ಚುನಾವಣೆ ಹತ್ತಿರವಾಗುತ್ತಿರುವಂತೆ ಪಕ್ಷಾಂತರ ಪರ್ವ ಕೂಡ ಆರಂಭವಾಗಿ ಬಿಡುತ್ತದೆ. ಇದೀಗ ಆಪರೇಷನ್ ಕಮಲದ ಬಗ್ಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಆಡಿಯೋ, ವಿಡಿಯೋ ರಿಲೀಸ್ ಮಾಡಿದ್ದಾರೆ. ಅದರಲ್ಲಿ ಅಮಿತ್ ಶಾ ಹಾಗೂ ಬಿ ಎಲ್ ಸಂತೋಷ್ ಅವರ ಹೆಸರು ಕೇಳಿ ಬಂದಿದೆ.
ಬಿಜೆಪಿ ತನ್ನ ಆಪರೇಷನ್ ಕಮಲದ ಮೂಲಕ ಕೆಸಿಆರ್ ಸರ್ಕಾರವನ್ನು ಕೆಡವಲು ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ ತೆಲಂಗಾಣ ಸಿಎಂ ಆಡಿಯೋ, ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇರುವವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಮ್ಮನ್ನು ಬಿಜೆಪಿಯೇ ಕಳುಹಿಸಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ತೆಲಂಗಾಣ ಸಿಎಂ ರಿಲೀಸ್ ಮಾಡಿರುವ ಆಡಿಯೋದಲ್ಲಿ, ನಾವೂ ಬಿಜೆಪಿಯಿಂದ ಬಂದಿದ್ದೇವೆ. ಇಡೀ ರಾಷ್ಟ್ರಮಟ್ಟದಲ್ಲಿ ವ್ಯವಸ್ಥಿತವಾಗಿ ಆಪರೇಷನ್ ಕಮಲವನ್ನು ಮಾಡುತ್ತಿದ್ದೇವೆ. ಆಪರೇಷನ್ ಕಮಲದ ನಿರ್ಣಯ ನೇರ ಬಿ ಎಲ್ ಸಂತೋಷ್, ಅಮಿತ್ ಶಾ, ಜೆಪಿ ನಡ್ಡಾ ಅವರು ವಹಿಸಿಕೊಂಡಿದ್ದಾರೆ. ಇದರಲ್ಲಿ ರಾಜ್ಯ ನಾಯಕರ ಪಾತ್ರವೇನು ಇಲ್ಲ. ಯಾರಿಗೆ ಏನು ತೊಂದರೆ ಆಗುವುದಿಲ್ಲ. ಒಬ್ಬ ಶಾಸಕನಿಗೆ 50-100 ಕೋಟಿ ನಿಗದಿ ಮಾಡಲಾಗುತ್ತದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಟಿಆರ್ಎಸ್ ಪಕ್ಷದ ಎಂಎಲ್ಎ ರೋಹಿತ್ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಿಸಿಟಿವಿ ದೃಶ್ಯಾವಳಿಯನ್ನು ರಿಲೀಸ್ ಮಾಡಲಾಗಿದೆ. ಈ ಮೂಲಕ ಹರಿಯಾಣ ಮೂಲದ ಪೂಜಾರಿ ಶರ್ಮಾ, ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ ಸಿಂಹಯಾಜಿ, ಉದ್ಯಮಿ ನಂದಕುಮಾರ್ ಪಿಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.