ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಬಾದಾಮಿಗೆ ಹೋಗದೆ ವರುಣಾ ಕ್ಷೇತ್ರದಲ್ಲಿಯೇ ಪರೀಕ್ಷೆಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯಲ್ಲಿ ವಿ ಸೋಮಣ್ಣ ಅವರನ್ನು ನಿಲ್ಲಿಸಲಾಗಿದೆ. ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗ ಸಂಸದ ವಿ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಅವರು ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗಿ ಬಿಡುತ್ತೆ. ಲೋಕಸಭಾ ಚುನಾವಣಾ ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಿಲ್ಲಿಸಿಕೊಂಡು ಮೋದಿ ಮುಳುಗಿ ಹೋಗೋ ಗುಡುಗಿದರು. ಆದರೆ ರಾಜ್ಯದಲ್ಲಿ ಕೇವಲ ಒಂದೇ ಸೀಟು ಬಂದಿದ್ದು.
36 ಸಾವಿರ ವೋಟುಗಳಲ್ಲಿ ಸೋತು ಬಾದಾಮಿಗೆ ಹೋಗುವುದು ಏನಿತ್ತು..? ವರುಣಾ ಕ್ಷೇತ್ರದಲ್ಲಿ ಒಂದು ಲಕ್ಷ ವೋಟಿನಲ್ಲಿ ಗೆಲ್ಲುವುದಕ್ಕೆ ಸಾಧ್ಯನಾ..? ಸಿದ್ದರಾಮಯ್ಯ ಅವರು ಒಬ್ಬ ವಿಪಕ್ಷ ನಾಯಕನಾಗಿ ಮಾತನಾಡುವುದು ಇದೆನಾ..? ವಿ ಸೋಮಣ್ಣ ಅವರು ಹೊರಗಿನವರು ಎಂದು ಹೇಳುವ ಸಿದ್ದರಾಮಯ್ಯ ಅವರು ಬಾದಾಮಿಗೆ ಯಾಕೆ ಹೋದರು ಎಂದು ಪ್ರಶ್ನಿಸಿದ್ದಾರೆ.





GIPHY App Key not set. Please check settings