ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.13 : ಜಿಲ್ಲೆಯ ಮೊಳಕಾಲ್ಮೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಜಪ್ತಿಮಾಡಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಚಿಪ್ಪಿನಕೆರೆ ಗ್ರಾಮದ ಮುದ್ದುರಾಜ
(ಸುಮಾರು 46 ವರ್ಷ) ಮತ್ತು ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿಯ ಗೋವಿಂದರಾಜ (ಸುಮಾರು 43 ವರ್ಷ) ಬಂಧಿತರು.
ಮೊಳಕಾಲ್ಮೂರಿನ ಸೂಲೇನಹಳ್ಳಿರಸ್ತೆಯಲ್ಲಿರುವ ಕೆಬಿಎನ್ ಟ್ರೇಡರ್ಸ್ ನಲ್ಲಿ ದಿನಾಂಕ:26.11.2023 ರ ರಾತ್ರಿ ಸಮಯದಲ್ಲಿ ಗೋಡಾನ್ ಕಿಟಿಕಿಯನ್ನು ಮುರಿದು 90 ಶೇಂಗಾ ಬೀಜಗಳ ಚೀಲಗಳನ್ನು ಮತ್ತು ಗೋಡಾನ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಮಾನಿಟರ್ ಮತ್ತು ಡಿ.ವಿ.ಆರ್ ಗಳನ್ನು ಕಳ್ಳತನ ಮಾಡಿರುತ್ತಾರೆ. ಕಳುವಾದ ಶೇಂಗಾ ಸೇರಿದಂತೆ ಎಲ್ಲಾ ವಸ್ತುಗಳನ್ನು ಸೇರಿ ಒಟ್ಟು ಬೆಲೆ 4,70,000 ರೂಗಳು ಆಗಿರುತ್ತದೆ.
ನಗರದ ಮುಬಾರಕ್ ಮೊಹಲ್ಲಾದ ಖಾಜಾ ಹುಸೇನ್ ಅವರು ನೀಡಿದ ದೂರಿನ ಮೇರೆಗೆ ಮೊಳಕಾಲ್ಮೂರು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕರವರ
ಮಾರ್ಗದರ್ಶನದ ಮೇರೆಗೆ ಮೊಳಕಾಲ್ಮೂರು ವೃತ್ತದ ವಸಂತ ವಿ ಅಸೋದೆ ಸಿ.ಪಿ.ಐ ಮತ್ತು ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಜಿ.ಪಾಂಡುರಂಗ ಮತ್ತು ಈರೇಶ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳ ತಂಡವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಮಾಹಿತಿಯ
ಆಧಾರದ ಮೇಲೆ ಫೆಬ್ರವರಿ 09 ರಂದು ಅಂತರಜಿಲ್ಲಾ ಕಳ್ಳರನ್ನು ಬಂದಿಸಿದ್ದಾರೆ.
ಬಂಧಿತರಿಂದ ಕಳ್ಳತನಕ್ಕೆ ಬಳಸಿದ ಒಂದು ಟಾಟಾ ಕಂಪನಿಯ ವಾಹನ, ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡು,
05 ಶೇಂಗಾ ಬೀಜದ ಚೀಲಗಳು ಮತ್ತು ಶೇಂಗಾ ಬೀಜಗಳ ಮಾರಾಟದಿಂದ ಬಂದ 2,20,000/- ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಬಂಧಿತ ಆರೋಪಿಗಳ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೆಳ್ಳುಳ್ಳಿ
ಗೋಡಾನ್ ಕಳ್ಳತನ, ಸಿಂಧನೂರು ಮತ್ತು ಮಾನ್ವಿಯ ಭತ್ತದ ಗೋಡಾನ್ ಕಳ್ಳತನದ ಪ್ರಕರಣಗಳಲ್ಲಿ
ಭಾಗಿಯಾಗಿರುವುದಾಗಿ ಹಾಗೂ ಅಂತರ ಜಿಲ್ಲಾ ಕಳ್ಳನಾದ ಮುದ್ದುರಾಜನ ಮೇಲೆ ಈ ಹಿಂದೆ ಬಾಗಲಕೋಟೆ,
ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು
ದಾಖಲಾಗಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿ.ಪಿ.ಐ. ವಸಂತ ವಿ ಅಸೋದೆ, ಪಿ.ಎಸ್.ಐ ಗಳಾದ
ಜಿ.ಪಾಂಡುರಂಗ,ಈರೇಶ ಮತ್ತು ಅಪರಾದ ಸಿಬ್ಬಂದಿಗಳಾದ ವೀರಣ್ಣ, ರಮೇಶ, ಖಾದರ್ ಭಾಷ ರವರುಗಳ
ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…