Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ಪ್ರಸನ್ನ ಗಣಪತಿಯ ಸೇವಾ ಸಮಿತಿಯವರು ಭಾವೈಕ್ಯತೆಯನ್ನು ಮೂಡಿಸುವಂತ ಕೆಲಸವನ್ನು ಮಾಡಿದ್ದಾರೆ :  ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                            ಮೊ : 87220 22817

ಚಿತ್ರದುರ್ಗ,(ಸೆ.09) :  ಬಾಲಗಂಗಾಧರನಾಥ್‍  ತಿಲಕ್‍ರವರು ಗಣಪತಿಯ ಉತ್ಸವವನ್ನು ಪ್ರಾರಂಭ ಮಾಡಿ ಜನ ಜಾಗೃತಿಯನ್ನು ಮೂಡಿಸುವಂತ ಕೆಲಸವನ್ನು ಮಾಡಿದರೆ, ಚಿತ್ರದುರ್ಗ ನಗರದಲ್ಲಿ ಶ್ರೀ ಪ್ರಸನ್ನ ಗಣಪತಿಯ ಸೇವಾ ಸಮಿತಿಯವರು ಕಳೆದ 65ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ನಗರದ ಜನತೆಯಲ್ಲಿ ಭಾವೈಕ್ಯತೆಯನ್ನು ಮೂಡಿಸುವಂತ ಕೆಲಸವನ್ನು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.

ನಗರದ ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿಯವತಿಯಿಂದ ಕಳೆದ ಅ.31 ರಿಂದ ನಡೆಯುತ್ತಿರುವ 65ನೇ ವರ್ಷದ ಗಣಪತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಿತಿ ಯವರು ಕಳೆದ 65 ವರ್ಷದಿಂದ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಬರುತ್ತಿರುವುದು ಸುಲಭದ ಮಾತಲ್ಲ, ಯಾವುದೇ ರೀತಿಯ ತೊಂದರೆ ಇಲ್ಲದೆ ನಿರ್ವಿಘ್ನವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.

ನಾವು ಸಹಾ ಹಳ್ಳಿಯಿಂದ ಬಂದವರಾಗಿದ್ದೇವೆ, ನಾವು ಬಂದ ಸಮಯದಲ್ಲಿಯೇ ಶ್ರೀಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ನಾವು ಇಲ್ಲಿಗೆ ಬಂದು 65ವರ್ಷವಾದಂತೆ ಆಗಿದೆ. ಗಣಪತಿ ಇಷ್ಟು ವರ್ಷ ನಿರಂತರವಾಗಿ ಭಕ್ತಾಧಿಗಳಿಂದ ಪೂಜೆಯನ್ನು ಪಡೆಯುತ್ತಿದ್ದಾನೆ ಎಂದರೆ ಇದು ಆತನ ಇಷ್ಠಾರ್ಥವಾಗಿದೆ. ಮುಂದಿನ ದಿನದಲ್ಲಿಯೂ ಸಹಾ ಗಣಪತಿ ಪೂಜೆಯನ್ನು ಭಕ್ತಾಧಿಗಳಿಂದ ಪಡೆಯುವಂತಾಗಲೀ ಎಂದು ನವೀನ್ ಆಶಿಸಿದರು.

ಗಣಪತಿಯ ಪೂಜೆ ನಿಮಿತ್ತ ಮಾತ್ರ, ಇದರಿಂದ ಮತ್ತೋಂದೆಡೆ ಈ ವೇದಿಕೆಯಲ್ಲಿ ವಿವಿಧ  ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ, ಇದು ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಇದರಿಂದ ಅವರಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ನೀಡಿದಂತೆ ಆಗುತ್ತದೆ. ಈ ಕಾರ್ಯ ಮತ್ತಷ್ಟು ಹೆಚ್ಚಾಗಲೀ ಯುವ ಪ್ರತಿಭೆಗಳು ಹೊರ ಬರಲು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ತಿಳಿಸಿದರು.

ನಗರಸಭಾ ಸದಸ್ಯರಾದ ಶಶಿಧರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ಪೂಜಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಬೆಳಕಿನ ಕೂರತೆ ಇದೆ. ನಿಮ್ಮ ಅನುದಾನದಲ್ಲಿ ಹೈಮಾಸ್ಕ್ ಬೀದಿ ದೀಪವನ್ನು ಅಳವಡಿಸುವುದರ ಮೂಲಕ ಇಲ್ಲಿಎ ಬೆಳಕನ್ನು ನೀಡಬೇಕು, ಅದೇ ರೀತಿ  ಅಕ್ಕ-ಪಕ್ಕದಲ್ಲಿ ಗುಡ್ಡ ಇದೆ ಅಲ್ಲಿ ಉತ್ತಮವಾದ ಉದ್ಯಾನವನ್ನು ನಿರ್ಮಾಣ ಮಾಡಿದರೆ ಚನ್ನಾಗಿ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿಧರ್, ಶ್ರೀ ಪ್ರಸನ್ನ ಗಣಪತಿಯ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧವ್,ಉಪಾಧ್ಯಕ್ಷರಾದ ರಾಜಕುಮಾರ್,ನಾಗರಾಜ್ ಬೇದ್ರೇ,ಪ್ರಧಾನ ಕಾರ್ಯದರ್ಶೀ ಶಿವಕುಮಾರ್, ಸಹಾ ಕಾರ್ಯದರ್ಶೀ ನಾರಾಯಣರಾವ್,ನಿರ್ದೇಶಕರಾದ ಶ್ಯಾಂ ಪ್ರಸಾದ್ ಸ್ಥಪತಿ, ಗಜೇಂದ್ರ, ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!