮೆಸೇಜಿಂಗ್ ಆ್ಯಪ್ ಆದ ಟೆಲಿಗ್ರಾಂ ಅನ್ನು ಜೂನ್ 22, 2026 ರವರೆಗೆ ತಾತ್ಕಾಲಿಕವಾಗಿ ದೇಶಾದ್ಯಂತ ನಿಷೇಧಿಸಿದೆ.

ಜೂನ್ 21 ರಂದು ಪರೀಕ್ಷೆ ನಡೆಯಲಿದ್ದು, ನಕಲಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ.ಆದರೆ, ಸರ್ಕಾರದ ಈ ನಿಷೇಧದ ನಡುವೆಯೂ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಿ ಅನೇಕರು ಟೆಲಿಗ್ರಾಂ ಅನ್ನು ಎಂದಿನಂತೆ ಬಳಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಸರ್ಕಾರದ ಕ್ರಮದ ದಕ್ಷತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಕಳೆದ ತಿಂಗಳು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ ಮೂಲ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಸಂಘಟಿತ ವಂಚಕರು ಟೆಲಿಗ್ರಾಂ ಗ್ರೂಪ್ಗಳು ಮತ್ತು ಚಾನೆಲ್ಗಳ ಮೂಲಕ ಯುಪಿಐ (UPI) ಅಥವಾ ಕ್ರಿಪ್ಟೋಕರೆನ್ಸಿ ಹಣ ಪಡೆದು ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದಾರೆ ಎಂದು ಎನ್ಟಿಎ ಹೇಳಿದೆ. ಯಾವುದೇ ಅಸಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿಲ್ಲ, ಆದರೆ ನಕಲಿ ಕಂಟೆಂಟ್ಗಳು ಹರಡುವುದನ್ನು ತಡೆಯಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಂ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದಲೂ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಸರ್ಕಾರ ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ, ವಿಪಿಎನ್ ಬಳಸಿ ಟೆಲಿಗ್ರಾಂ ಓಪನ್ ಆಗುತ್ತಿರುವ ಸ್ಕ್ರೀನ್ ಶಾಟ್ ಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭಾರತೀಯರಿಗೆ ವಿಪಿಎನ್ ಬಳಸುವುದು ಗೊತ್ತಿಲ್ಲ ಎಂದು ಸರ್ಕಾರ ಅಂದುಕೊಂಡಿದೆಯೇ? ಎಂದು ಬಳಕೆದಾರರೊಬ್ಬರು ಲೇವಡಿ ಮಾಡಿದ್ದಾರೆ. ವಂಚನೆ ಮಾಡುವವರು ಹೇಗೆ ಬೇಕಾದರೂ ಆ್ಯಪ್ ಬಳಸಬಹುದು, ಇದರಿಂದ ಸಾಮಾನ್ಯ ಜನರಿಗಷ್ಟೇ ತೊಂದರೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಕೂಡ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದ್ದು, ಇದು ಸಾಮಾನ್ಯ ಬಳಕೆದಾರರಿಗೆ ನೀಡುವ ಶಿಕ್ಷೆಯಾಗಿದೆ. ಇದರಿಂದ ವಂಚಕರು ಬೇರೆ ಪ್ಲಾಟ್ಫಾರ್ಮ್ಗಳಿಗೆ ವಲಸೆ ಹೋಗುತ್ತಾರಷ್ಟೇ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್,ವಿಪಿಎನ್ ತಡೆಯಲು ಈ ನಿಷೇಧವು ಸಂಪೂರ್ಣವಾಗಿ ಯಶಸ್ವಿಯಾಗದೇ ಇರಬಹುದು. ಆದರೆ, ಆ್ಯಪ್ ಅನ್ನು ಬ್ಲಾಕ್ ಮಾಡುವುದರಿಂದ ಸಾಮಾನ್ಯ ಜನರಿಗೆ ವಂಚಕರ ಚಾನೆಲ್ಗಳು ಸುಲಭವಾಗಿ ಸಿಗುವುದಿಲ್ಲ. ಇದರಿಂದ ವಂಚನೆಗೆ ಒಳಗಾಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ,” ಎಂದು ಸಮರ್ಥಿಸಿಕೊಂಡಿದ್ದಾರೆ.

Join WhatsApp

Join Now

Join Telegram

Join Now