ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಈಗಂತು 110 ಮಾಡುತ್ತಿದ್ದ. ಇವತ್ ಕಡಿಮೆಯಾಗುತ್ತೆ ನಾಳೆ ಕಡಿಮೆಯಾಗುತ್ತೆ ಅಂತ ಗ್ರಾಹಕರು ಕೂಡ ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಿದ್ದಾರೆ. ಆದ್ರೆ ಕಡಿಮೆಯಾಗುವ ಯಾವ ಲಕ್ಷಣವೂ ಕಾಣ್ತಾ ಇಲ್ಲ.
ಇದೀಗ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘದವರು ರಾಜ್ಯಾದ್ಯಂತ ಮುಷ್ಕರ ನಡೆಸಲು ತೀರ್ಮಾನ ಮಾಡಿದ್ದಾರೆ. ಅಕ್ಟೋಬರ್23 ರಂದು ಲಾರಿ ಮಾಲೀಕರ ಸಂಘ ಮುಷ್ಕರದ ಬಗ್ಗೆ ತೀರ್ಮಾನ ಮಾಡಲಿದ್ದಾರೆ.
ಆದ್ರೆ ಅಷ್ಟರೊಳಗೆ ಸರ್ಕಾರ ಡಿಸೇಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಿದ್ರೆ ಮಾತ್ರ ಲಾರಿಗಳನ್ನ ರಸ್ತೆಗಿಳಿಸಲು ತೀರ್ಮಾನ ಮಾಡಿದ್ದಾರೆ. ಇಲ್ಲಂದ್ರೆ ಮುಷ್ಕರಕ್ಕೆ ಕರೆ ಕೊಡಲು ಸಿದ್ಧರಾಗಿದ್ದಾರೆ. ಬೆಲೆ ಇಳಿಸಲು ಲಾರಿ ಮಾಲೀಕರ ಸಂಘದವರು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.
ಲಾರಿ ಮುಷ್ಕರವಾದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿದೆ. ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ. ಹೀಗಾಗಿ ಸರ್ಕಾರ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನ ನೋಡ್ಬೇಕಿದೆ.