Kt somshekhar

ಏನ ಆಶಿಸಲಿ ಈ ಯುಗಾದಿಯಲಿ ? : ಕೆ.ಟಿ.ಸೋಮಶೇಖರ್ ಅವರ ವಿಶೇಷ ಲೇಖನ

  ಕೆ.ಟಿ.ಸೋಮಶೇಖರ್, ಶಿಕ್ಷಕರು, ಹೊಳಲ್ಕೆರೆ. ಮೊ.ನಂ: 9008569286 ಯುಗದ ಆದಿ ಯುಗಾದಿ! ' ಯುಗ ' ಎಂದರೆ ಒಂದು ದೀರ್ಘ ಕಾಲಾವಧಿ. ನಾವು ಹಬ್ಬ ಎಂದು ಆಚರಿಸುವ ಯುಗಾದಿಯ 'ಯುಗ ' ಎಂದರೆ ವರುಷ. ' ಆದಿ ' ಎಂದರೆ ಆರಂಭ! ಅಂದರೆ ಹೊಸ ವರುಷದ ಆರಂಭ! ಇದನ್ನು ಹಬ್ಬ ಎಂದು ಆಚರಿಸಲಾಗುವುದು. ಯುಗಾದಿಯನ್ನು ಚಂದ್ರನ ಚಲನೆಯನ್ನು ಎಣಿಸಿ ಚಾಂದ್ರಮಾನ ಯುಗಾದಿಯೆಂದು ಸೂರ್ಯನ ಚಲನೆಯನ್ನು ಪರಿಗಣಿಸಿ ಸೌರಮಾನ ಯುಗಾದಿಯೆಂದು ಹಿಂದೂ ಪಂಚಾಂಗದ ಪ್ರಕಾರ ನಿರ್ಣಯಿಸುವರು. ಕೆಲವು ರಾಜ್ಯಗಳು ಸೌರಮಾನ ಯುಗಾದಿ ಆಚರಿಸಿದರೆ ಮತ್ತೆ ಕೆಲವು ರಾಜ್ಯಗಳು ಚಂದ್ರಮಾನ ಯುಗಾದಿಯನ್ನು ಆಚರಿಸುವುವು. ಯುಗಾದಿಯನ್ನು ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದಲೂ ಆಚರಿಸುವರು. ನಮ್ಮ ರಾಜ್ಯದಲ್ಲಿ ಚಂದ್ರಮಾನ ಯುಗಾದಿಯನ್ನು ಆಚರಿಸುವವರು. ಪ್ರಕೃತಿ ಸಿಂಗಾರಗೊಂಡು ನವ ಚೈತನ್ಯದಿ ಸಂಭ್ರಮಿಸುವ ಚೈತ್ರ ಮಾಸದ ಸುಂದರ ಸಮಯದಿ ಬರುವುದು ಈ ಯುಗಾದಿ! ಯಾರು ಯುಗಾದಿಯನ್ನು ಹೊಸ ವರುಷ ಅಂತ ಕೂಗಿ ಹೇಳಿ ಹೊಸ ವರುಷವ ಸೃಜಿಸುವಂತಿಲ್ಲ! ಅದನ್ನು ಪ್ರಕೃತಿಯೇ ಸೃಜಿಸುತ್ತದೆ! ಶಿಶಿರ ಪ್ರಕೃತಿಯನ್ನು ಶೈತ್ಯದ ಗಾಳಿಯಕಾಲ್ಗತಿಗೆ ಸಿಲುಕಿಸಿ ಗಿಡಮರಗಳ ಗಡಗಡ ನಡುಗಿಸಿ ಒರಟಾಗಿಸಿ ಸೀಳಿ ಪ್ರಕೃತಿಯ ಅಂದಗೆಡಿಸುತ್ತದೆ. ವಸಂತ ಆಗಮಿಸಿ ಹಾಳಾದ ಎಲೆಯ ಹಳೆ ಕೊಳೆ ವಸ್ತ್ರವ ಕಳಚುತ ಬೋಳಾದ ಮರದ ತುಂಬ ಹೊಸಗನಸ ಹೊಮ್ಮಿಸುತ್ತ, ಹೊಸ ಹಸಿರ ನವ ಚಿಗುರ ಉಡುಪು ಧರಿಸುತ್ತ…

3 years ago