ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ(ಡಿ.11) : ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ (ಎಪಿಕ್ ಕಾರ್ಡ್) ಬದಲಾವಣೆ ಅಥವಾ ಕಾರ್ಡ್ ಕಳೆದುಹೋಗಿದ್ದು, ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ ಸಂಬಂಧಪಟ್ಟ ಮತದಾರರು ಆಯಾ ಬಿಎಲ್ಒ (ಬೂತ್ ಮಟ್ಟದ ಅಧಿಕಾರಿ), ತಹಸಿಲ್ದಾರರ ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿ, ಉಚಿತವಾಗಿ ಹೊಸ ಕಾರ್ಡ್ ಪಡೆಯಬಹುದಾಗಿದೆ. ಸಾರ್ವಜನಿಕರು ಹಣ ತೆತ್ತು, ಖಾಸಗಿಯವರ ಬಳಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಪಡೆಯಬಾರದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ. ಚಳ್ಳಕೆರೆಯಲ್ಲಿ ಖಾಸಗಿ ಕಂಪ್ಯೂಟರ್ ಸೆಂಟರ್ವೊಂದರಲ್ಲಿ, 200 ರಿಂದ 300 ರೂ. ಹಣ ಪಡೆದು, ಮತದಾರರ ಗುರುತಿನ ಚೀಟಿ ತಯಾರಿಸಿ, ನೀಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ತಹಸಿಲ್ದಾರ್ ಎನ್. ರಘುಮೂರ್ತಿ ಅವರ ನೇತೃತ್ವದ ತಂಡವು ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ, ಅಲ್ಲಿ ಮತದಾರರ ಗುರುತಿನ ಚೀಟಿ ಮುದ್ರಣ ಮಾಡಿ ಸಾರ್ವಜನಿಕರಿಗೆ ನೀಡಿರುವ ಬಗ್ಗೆ ಪರಿಶೀಲಿಸಿದ್ದು, ಮತದಾರರ ಭಾವಚಿತ್ರವಿರುವ ಕೆಲವು ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ಕಂಪ್ಯೂಟರ್ ಸೆಂಟರ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮತದಾರರ ಗುರುತಿನ ಚೀಟಿ ಪಡೆಯಲು, ಕಾರ್ಡ್ ಕಳೆದುಹೋಗಿದ್ದು ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ ಅಥವಾ ಬದಲಿ ಕಾರ್ಡ್ ಪಡೆಯಬೇಕಿದ್ದಲ್ಲಿ, ಅಂತಹ ಮತದಾರರು ತಮ್ಮ ಅರ್ಜಿಯನ್ನು ಆಯಾ ಬಿಎಲ್ಒ (ಬೂತ್ ಮಟ್ಟದ ಅಧಿಕಾರಿ), ತಹಸಿಲ್ದಾರರ ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ರೀತಿ ಅರ್ಜಿ ಸಲ್ಲಿಸಿದ ಮತದಾರರಿಗೆ ಹೊಸ ಎಪಿಕ್ ಕಾರ್ಡ್ಗಳನ್ನು ಅವರ ವಿಳಾಸಕ್ಕೆ ಉಚಿತವಾಗಿ ತಲುಪಿಸಲಾಗುವುದು.…
ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, (ನ.15) : ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡುವ ಪೊಲೀಸರು, ದೇಶ…
ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ನ.11): ಪರಾಕ್ರಮಶಾಲಿಯಾದ ವೀರವನಿತೆ ಒನಕೆ ಓಬವ್ವ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆ…
ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಅ.29) : ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿಯನ್ನು ಚಿತ್ರದುರ್ಗ ನಗರದಲ್ಲಿ…