in

ವಿವಾಹಿತ ಗ್ರಾಮಲೆಕ್ಕಿಗನ ಜೊತೆ ತಹಶೀಲ್ದಾರ್ ಮದುವೆ ಮುಂದೇನಾಯ್ತು..?

suddione whatsapp group join

ಚಿಕ್ಕಮಗಳೂರು: ಆತನೂ ವಿವಾಹಿತ ಆಕೆಯೂ ವಿವಾಹಿತೆ. ದೊಡ್ಡ ಹುದ್ದೆಯಲ್ಲೇ ಇದ್ದರು, ಮೊದಲ ಹೆಂಡತಿಗೆ ಡಿವೋರ್ಸ್ ಕೊಡದೆ ಆತ ಮದುವೆಯಾದ, ಮದುವೆಯಾಗಿದ್ದರು ತಾನು ಅವಿವಾಹಿತೆ ಎಂದು ಈಕೆಯೂ ತಾಳಿ ಕಟ್ಟಿಸಿಕೊಂಡಳು. ಈಗ ಆ ಮದುವೆಗೆ ಏಳು ದಿನದೊಳಗೆ ಉತ್ತರ ನೀಡುವಂತೆ ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದಾರೆ.

ಈ ಘಟನೆ ನಡೆದಿರೋದು ಜಿಲ್ಲೆಯೆ ಎನ್ ಆರ್ ಪುರ ತಾಲೂಕಿನಲ್ಲಿ. ಎನ್ ಆರ್ ಪುರ ತಾಲೂಕಿನ ತಹಶಿಲ್ದಾರ್ ಆಗಿರೋ ಗೀತಾ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಯೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಅದು ಆ ಗ್ರಾಮ ಲೆಕ್ಕಾಧಿಕಾರಿಗೆ ಮದುವೆಯಾಗಿದ್ರು ಕೂಡ. ಗೀತಾಗೂ ಈ ಮುಂಚೆ ಮದುವೆಯಾಗಿದೆ. ಆದ್ರೆ ತಹಶೀಲ್ದಾರ್ ಗೀತಾ ವಿಚ್ಛೇದಿತೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಗ್ರಾಮ ಲೆಕ್ಕಾಧಿಕಾರಿ ಶ್ರೀನಿಧಿ ವಿಚ್ಚೇದನ ನೀಡದೆಯೆರ ಮತ್ತೊಂದು ಮದುವೆಯಾಗಿದ್ದಾರೆ.

ಈ ಸಂಬಂಧ ಗ್ರಾಮ ಲೆಕ್ಕಿಗ ಶ್ರೀನಿಧಿ ಪತ್ನಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಮೊದಲ ಹೆಂಡತಿ ಇದ್ದರು ಎರಡನೇ ಮದುವೆಯಾಗಿದ್ದಾರೆಂದು. ಪರಿಣಾಮ ಜಿಲ್ಲಾಧಿಕಾರಿ ಕಾರಣ ಕೇಳಿ ತಹಶೀಲ್ದಾರ್ ಗೆ ನೋಟೀಸ್ ನೀಡಿದ್ದು, ಮದುವೆ ಬಗ್ಗೆ ಉತ್ತರಿಸುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಗೀತಾ ಕೂಎ ತಾನು ವಿವಾಹಿತೆ ಅನ್ನೋದಕ್ಕಿಂತ ಅವಿವಾಹಿತೆ ಎಂಬುದಾಗಿ ನಡೆದುಕೊಂಡಿದ್ದರು ಎನ್ನಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

818 ಜನರಿಗೆ ಹೊಸದಾಗಿ ಸೋಂಕು..1414 ಜನ ಡಿಸ್ಚಾರ್ಜ್..!

ತುಮಕೂರಿನಲ್ಲಿ ಸುರಂಗ ಮಾರ್ಗದೊಳಗೆ ನಡೆಯುತ್ತಿತ್ತು ವೇಶ್ಯಾವಾಟಿಕೆ..!