ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಏ.16) : ನಗರದ ವೀರಶೈವ ಸಮಾಜದವತಿಯಿಂದ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾರ್ಚನೆ ಕಾರ್ಯಕ್ರಮವನ್ನು ಸಾಂಗವಾಗಿ ನೇರವೇರಿಸಲಾಯಿತು.
ಇಂದು ಮುಂಜಾನೆ ನಗರದ ರಂಗಯ್ಯನ ಬಾಗಿಲು ಬಳಿಯ ಉಜ್ಜಯನಿ ಮಠದ ಆವರಣದಿಂದ ಪ್ರಾರಂಭವಾದ ಗುಗ್ಗಳವು ನಗರದ ದೊಡ್ಡಪೇಟೆ, ಚಿಕ್ಕಪೇಟೆ, ಆನೇಬಾಗಿಲು, ಸಂತೇಪೇಟೆಯ ಮೂಲಕ ನೀಲಕಂಠೇಶ್ವರ ಸ್ವಾಮಿಯ ದೇವಾಲಯವನ್ನು ತಲುಪಿತು.
ಈ ಗುಗ್ಗಳದಲ್ಲಿ ಹರಪನಹಳ್ಳಿ ಪಟ್ಟಣದ ಮೇಗಳ ಪೇಟೆಯ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿವತಿಯವರು ಭಾಗವಹಿಸಿದ್ದರು.
ಗುಗ್ಗಳ ಸಾಗಿದ ದಾರಿಯುದ್ದಕ್ಕೂ ಗುಗ್ಗಳ ದೇವಸ್ಥಾನ ಸಮಿತಿಯವರು ವೀರಭದ್ರನ ಬಗ್ಗೆ ಒಡಪುಗಳನ್ನು ಹೇಳುವುದರ ಮೂಲಕ ಆತನ ನಾಮಸ್ಮರಣೆಯನ್ನು ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡು ದಾರಿಯುದ್ದಕ್ಕು ಭಕ್ತಾಧಿಗಳು ತಮ್ಮ ಮನೆಯ ಮುಂದೆ ಗುಗ್ಗಳ ಆಗಮಿಸುವ ಸಮಯದಲ್ಲಿ ನೀರನ್ನು ಹಾಕುವುದರ ಮೂಲಕ ಸ್ವಾಗತಿಸಿದರು. ಈ ಸಮಯದಲ್ಲಿ ವೀರಭದ್ರ ಸ್ವಾಮಿಗೆ ಹಣ್ಣು ಕಾಯಿಯನ್ನು ಮಾಡಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ದಾರಿಯುದ್ದಕ್ಕೂ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಭಕ್ತಾಧಿಗಳು ಮಜ್ಜಿಗೆ, ಮಾನಕದ ವ್ಯವಸ್ಥೆಯನ್ನು ಮಾಡಿದ್ದರು.
ನೀಲಕಂಠಶ್ವೇರ ಸ್ವಾಮಿಯ ದೇವಾಲಯದ ಮುಂದೆ ಸುಮಾರು 2 ಅಡಿ ಆಗಲ, 6 ಅಡಿ ಉದ್ದದ ಕೆಂಡದ ಗುಂಡಿಯನ್ನು ತೆಗದಿದ್ದು ಅದರಲ್ಲಿ ನಿನ್ನೆ ರಾತ್ರಿಯಿಂದಲೇ ಕೆಂಡವನ್ನು ಮಾಡುವುದರ ಮೂಲಕ ಕೆಂಡವನ್ನು ತುಳಿಯಲು ಅನುಕೂಲವನ್ನು ಮಾಡಿಕೂಡಲಾಗಿತ್ತು.
ಕೆಂಡದ ಗುಂಡಿಗೆ ಎಡೆಯನ್ನು ಅರ್ಪಿಸಿ, ಅದರಲ್ಲಿ ಮಣ್ಣಿನ ಮಡಿಕೆಯಲ್ಲಿ ಹಾಲನ್ನು ಕಾಯಿಸಿ ನಂತರ ವೀರಭದ್ರನ ವೇಷವನ್ನು ತೊಟ್ಟ ಪುರುವಂತರು ಮೊದಲು ಕೆಂಡವನ್ನು ತುಳಿದು ದೇವಾಲಯದ ಒಳ ಹೋದ ಮೇಲೆ ನಂತರ ಭಕ್ತಾಧಿಗಳು ಕೆಂಡವನ್ನು ತುಳಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷರಾದ ಎಲ್.ಬಿ. ರಾಜಶೇಖರ್ ಸೇರಿದಂತೆ ಇತರೆ ಪದಾಧಿಕಾರಿಗಳು ಗುಗ್ಗಳದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…