in ,

ವಿದ್ಯಾರ್ಥಿಗಳ ಯಶಸ್ಸು ಏಕಾಗ್ರತೆಯಿಂದ ಮಾತ್ರ ಸಾಧ್ಯ : ಸತ್ಯನಾರಾಯಣ್

suddione whatsapp group join

ಚಿತ್ರದುರ್ಗ, (ಮೇ.21) : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಏಳಿಗೆ ಮತ್ತು ಯಶಸ್ಸು ಕೇವಲ ಏಕಾಗ್ರತೆಯಿಂದ ಕೂಡಿದ ಮೌಲ್ಯಾಧಾರಿತ ಓದಿನಿಂದ ಮಾತ್ರ ಸಾಧ್ಯ

ಎಂದು ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದ ಮೀಡಿಯಾ ಮಾರ್ಗದರ್ಶಕ ಸತ್ಯನಾರಾಯಣ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ನಮ್ಮ ಎಕ್ಸ್ ಪರ್ಟ್ ಪಿಯು ಕಾಲೇಜು ವತಿಯಿಂದ
ನಮ್ಮ ಗಮನ  ಶೀರ್ಷಿಕೆಯಡಿಯಲ್ಲಿ       ವಿದ್ಯಾರ್ಥಿ- ಪೋಷಕ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪೂರಕವಾದ ಶಿಕ್ಷಣ ದೊರೆತಾಗ ವಿದ್ಯಾರ್ಥಿಯು ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಬೋಧನೆಯ ಜೊತೆಗೆ ವಿದ್ಯಾರ್ಥಿ ಪೋಷಕರುಗಳ ಪ್ರೋತ್ಸಾಹ ಅತೀ ಅಗತ್ಯ ಎಂದು ಪ್ರಾಂಶುಪಾಲ ಶ್ರೀನಿವಾಸಲು ಪೊದಾರ್ಥಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.

ಈ‌ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಮುರಳಿ ಪ್ರಸನ್ನ ಕುಮಾರ್, ವಿದ್ಯಾರ್ಥಿಗಳು ಪೋಷಕರುಗಳು ಉಪಸ್ಥಿತರಿದ್ದರು. ಕಾಲೇಜಿನ ಸಿಬ್ಬಂದಿ ವರ್ಗದವರು ಯಶಸ್ವಿಯಾಗಿ ನಡೆಸಿಕೊಟ್ಟರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಇವತ್ತು RCB ಮ್ಯಾಚ್ ನಡೆಯುತ್ತಾ..? ನಡೆಯಲ್ವಾ..?

2000 ನೋಟುಗಳ ವಿನಿಮಯದ ಕುರಿತು SBI ಮಹತ್ವದ ಘೋಷಣೆ : ನಿಮ್ಮಲ್ಲಿರುವ ನೋಟು ಬದಲಾಯಿಸಲು ನೀವು ಏನು ಮಾಡಬೇಕು ? ಇಲ್ಲಿದೆ ಮಾಹಿತಿ..