ಕಾಬೂಲ್: ಅಮೆರಿಕಾ ಸೇನೆ ಹಿಂದೆ ಸರಿದಿದ್ದೇ ಸರಿದಿದ್ದು, ತಾಲಿಬಾನಿಗಳು ತಮ್ಮ ಅಟ್ಟಹಾಸವನ್ನ ಎಷ್ಟರ ಮಟ್ಟಿಗೆ ಹೆಚ್ಚಿಸಿಕೊಂಡರೆಂದರೆ ಇಡೀ ದೇಶವನ್ನೇ ತಮ್ಮ ವಶಕ್ಕೆ ಪಡೆದಿದ್ದಾರೆ. ಅಫ್ಘಾನಿಸ್ತಾನವನ್ನ ಹಂತ ಹಂತವಾಗಿ ವಶಕ್ಕೆ ಪಡೆದ ತಾಲಿಬಾನಿಗಳು ಇದೀಗ ಅಲ್ಲಿ ತಮ್ಮದೇ ಸರ್ಕಾರವನ್ನು ರಚಿಸಿ ಆಗಿದೆ.
ಸರ್ಕಾರ ರಚಿಸಿ ಪ್ರಧಾನಿಯನ್ನು ನೇಮಕ ಮಾಡಲಾಗಿದೆ. ಮುಲ್ಲಾ ಮುಹ್ಮದ್ ಹಸನ್ ಅಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿದ್ದಾರೆ. ಮುಲ್ಲಾ ಬರದಾರ್ ಅಖುಂದ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಅಪ್ಘಾನಿಸ್ತಾನವನ್ನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು ಅಲ್ಲಿನ ಜನರಿಗೆ ಆಗಿಲ್ಲ. ಈಗಾಗಲೇ ಸಾಕಷ್ಟು ಜನ ಅಫ್ಘಾನಿಸ್ತಾನವನ್ನ ತೊರೆದಿದ್ದಾರೆ. ತಾಲಿಬಾನಿಗಳ ಕ್ರೂರತನ ಸಹಿಸಲಾಗದೆ ದೇಶ ಬಿಟ್ಟವರೆ ಹೆಚ್ಚು. ಕಡೆಯದಾಗಿ ಪಂಜಶಿರ್ ಪ್ರಾಂತ್ಯ ಉಳಿಸಿಕೊಳ್ಳಲು ಅಲ್ಲಿನ ಸ್ಥಳೀಯರು, ಸೇನೆ ಕೂಡ ಹೋರಾಟ ಮಾಡಿತ್ತು. ಆದ್ರೆ ಕಡೆಗೆ ಅದು ಸಕ್ಸಸ್ ಆಗ್ಲೇ ಇಲ್ಲ.