ದ್ರಾವಿಡ್ ಜವಬ್ದಾರಿಯುತ ಸ್ಥಾನ ಸ್ವೀಕರಿಸಿದ್ದು ಶಾಕಿಂಗ್ : ಆಸ್ಟ್ರೇಲಿಯಾ ಮಾಜಿ ನಾಯಕ ಹೀಗಂದಿದ್ಯಾಕೆ..?

1 Min Read

 

ನವದೆಹಲಿ : ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಅಸ್ತು ಎಂದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ತೀರ್ಮಾನ ತೆಗೆದುಕೊಂಡು ದ್ರಾವಿಡ್ ಅವರನ್ನ ಕೋಚ್ ಆಗಿ ಆಯ್ಕೆ ಮಾಡಿರೋದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ. ಆದ್ರೆ ಈ ನಡುವೆ ಆಸ್ಟ್ರೇಲಿಯಾ ಮಾಜಿ ನಾಯಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅತ್ಯಂತ ಜವಬ್ದಾರಿಯುತ ಸ್ಥಾನವನ್ನ ದ್ರಾವಿಡ್ ಸ್ವೀಕರಿಸಿದ್ದೆ ಶಾಕಿಂಗ್ ಎಂಬ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಚಾರ ಪ್ರಸ್ತಾಪಿಸಿದ ಮಾಜಿ ನಾಯಕ ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿದ್ದು ನನಗೆ ಆಶ್ಚರ್ಯ ಎನಿಸಿದೆ. ಯಾಕಂದ್ರೆ ಈ ಮೊದಲು ದ್ರಾವಿಡ್ ಕೋಚ್ ಆಗಲು ನಿರಾಕರಿಸಿದ್ದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆದೇಶದ ಮೇರೆಗೆ ಅವರು ಈ ಸ್ಥಾನವನ್ನ ಸ್ವೀಕರಿಸಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *