ವೈಜ್ಞಾನಿಕ ತಳಹದಿ ಮೇಲೆ ವೈಚಾರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಮೂಢಿಸಿಕೊಳ್ಳಬೇಕು : ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552

ಚಿತ್ರದುರ್ಗ,(ಡಿ.29): ವೈಜ್ಞಾನಿಕ ತಳಹದಿ ಮೇಲೆ ವೈಚಾರಿಕ ಪ್ರಜ್ಞೆಯನ್ನು ಕಾನೂನು ವಿದ್ಯಾರ್ಥಿಗಳು ಮೂಢಿಸಿಕೊಳ್ಳಬೇಕೆಂದು ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ವತಿಯಿಂದ ಸರಸ್ವತಿ ಕಾನೂನು ಕಾಲೇಜು ಎ.ಕ್ಯೂ.ಎ.ಸಿ. ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಕುವೆಂಪು ಮತ್ತು ವೈಚಾರಿಕತೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ವೈಚಾರಿಕ ಪ್ರಜ್ಞೆಯುಳ್ಳವರಾಗಿದ್ದ ಕುವೆಂಪುರವರಲ್ಲಿದ್ದ ಚಿಂತನೆಗಳನ್ನು ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಗ ಮಾತ್ರ ಮುಂದೆ ವೃತ್ತಿಯಲ್ಲಿ ಯಶಸ್ಸು ಕಾಣಬಹುದು. ಶಿಕ್ಷಣದ ಜೊತೆ ಸಾಹಿತ್ಯ, ಸಂಸ್ಕøತಿ, ಕೌಶಲ್ಯವನ್ನು ಕಲಿಯಿರಿ. ಕುವೆಂಪು, ಒಳ್ಳೆಯ ಪ್ರಾಧ್ಯಾಪಕ, ಜ್ಞಾನಿಗಳು, ಉತ್ತಮ ಆಡಳಿತಗಾರರಾಗಿದ್ದರು.

ಪ್ರಾದೇಶಿಕ ಅಸಮತೋಲನದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ಡಿ.ಎಂ.ನಂಜುಂಡಪ್ಪನವರು ಕುವೆಂಪುರವರ ಸಾಲಿಗೆ ಸೇರುತ್ತಾರೆ ಎಂದು ನೆನಪಿಸಿಕೊಂಡರು.

ಸಾಗರದ ವ್ಯಕ್ತಿತ್ವ ಕುವೆಂಪುರವರದು. ಅವರ ಬರವಣಿಗೆ, ಬದುಕು ವೈಚಾರಿಕವಾಗಿತ್ತು. ವೈಚಾರಿಕತೆ ಎನ್ನುವುದು ಸತ್ಯ. ನಂಬಿಕೆ ಪರಾಮರ್ಶಗೆ ಒಳಪಟ್ಟಾಗ ಸತ್ಯ ತಿಳಿಯುತ್ತದೆ. ಜಾತಿ ಮತ್ತು ಮೌಢ್ಯಗಳಿಗೆ ಧರ್ಮ, ನಂಬಿಕೆ ಆಧಾರವಾಗಿದೆ. ಸತ್ಯದ ದಾರಿ, ತಾರ್ಕಿಕ ನೆಲೆಯಲ್ಲಿ ಬದುಕು ಕಟ್ಟಿಕೊಂಡು ಸಂವಿಧಾನವನ್ನು ಓದಿಕೊಳ್ಳಿ. ಮೌಢ್ಯ, ಮೂಢನಂಬಿಕೆಯನ್ನು ವಿರೋಧಿಸುತ್ತಿದ್ದ ಕುವೆಂಪುರವರು ಜ್ಞಾನ ಹೆಚ್ಚಿಸಿಕೊಳ್ಳಿ ಎನ್ನುವ ಸಂದೇಶವನ್ನು ನೀಡಿದ್ದಾರೆ.

ವೈಜ್ಞಾನಿಕ, ವೈಚಾರಿಕ ಚಿಂತನೆಗಳತ್ತ ಸಾಗಬೇಕಿದೆ. ಪಠ್ಯದ ಹೊರತಾಗಿ ಏನನ್ನು ಬೋಧಿಸದ ಸ್ಥಿತಿ ಇಂದಿನ ಶಿಕ್ಷಣದಲ್ಲಿ ನಿರ್ಮಾಣವಾಗಿದೆ. ನಿರುದ್ಯೋಗ, ಬಡತನ, ಬೆಲೆ ಏರಿಕೆ ಹಿಂದೆ ಮತೀಯ ವ್ಯವಸ್ಥೆಯಿದೆ. ನಂಬಿಕೆಗಳಿಂದ ಹೊರಬರುವುದು ಕಷ್ಟ. ಅದಕ್ಕಾಗಿ ಆತ್ಮವಿಶ್ವಾಸವಿಟ್ಟುಕೊಳ್ಳಿ. ವೃತ್ತಿಗೆ ನಿಷ್ಠರಾಗಿರಬೇಕು. ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಕೌಶಲ್ಯ ಪಡೆದು ವೃತ್ತಿಯಲ್ಲಿ ಯಶಸ್ಸು ಗಳಿಸಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಖಜಾಂಚಿ ಹೆಚ್.ಎಸ್.ಟಿ.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರಕವಿ ಕುವೆಂಪುರವರು ಮೌಢ್ಯ ಕಂದಾಚಾರಗಳನ್ನು ಬಲವಾಗಿ ವಿರೋಧಿಸುತ್ತಿದ್ದರು. ಅವರ ಚಿಂತನೆಗಳು ಏನೆಂಬುದನ್ನು ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮೂಢನಂಬಿಕೆ, ಕಂದಾಚಾರ ಜಾಸ್ತಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕುವೆಂಪುರವರ ಬದುಕು ಮತ್ತು ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳಬೇಕೆಂದರು.

ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಸುಧಾದೇವಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಸರಸ್ವತಿ ಕಾನೂನು ಕಾಲೇಜು ಆಡಳಿತಾಧಿಕಾರಿ ನಟರಾಜ್ ಡಿ.ಹೆಚ್.ಇವರುಗಳು ಕುವೆಂಪು ಕುರಿತು ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *