Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಧರ್ಮಸಂಸ್ಥಾಪನೆಯಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಿಯ ಪಾತ್ರ ಅಪಾರವಾದದ್ದು : ತಹಶೀಲ್ದಾರ್ ರಘುಮೂರ್ತಿ

Facebook
Twitter
Telegram
WhatsApp

 

ಚಳ್ಳಕೆರೆ, (ಮೇ.11) : ತ್ರೇತಾ ಯುಗದ ಸೀತೆ ದ್ವಾಪರ ಯುಗದ ದ್ರೌಪದಿ ಹೇಗೆ ಧರ್ಮ ಸಂಸ್ಥಾಪನೆಗೆ ಕಾರಣರಾದರು. ಹಾಗೆಯೇ ಶ್ರೀ ಕನ್ಯಕಾಪರಮೇಶ್ವರಿ ದೇವಿ ವಿಷ್ಣುವರ್ಧನ ರಾಜನ ಕ್ರೌರ್ಯವನ್ನು ಹಿಮ್ಮೆಟ್ಟಿಸಿ ಧರ್ಮಸಂಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾಳೆಂದು ತಹಶೀಲ್ದಾರ್ ರಘುಮೂರ್ತಿ ಹೇಳಿದರು.

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಏರ್ಪಡಿಸಿದ್ದ  ವಾಸವಿ ಕನ್ಯಕಾಪರಮೇಶ್ವರಿ ಜಯಂತೋತ್ಸವ ವನ್ನು ಉದ್ದೇಶಿಸಿ ಮಾತನಾಡಿ, ತ್ರೇತಾಯುಗದಲ್ಲಿ ಸೀತೆ ಅಶೋಕವನದಲ್ಲಿ ಮೌನ ಪ್ರತಿಭಟನೆಯ ಮುಖಾಂತರ ಒಂಟಿಯಾಗಿ ಕಾಲಕಳೆದು ರಾವಣನ ಸಂಹಾರಕ್ಕೆ ಹೇಗೆ ಕಾರಣರಾದರು ಮತ್ತು ದ್ವಾಪರಯುಗದಲ್ಲಿ ದ್ರೌಪತಿ ಛಲ ಮತ್ತು ಹೋರಾಟದಿಂದ ಕುರುಕ್ಷೇತ್ರಕ್ಕೆ ಹೇಗೆ ನಾಂದಿ ಹಾಡಿ ಧರ್ಮ ಪ್ರತಿಷ್ಠಾಪನೆಗೆ ಕಾರಣಳಾದಳೋ ಹಾಗೆಯೇ ಈ ಸಮಾಜಕ್ಕೆ ವಾಸವಿ ಕನ್ಯಕಾಪರಮೇಶ್ವರಿ ರವರ ಪರಂಪರೆ ಮತ್ತು ಇತಿಹಾಸ ಅಷ್ಟೇ ಇದೆ.

ತನ್ನ ರಾಜ್ಯದ ಸೈನಿಕರ ಪ್ರಾಣ ಸಂರಕ್ಷಣೆ ಮಾಡಲು ಇವರು ಅಗ್ನಿ ಪ್ರವೇಶ ಮಾಡಿದ್ದು ಧರ್ಮವನ್ನು ಸಂರಕ್ಷಣೆ ಮಾಡಲು ಅಪ್ರತಿಮ ಸುಂದರಿ ಯಾಗಿದ್ದರು. ಲೌಕಿಕ ಬದುಕನ್ನು ತ್ಯಾಗ ಮಾಡಿ ಶಿವನೊಂದಿಗೆ ಅನುರಕ್ತಳಾಗಿ ನ್ಯಾಯ ನೀತಿ ಧರ್ಮಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿ ಪರೋಪಕಾರ ಪಾರಮಾರ್ಥದ ಕಡೆಗೆ ಮನುಕುಲವನ್ನು ತೆಗೆದುಕೊಂಡು ಹೋದಂತ ಸಾತ್ವಿಕ ಮಹಿಳೆ. ಇವರ ಆದರ್ಶಗಳನ್ನು ಇಂದಿನ ಪೀಳಿಗೆಯೂ ಅನುಕರಣಿ ಸುವುದು ಅಗತ್ಯವಾಗಿದೆ.

ಆರ್ಯವೈಶ್ಯ ಸಮಾಜವು ಸ್ವಾಭಿಮಾನದ ಮೂಲಕ ಸ್ವಾವಲಂಬಿ ಬದುಕನ್ನು ದೇಶದಾದ್ಯಂತ ಕಟ್ಟಿಕೊಂಡು ಇತರೆ ಸಮಾಜಕ್ಕೆ ಮಾದರಿಯಾಗಿದೆ. ತಮ್ಮ ಸಮಾಜದ ಮಕ್ಕಳು ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ್ದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾಜದ ವ್ಯಕ್ತಿಗಳು ಇನ್ನೂ ಎತ್ತರಕ್ಕೆ ಬೆಳೆಯಬೇಕು ಸಮಾಜ ಅತ್ಯಂತ ಉತ್ತಮವಾದ  ಸಂಸ್ಕಾರವನ್ನು ಹೊಂದಿದ್ದು ಸಾತ್ವಿಕ ಸಮಾಜವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ರಘುನಾಥ್ ಬಾಬು ಸಮಸ್ತ ಆರ್ಯವೈಶ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!