ಬೆಂಗಳೂರು: ನಗರದ ಮಾಗಡಿ ಟೋಲ್ ಗೇಟ್ ಬಳಿ ನಿರ್ಮಿಸಲಾಗಿದ್ದ ವಿಷ್ಣುವರ್ಧನ್ ಪ್ರತಿಮೆಯನ್ನು ರಾತ್ರೋ ರಾತ್ರಿ ಧ್ವಂಸ ಮಾಡಲಾಗಿದೆ. ಈ ಘಟನೆ ವಿರೋಧಿಸಿ ನಿನ್ನೆ ವಿಷ್ಣು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ದರ್ಶನ್, ಅನಿರುದ್ದ್ ಸೇರಿದಂತೆ ಹಲವರು ಈ ಘಟನೆಯನ್ನು ಖಂಡಿಸಿದ್ದರು. ಇದೀಗ ಕಿಚ್ಚ ಸುದೀಪ್ ಈ ಕೃತ್ಯ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ.
To those ******** who broke the statue of my hero and my idol VishnuSir,,
Here is my advice,,,,,,, pic.twitter.com/C6zTglMIy3— Kichcha Sudeepa (@KicchaSudeep) December 26, 2020
ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಒಡೆದಿರುವುದು ಯಾರು ಅಂತ ಗೊತ್ತಾದರೆ ಹೀನಾಯವಾಗಿ ಹೊಡರದು ಹಾಕುತ್ತಾರೆ. ನಿಮ್ಮ ಹೆಸರು ಬಯಲಾದ ದಿನ ದೇಶ ಬಿಟ್ಟು ಓಡಿಹೋಗಿ ಎಂದಿದ್ದಾರೆ.
ಪ್ರತಿಮೆ ಒಡೆದು ಹಾಕಿರುವ ಮಹಾನುಭವರಿಗೆ ವಿಷ್ಣು ಸರ್ ಅಭಿಮಾನಿಯಾಗಿ ಒಂದಷ್ಟು ವಿಷಯ ಹೇಳಲು ಬಯಸುತ್ತೇನೆ. ದಯವಿಟ್ಟು ಸಿಕ್ಕಿಹಾಕಕೊಳ್ಳಬೇಡಿ. ಒಡೆದಿರುವುದು ಯಾರು ಅಂತ ಗೊತ್ತಾದರೆ ಅಷ್ಟು ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರಲ್ಲ ಅವರೆಲ್ಲರೂ ಸೇರಿ ನಿಮ್ಮನ್ನು ಒಡೆದು ಹಾಕುತ್ತಾರೆ. ಒಡೆದು ಹಾಕಿರುವ ಉದ್ದೇಶ ಅರ್ಥವೂ ಆಗಿಲ್ಲ, ಅರ್ಥ ಆಗಲಿಕ್ಕೂ ಇಲ್ಲ. ಮನುಷ್ಯರಾದವರಿಗೆ ಅರ್ಥ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
