in

ಕಾಂಗ್ರೆಸ್ ಹೋಗೋ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಾನೂನು ಕ್ರಮ : ಬೆಲ್ಲದ್..!

suddione whatsapp group join

 

ಹುಬ್ಬಳ್ಳಿ : ಬಿಜೆಪಿಯಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಅರವಿಂದ್ ಬೆಲ್ಲದ್ ಗೆ ಸಿಎಂ ಸ್ಥಾನವೂ ಇಲ್ಲ ಕಡೆ ಪಕ್ಷ ಸಚಿವ ಸ್ಥಾನವೂ ಸಿಗ್ಲಿಲ್ಲ. ಹೀಗಾಗಿ ಬೆಲ್ಲದ್ ಕಾಂಗ್ರೆಸ್ ಗೆ ಹೋಗ್ತಾರೆ ಅನ್ನೋ ಊಹಾ ಪೋಹಾ ಸುದ್ದಿ ಬಿರುಗಾಳಿಯಂತೆ ಬೀಸ್ತಾ ಇತ್ತು.

ಜೊತೆಗೆ ಬಿಜೆಪಿಯ ಕೆಲ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕ್ತಾ ಇದೆ ಅನ್ನೋ ಸುದ್ದಿಯೂ ಸಾಕಷ್ಟು ಚರ್ಚೆಗೆ ಬಂದಿತ್ತು. ಇದೆಲ್ಲಾ ಬೆಳವಣಿಗೆಯ ನಡುವೆ ಈ ಸುದ್ದಿ ಹಬ್ಬಿದ್ದು ಎಲ್ಲವೂ ಸುಳ್ಳು ಎಂದಿದ್ದಾರೆ ಅರವಿಂದ್ ಬೆಲ್ಲದ್.

ಇನ್ನು ನಾನು ಕಾಂಗ್ರೆಸ್ ಸೇರಲ್ಲ..ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿ ಹರಡಿದ್ರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆಂದು ಎಚ್ಚರಿಕೆ ಕೊಟ್ಟಿದ್ದಾರೆ.

ಆತ್ಮೀಯರೇ., ಕೆಲ ಮಾಧ್ಯಮಗಳಲ್ಲಿ ನಾನು ಭಾರತೀಯ ಜನತಾ ಪಕ್ಷವನ್ನು ತೊರೆಯುವುದಕ್ಕೆ ಚಿಂತನೆ ನಡೆಸಿದ್ದೇನೆ ಎಂಬ ಸುಳ್ಳು ಹಾಗೂ ಕಪೋಲಕಲ್ಪಿತ ಸುದ್ದಿ ವರದಿಯಾಗುತ್ತಿದೆ. ಇದು ಸತ್ಯಕ್ಕೆ ದೂರವಾದ & ದುರುದ್ದೇಶಪೂರ್ವಕ ವರದಿ. ಸಾಮಾಜಿಕ ಜಾಲ ತಾಣಗಳಲ್ಲೂ ಇದೇ ಬಗೆಯ ಸುಳ್ಳು ಸಂದೇಶ ಹಬ್ಬಿಸುವ ಪ್ರಯತ್ನ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಚಾರವನ್ನು ನಾನು ನಿರ್ಲಕ್ಷಿಸಬಹುದಿತ್ತು. ಆದರೆ ಸುಳ್ಳುಗಳನ್ನೇ ನಿಜವೆಂದು ಪ್ರತಿಷ್ಠಾಪಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಪರಿವಾರದ ಬಗೆಗಿನ ನನ್ನ ನಿಷ್ಠೆ ಅಚಲವಾಗಿದೆ.

ನಾನು ಬಿಜೆಪಿ ತೊರೆಯುವ / ಅನ್ಯ ಪಕ್ಷ ಸೇರುವುದನ್ನು ಕಾಯಾ, ವಾಚಾ, ಮನಸಾ ಕಲ್ಪಿಸಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಹಬ್ಬಿರುವ ವದಂತಿಗೆ ಯಾರೂ ಬೆಲೆ ಕೊಡಬಾರದು ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೂ ನಾನು ಸಿದ್ಧತೆ ನಡೆಸಿದ್ದೇನೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಶ್ಲೀಲ ಚಿತ್ರಗಳ ನಿರ್ಮಾಣ ಕೇಸ್ : 2 ತಿಂಗಳ ಬಳಿಕ ರಾಜ್ ಕುಂದ್ರಾಗೆ ಜಾಮೀನು..!

ಈ ರಾಶಿಯವರಿಗೆ ನಂಬಿದ ಜನರಿಂದ ಧನಸಹಾಯ ಸಿಗುವುದು!