in ,

ಚಿತ್ರದುರ್ಗ ನಗರಸಭೆಯ ಅಯವ್ಯಯ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಿ.ಸುರೇಶ್

suddione whatsapp group join

ವರದಿ ಮತ್ತು ಫೋಟೋ ಕೃಪೆ
                        ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಜ.18) :  ನಗರಸಭೆ 2023-24ನೇ ಸಾಲಿಗೆ ಉಳಿತಾಯದ ಅಯವ್ಯಯವನ್ನು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಬಿ.ಸುರೇಶ್ ಮಂಡಿಸಿದರು.

2023-24ನೇ ಸಾಲಿನಲ್ಲಿ ನಗರಸಭೆಯ ಪ್ರಾರಂಭಿಕ ಶುಲ್ಕು 39,37,50,000 ರೂಗಳಾಗಿದ್ದು, ರಾಜಸ್ವ ಜಮಾದಿಂದ 59,26,30,000 ರೂ, ಬಂಡವಾಳ ಜಮಾದಿಂದ 1,05, ಲಕ್ಷ ರೂ. ಅಮಾನತ್ತ್ ಖಾತೆ ಜಮಾದಿಂದ 22,71,50,000 ರೂ, ಸೇರಿ 122,40,30,000 ರೂ ಜಮಾ ಆಗಲಿದ್ದು, ರಾಜಸ್ವ ಪಾವತಿಗೆ 49,24,45,000 ರೂ, ಬಂಡವಾಳ ಪಾವತಿಗೆ 61,02,ಲಕ್ಷ ರೂ, ಅಮಾನತ್ತು ಪಾವತಿಗೆ 11,16,ಲಕ್ಷ ರೂಗಳಾಗಲಿದ್ದು, ಒಟ್ಟು 121,42,45,000 ರೂಗಳಾಗಲಿದ್ದು 97.85,000 ಉಳಿತಾಯದ ಆಯವ್ಯಯವಾಗಿದೆ ಎಂದರು.

2023-24ನೇ ಸಾಲಿಗೆ ಚಿತ್ರದುರ್ಗ ನಗರಸಭೆಗೆ 22.18 ಕೋಟಿ ರೂಗಳನ್ನು ನಿರೀಕ್ಷಿತ ಸ್ವಂತ ಆದಾಯ ಬರಲಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ನಗರಸಭೆಗೆ 44.20 ಕೋಟಿ ರೂ ಅನುದಾನವನ್ನು ನಿರೀಕ್ಷಿಸಲಾಗಿದೆ.

ನಾಗರೀಕರಿಗೆ ದಿನ ನಿತ್ಯದ ಅತ್ಯವಶ್ಯಕವಾಗಿರುವಂತಹ ಕುಡಿಯುವ ನೀರು, ಬೀದಿ ದೀಪ, ನೈರ್ಮಲೀಕರಣ, ಸಾರ್ವಜನಿಕ ಶೌಚಾಲಯಗಳು, ಹಸೀರೀಕರಣ ಮತ್ತು ಉದ್ಯಾನವನಗಲ ನಿರ್ವಹಣೆಗೆ ಮೂದಲ ಅದ್ಯತೆಯನ್ನು ನೀಡಲಾಗಿದೆ.ಇದ್ದಲ್ಲದೆ ನಗರಸಭೆಯಿಂದ ನಗರದ ಮೂರು ಕಡೆಗಳಲ್ಲಿ ವಾಣಿಜ್ಯ ಸಂರ್ಕೀಣಗಳನ್ನು ನಿರ್ಮಾಣ ಮಾಡಲಾಗುವುದು. ರಸ್ತೆಗಳ ಅಭೀವೃದ್ದಿ, ಪಾದಚಾರಿ ರಸ್ತೆಗಳಿಗೆ ಪೇವರ‍್ಸ್ ಅಳವಡಿಕೆಯ ಮೂಲಕ ನಗರದ ಸೌಂದರ್ಯ ಮತ್ತು ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಹೊಸ ವಾರ್ಡಗಳಲ್ಲಿ ಆದಾಯ ಮತ್ತು ಅನುದಾನದಿಂದ ನೀರಿನ ಅವಶ್ಯಕತೆ ಇರುವ ಕಡೆಗಳಲ್ಲಿ ಕೊಳವೆ ಬಾವಿಯನ್ನು ಕೊರೆದು ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮತ್ತು ಪೈಪುಲೈನ್ ಆಳವಡಿಕೆ ಮತ್ತು ದುರಸ್ತಿಗಾಗಿ 5 ಕೋಟಿ ರೂ.ಗಳನ್ನು ತೆಗದಿರಿಸಲಾಗಿದೆ.ಒಳಚರಂಡಿ ಅಭೀವೃದ್ದಿ ಮತ್ತು ನಿರ್ವಹಣೆಗಾಗಿ 5 ಕೋಟಿ, ತ್ಯಾಗರಾಜ ಮಾರುಕಟ್ಟೆ ಮತ್ತು ಮಾಂಸದ ಮಾರುಕಟ್ಟೆ ಜಾಗದಲ್ಲಿ ಹೂಸದಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ 9 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಸ್ವಚ್ಚತೆ ನಿರ್ವಹಣೆ, ವಾಹನ ಖರೀದಿ, ಘನತಾಜ್ಯ ವಿಲೇವಾರಿ ಘಟಕಗಳ ಕಸ ವಿಂಗಡಣೆಗಾಗಿ ಪಾರಂಪರಿಕ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಯಂತ್ರಗಳ ಅಳವಡಿಕೆ, ಮುಕ್ತಿವಾಹನ ಖರೀದಿ ಸ್ಮಶಾನಗಳ ಅಭೀವೃದ್ದಿಗಾಗಿ 10 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ ಎಂದು ಸುರೇಶ್ ತಿಳಿಸಿದರು.

ನಗರದ ವಿವಿಧ ವಾರ್ಡಗಳಲ್ಲಿ ಹೊಸದಾಗಿ ವಿದ್ಯುತ್ ಕಂಬಗಳ ಅಳವಡಿಕೆ, ದುರಸ್ತಿಗಾಗಿ 5 ಕೋಟಿ, ನಗರದಲ್ಲಿ ಹಾಳಾಗಿರುವ ರಸ್ತೆ, ಚರಂಡಿಗಳ ಅಬೀವೃದ್ದಿಗಾಗಿ 5 ಕೋಟಿ, ನಗರದ ವಿವಿಧ ರಸ್ತೆಗಳ ಹಸೀರೀಕರಣ ಹಾಗೂ ಸಾರ್ವಜನಿಕ ಉದ್ಯಾನವನ ಅಭೀವೃದ್ದಿಗಾಗಿ 7 ಕೋಟಿ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಕಲ್ಯಾಣ ಅಭೀವೃದ್ದಿಗಾಗಿ 1.30 ಕೋಟಿ, ಇತರೆ ಬಡ ಜನಾಂಗದವರ ವರ್ಗದವರ ಕಲ್ಯಾಣಭಿವೃದ್ದಿಗಾಗಿ 70 ಲಕ್ಷ, ಅಂಗವಿಕಲರ ಕಲ್ಯಾಣಾಭಿವೃದ್ದಿಗಾಗಿ ರೂ.40 ಲಕ್ಷ, ಕ್ರೀಡಾ ಚಟುವಟಿಕೆಗಳಿಗಾಗಿ 2 ಲಕ್ಷ ರೂ. ಸಂಘ ಸಂಸ್ಥೆಗಳಿಗೆ ತರಬೇತಿ ಸಹಾಯಧನ ಪಾವತಿ ಇತರೆ ಕಾರ್ಯಕ್ರಮಗಳಿಗಾಗಿ ರೂ.50 ಲಕ್ಷ ರೂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಮುಂದಿನ  ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲು 12 ಲಕ್ಷ ರೂ. ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿರುವ ಫಲಾನುಭವಿಗಳಿಗೆ ಸಹಾಯಧನ ಪಾವತಿಸಲು 10 ಲಕ್ಷ ರೂ. ವೃತ್ತಿಪರ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಕಂಪ್ಯೋಟರ್  ಖರೀದಿಗಾಗಿ 10 ಲಕ್ಷ ರೂ. ಪೌರ ಕಾರ್ಮೀಕರ ಕುಟುಂಬದವರಿಗೆ ವಿದ್ಯಾಭ್ಯಾಸಕ್ಕೆ, ಸ್ವಯಂ ಉದ್ಯೋಗಕ್ಕೆ ಮತ್ತು ಆರೋಗ್ಯ ತಪಾಸಣೆಗಾಗಿ ಸಹಾಯಧನ 12 ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳೀದರು.

ಬಡ ಜನಾಂಗದ ವರ್ಗದವರಿಗೆ ವ್ಯಾಸಾಂಗ ಮಾಡುತ್ತಿರುವವರ ವಿದ್ಯಾಭ್ಯಾಸದ ಸಹಾಯಧನಕ್ಕಾಗಿ 5 ಲಕ್ಷ ರೂ. ಅಂಗವಿಕಲರಿಗೆ ತ್ರಿಚಕ್ರ ವಾಹನ ಖರೀದಿಗಾಗಿ 10 ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ. ಈ ಭಾರಿಯ ಆಯವ್ಯಯವೂ ಉಳಿತಾಯದ ಆಯವ್ಯಯವಾಗಿದ್ದು, 97 ಲಕ್ಷ 85 ಸಾವಿರ ರೂ.ಗಳನ್ನು ಉಳಿತಾಯ ಮಾಡಲಾಗಿದೆ ಎಂದು ಸುರೇಶ್ ಸಭೆಗೆ ತಿಳಿಸಿದಾಗ ಸಭೆಯ ಸದಸ್ಯರು ಕರಾಡತನ ಮಾಡುವುದರ ಮೂಲಕ ಅನುಮೋದನೆಯನ್ನು ನೀಡಿತು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ಯೋಜನಾ ನಿರ್ದೇಶಕರಾದ ಸತೀಶ್ ರೆಡ್ಡಿ ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಅಣ್ಣಾಮಲೈರನ್ನು ಪೊಲೀಸರಿಗೆ ಒಪ್ಪಿಸಬೇಕು : ಮತ್ತೆ ಗುಡುಗಿದ ನಟಿ ಗಾಯತ್ರಿ ರಘುರಾಮ್..!

ಮೂರು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ