ಬಳ್ಳಾರಿ,ಏ.02 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ 03 ವರ್ಷಕ್ಕೊಮ್ಮೆ ನೀರಿನ ಕರ ಹಾಗೂ ಒಳಚರಂಡಿ ಶುಲ್ಕದ ದರಗಳನ್ನು ಪರಿಷ್ಕರಿಸಲು ಅವಕಾಶವಿದ್ದು, ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಏಪ್ರಿಲ್ 01 2025 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರಗಳನ್ನು ಸರ್ವಾನುಮತದಿಂದ ಒಪ್ಪಿ ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ನೀರಿನ ದರ:
ಗೃಹ ಬಳಕೆ: ಪ್ರಸ್ತುತ ದರ ರೂ.175, ಪರಿಷ್ಕರಿಸಿದ ದರ ರೂ.200(ಪ್ರತಿ ತಿಂಗಳಿಗೆ).
ಗೃಹೇತರ ಬಳಕೆ: ಪ್ರಸ್ತುತ ದರ ರೂ.400, ಪರಿಷ್ಕರಿಸಿದ ದರ ರೂ.25 (ಪ್ರತಿ ಕಿಲೊ ಲೀಟರ್‌ಗೆ) (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು)
ವಾಣಿಜ್ಯ: ಪ್ರಸ್ತುತ ದರ ರೂ.700, ಪರಿಷ್ಕರಿಸಿದ ದರ ರೂ.30 (ಪ್ರತಿ ಕಿಲೊ ಲೀಟರ್‌ಗೆ) (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು) ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಕಿಲೋ ಲೀಟರ್ ಗೆ ರೂ.30/-ರಂತೆ ಪಡೆಯುವುದು.
ಕೈಗಾರಿಕೆ: ಪ್ರಸ್ತುತ ದರ ರೂ.700, ಪರಿಷ್ಕರಿಸಿದ ದರ ರೂ.40 ಪ್ರತಿ ಕಿಲೊ ಲೀಟರ್‌ಗೆ (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು) ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಕಿಲೋ ಲೀಟರ್ ಗೆ ರೂ.40/-ರಂತೆ ಪಡೆಯುವುದು.
ಒಂದು ಭಾರಿ ನೀರು ಸಂಪರ್ಕಗಳಿಗೆ ವಿಧಿಸುವ ದರ:
ಗೃಹ ಬಳಕೆ: ಪ್ರಸ್ತುತ ದರ-5000/-, ಪರಿಷ್ಕರಿಸಿದ ದರ-6000/-
ಗೃಹೇತರ ಬಳಕೆ: ಪ್ರಸ್ತುತ ದರ-10,000/-, ಪರಿಷ್ಕರಿಸಿದ ದರ-15,000/-
ವಾಣಿಜ್ಯ/ಕೈಗಾರಿಕೆ: ಪ್ರಸ್ತುತ ದರ-10,000/-, ಪರಿಷ್ಕರಿಸಿದ ದರ-25,000/-
*ಒಳಚರಂಡಿ ಶುಲ್ಕದ ದರ:*
ಗೃಹ ಬಳಕೆಯ ಪ್ರತಿ ಬೇಸಿನ್‌ಗೆ: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-50 ರೂ. (ಪ್ರತಿ ಬೇಸಿನ್/ತಿಂಗಳು)
ಲಾಡ್ಜಿAಗ್, ಬೋರ್ಡಿಂಗ್/ಅಪಾರ್ಟ್ಮೆAಟ್ ಹಾಗೂ ಇನ್ನಿತರೆ ಬಹುಮಹಡಿ ಕಟ್ಟಡಗಳ ಪ್ರತಿ ಬೇಸಿನ್‌ಗೆ: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-100 ರೂ. (ಪ್ರತಿ ಬೇಸಿನ್/ತಿಂಗಳು)
ಹೋಟಲ್/ರೆಸ್ಟೊರೆAಟ್: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-2,500 ರೂ. (ಪ್ರತಿ ಬೇಸಿನ್/ತಿಂಗಳು)
*ಒAದು ಬಾರಿ ಒಳಚರಂಡಿ ಸಂಪರ್ಕಗಳಿಗೆ ವಿಧಿಸುವ ದರ:*
ಗೃಹ ಬಳಕೆಗೆ: ಪ್ರಸ್ತುತ ದರ-500/-, ಪರಿಷ್ಕರಿಸಿದ ದರ-3000/-.
ಲಾಡ್ಜಿಂಗ್ ಮತ್ತು ಬೋರ್ಡಿಂಗ್: ಪ್ರಸ್ತುತ ದರ-1,000/-, ಪರಿಷ್ಕರಿಸಿದ ದರ-15,000/-.
ಹೋಟಲ್/ ರೆಸ್ಟೊರೆಂಟ್: ಪ್ರಸ್ತುತ ದರ-1,000/-, ಪರಿಷ್ಕರಿಸಿದ ದರ-20,000/-.
ಸಾರ್ವಜನಿಕರು ನಿಗದಿತ ಅವಧಿಯಲ್ಲಿ ನೀರಿನ ಕರ ಹಾಗೂ ಒಳಚರಂಡಿ ಶುಲ್ಕವನ್ನು ಪಾವತಿಸಿ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.i
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 06 : ನಗರದ ಹಳೇ ವೈಶಾಲಿ ನರ್ಸಿಂಗ್ ಹೋಂ ಸಮೀಪದಲ್ಲಿ ವಾಸವಿರುವ ಎಂ. ಟಿ. ರುದ್ರಮುನಿ…
ಇತ್ತೀಚಿನ ಲೈಫ್ ಸ್ಟೈಲ್ ಹೇಗಾಗಿದೆ ಅಂದ್ರೆ ಒಂದು ಸಣ್ಣ ಸಮಸ್ಯೆಯಾದರೂ ಮೊದಲು ಆಸ್ಪತ್ರೆಗೆ ಓಡಿ ಹೋಗ್ತಾರೆ, ಮಾತ್ರೆಯನ್ನ ತಗೋಳ್ತಾರೆ. ಆದರೆ…
ಈ ರಾಶಿಯವರು ಕೊಟ್ಟಿದ್ದು ದುಡ್ಡು ಬೇಗ ಬರುವುದಿಲ್ಲ, ಈ ರಾಶಿಯವರು ಮದುವೆ ಅಂದ್ರೆ ಬೇಡ ಅಂತ ಹೇಳತ್ತಾರೆ, ಭಾನುವಾರದ ರಾಶಿ…
ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೆಳೆಯನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಂಡಿರುತ್ತಾರೆ. ರೋಗಗಳಿಂದ ಅಡಿಕೆಯನ್ನ ಕಾಪಾಡಿಕೊಳ್ಳಬೇಕು, ಮಳೆ ಇಲ್ಲದೆ ಒಣಗಿದಾಗ ಅವುಗಳನ್ನ…
ದಾವಣಗೆರೆ, ಏ.05: ಜಿಲ್ಲೆಯಲ್ಲಿನ ಆರು ತಾಲ್ಲೂಕಿನಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಪ್ರವಾಸಿ ತಾಣಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು…
ಸುದ್ದಿಒನ್, ಚಿತ್ರದುರ್ಗ, ಏ. 05, ಚಿತ್ರದುರ್ಗದಲ್ಲಿ ಪ್ರಥಮ ಬಾರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ರೋಗ ತಜ್ಞರ ಸಂಘದ ಸಹಯೋಗದಲ್ಲಿ…