ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ. 07 : ರಾಜ್ಯದಲ್ಲಿ ಆವರಿಸಿರುವ ಭೀಕರ ಬರದಿಂದ ರೈತರು ಬಳಲಿ ಹೋಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡಿಸಲು ಭಾರತೀಯ ಜನತಾ ಪಕ್ಷ ಕೈಗೊಂಡಿರು ಬರ ಅಧ್ಯಯನ ತಂಡ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಕೊಳಾಳ್ ಗ್ರಾಮಕ್ಕೆ ಭೇಟಿ ನೀಡಿತ್ತು.
ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಹೆಚ.ತಿಪ್ಪಾರೆಡ್ಡಿ, ಬಿ.ಪಿ.ಹರೀಶ್, ರಾಮಚಂದ್ರ, ಮುರುಳಿ ಅವರ ತಂಡ ಮಂಗಳವಾರ ಭರಮಸಾಗರ ಹೋಬಳಿಯ ಕೊಳಾಳ್ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಸುತ್ತಮತ್ತಲಿನ ಸುಮಾರು 8 ಸಾವಿರ ಎಕರೆ ಮೆಕ್ಕೆಜೋಳ ಬೆಳೆ ನಷ್ಟವಾಗಿದ್ದು, ಗ್ರಾಮದ ಲೋಕೇಶ್ ಅವರ ಜಮೀನಿಗೆ ಭೇಟಿ ನೀಡಿ ಅಲ್ಲಿನ ಮೆಕ್ಕೆಜೋಳ ಬೆಳೆಯನ್ನು ವಿಕ್ಷಣೆ ಮಾಡಿದರು.
ಸಾವಿರಾರು ರೂ.ಗಳಗಳನ್ನು ಖರ್ಚು ಮಾಡಿ ಹುಳಮೆ ಮಾಡಲಾಗಿದೆ. ಆದರೆ ಈ ಭಾರೀ ಮಳೆ ಬಾರದ ಕಾರಣ ಬೆಳೆ ನಷ್ಟ ಆಗಿದೆ. ಸಾಲ ಮಾಡಿ ಹುಳಮೆ ಮಾಡಲಾಗಿದೆ. ಹಾಕಿದ ಬಂಡವಾಳವನ್ನು ಕಾಣದ ಸ್ಥಿತಿ ಎದುರಾಗಿದೆ ಎಂದು ರೈತ ಲೋಕೇಶ್ ತಮ್ಮ ಅಳಲು ತೋಡಿಕೊಂಡರು.
ನಂತರ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯವು ಎಂದೂ ಕಾಣದಂತಹ ಭೀಕರ ಬರವನ್ನು ಎದುರಿಸುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಚ್ಚಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಿ ರೈತರ ಸಮಸ್ಯೆಗಳನ್ನು ಈಡೇರಿಸಲು ಭಾರತೀಯ ಜನತಾ ಪಕ್ಷ 17 ತಂಡಗಳನ್ನು ಮಾಡಿಕೊಂಡು ಪ್ರವಾಸ ಮಾಡುತ್ತಿದ್ದೆವೆ ಎಂದರು.
ಶೇಕಡ 30% ಮಾತ್ರ ಮಳೆ ಆಗಿದ್ದು, ಸಂಪೂರ್ಣ ರಾಜ್ಯವೇ ಬರ ಆವರಿಸಿದೆ. ರೈತರಿಗೆ ಆಗಿರುವ ನಷ್ಟ. ಜನ ಜಾನುವಾರುಗಳ ಸ್ಥಿತಿಗತಿ ಭೀಕರವಾಗಿದೆ. ಆದರೂ ಕೂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರ ರೈತರನ್ನು ಅತ್ಯಂತ ನಿರ್ಲಕ್ಷ ಧೋರಣೆಯಿಂದ ನೋಡುತ್ತಿದೆ ಇದರ ವಿರುದ್ದವಾಗಿ ಬಿಜೆಪಿ ಜನಪರ ಧ್ವನಿ ಎತ್ತಬೇಕು ಎಂದು ಬರ ಅಧ್ಯಯನ ಮಾಡುತ್ತಿದ್ದು, ಸಿದ್ದರಾಮಯ್ಯ ಈಗ ಎಚ್ಚೆತ್ತುಕೊಂಡು, ಸಚಿವರಿಗೆ ಪ್ರವಾಸ ಮಾಡಲು ಹೇಳಿದ್ದಾರೆ. ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿದ್ಯುತ್ ಕ್ಷಾಮ ಹೆಚ್ಚಿದೆ ಎಂಬುದು ಗೊತ್ತಿದ್ದರು ಈಗ 7 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಜನರ, ರೈತರ ಹಾಗೂ ಜಾನುವಾರುಗಳ ಸ್ಥಿತಿಗತಿಯನ್ನು ಅರಿತು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…