ರಾಯಣ್ಣನ ಮೂರ್ತಿಗೆ ಕಲ್ಲು ಹೊಡೆದವನೇ ಬಂದು ದೂರು ಕೊಟ್ಟಾಗ : ಪೊಲೀಸರಿಗೆ ತಿಳಿದಿದ್ದು ಹೇಗೆ..?

suddionenews
1 Min Read

ಬೆಳಗಾವಿ: ಮೇ 21ರಂದು ಜಿಲ್ಲೆಯ ರಾಯಣ್ಣ ಮೂರ್ತಿಗೆ ಕಲ್ಲು ಹೊಡೆದು ವಿರೂಪಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ಕೂಡ ದಾಖಲಾಗಿತ್ತು. ಪ್ರಕರಣದ ಹಿಂದೆ ಬಿದ್ದಂತ ಪೊಲೀಸರಿಗೆ ಟ್ವಿಸ್ಟ್ ಸಿಕ್ಕಿದ್ದು, ಕಲ್ಲು ಹೊಡೆದವನೆ ದೂರು ಕೊಟ್ಟಿರುವುದು ತಿಳಿದು ಬಂದಿದೆ.

ಪೊಲೀಸರು ಚಂದ್ರಪ್ಪ ಜಣಬರಗಿ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯದಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆಂದು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ರಾಯಣ್ಣನ ಮೂರ್ತಿ ಇದೆ. ಈ ಮೂರ್ತಿಗೆ ಕಲ್ಲು ಎಸೆದು ವಿರೂಪಗೊಳಿಸಿದ್ದರು. ರಾಯಣ್ಣನ ಕಾಲಿನ ಭಾಗವನ್ನು ಹೆಚ್ಚು ಹಾನಿ ಮಾಡಿದ್ದಾರೆ. ಬಳಿಕ ಚಂದ್ರಪ್ಪ ಎಂಬಾತ ಈ ಪ್ರಕರಣ ಸಂಬಂಧ ಠಾಣೆಗೆ ದೂರು ಕೂಡ ನೀಡಿದ್ದರು. ಆದರೆ ಪೊಲೀಸರ ತನಿಖೆ ವೇಳೆ ಆತನೇ ಆರೋಪಿ ಎಂಬುದು ಬಯಲಾಗಿದೆ. ಬೆಳಗಾವಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *