Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉಕ್ರೇನ್ ನಲ್ಲಿ ಸಿಲುಕಿದ ಚಳ್ಳಕೆರೆ ವಿದ್ಯಾರ್ಥಿ ನಿವಾಸಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ

Facebook
Twitter
Telegram
WhatsApp

ವರದಿ : ಸುರೇಶ್ ಬೆಳಗೆರೆ

ಚಳ್ಳಕೆರೆ, (ಫೆ.26) : ಯುದ್ದ ಪೀಡಿತ ಉಕ್ರೇನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾಲೂಕಿನ ಜಾಜೂರ್ ಗ್ರಾಮದ ವಿಜಯ್ ಕುಮಾರ್ ಹಾಗೂ ಪ್ರಮೀಳಾ ಇವರ ಪುತ್ರ ಎಂ.ವಿ. ನಿತೀಶ್ ಕುಮಾರ್ ಅವರ ನಿವಾಸಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದರು.

ಎಂ.ವಿ. ನಿತೀಶ್ ಕುಮಾರ್ ಉಕ್ರೇನ್  ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದು, ರಷ್ಯಾದ ಆಕ್ರಮಣದಿಂದ ಸ್ವದೇಶಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಮತ್ತು ಇಲ್ಲಿ ಅವರ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಧಿಕಾರಿಗಳೊಂದಿಗೆ  ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿದರು.

ಈ ವೇಳೆ ಪೋಷಕರೊಂದಿಗೆ ಮಾತನಾಡಿ, ಉಕ್ರೇನಿನಲ್ಲಿರುವ ವಿದ್ಯಾರ್ಥಿ ಜತೆ  ದೂರವಾಣಿ ಮೂಲಕ ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿದರು.

ಎಂ.ವಿ. ನಿತೀಶ್ ಕುಮಾರ್‌ ಸದ್ಯ ಒಂದು ವಾರಕ್ಕಾಗುವಷ್ಟು ಆಹಾರವನ್ನು ಶೇಖರಣೆ ಮಾಡಿಕೊಂಡಿರುವುದಾಗಿ ಹೇಳಿದರು. ಮತ್ತು ಸಮೀಪದಲ್ಲಿ ಬಾಂಬುಗಳು ಸ್ಪೋಟಗೊಳ್ಳುತ್ತಿದ್ದು, ಭಯವಾಗುತ್ತದೆ. ಅದಕ್ಕಾಗಿ ಬಂಕರ್ ನೊಳಗೆ ಸುರಕ್ಷಿತವಾಗಿರುವುದಾಗಿ ಪೋಷಕರಿಗೆ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಸರ್ಕಾರ ಕುಟುಂಬದ ಜೊತೆಯಲ್ಲಿ ಇರುವುದಾಗಿ ಹಾಗೂ ವಿದ್ಯಾರ್ಥಿಯನ್ನು ಸರ್ಕಾರದ ವತಿಯಿಂದ ಸುರಕ್ಷಿತವಾಗಿ ವಾಪಸ್ ತರುವುದಾಗಿ ಆತ್ಮವಿಶ್ವಾಸ ಮೂಡಿಸಿದರು.

ಈ ಸಂದರ್ಭದಲ್ಲಿ ಪರಶುರಾಮಪುರ ಆರ್ ಐ. ಮೋಹನ್ ಕುಮಾರ್ , ತಳಕು ಆರ್ ಐ ಉಮೇಶ, ಹಾಗೂ ಗ್ರಾಮಸ್ಥರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!