Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ನರಸಿಂಹ ಜಯಂತಿಯ ಮಹತ್ವ ನಿಮಗೆಷ್ಟು ಗೊತ್ತು ? ಶ್ರೀಮತಿ ಸುಜಾತ ಪ್ರಾಣೇಶ್ ಅವರ ವಿಶೇಷ ಲೇಖನ

Facebook
Twitter
Telegram
WhatsApp

ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕಾಗಿಯೇ ಭಗವಂತನು ಭುವಿಯಲ್ಲಿ ಅವತರಿಸಿ ದುಷ್ಟ ಸಂಹಾರ ಮಾಡಿ ಭಕ್ತರನ್ನು ರಕ್ಷಿಸುವನು.

ಶ್ರೀ ಮಹಾವಿಷ್ಣುವು ಇದೇ ಕಾರಣಕ್ಕಾಗಿ ದಶಾವತಾರ ವನ್ನು ಎತ್ತಬೇಕಾಯಿತು.
ಶ್ರೀಹರಿಯ ನಾಲ್ಕನೇ ಅವತಾರವೇ ನರಸಿಂಹಾವತಾರ .ಅಸುರನಾದ ಹಿರಣ್ಯಕಶಿಪುವಿನ ಸಂಹಾರಕ್ಕಾಗಿಯೇ ಈ ಅವತಾರವಾಯಿತು. ತಮ್ಮನಾದ ಹಿರಣ್ಯಾಕ್ಷನನ್ನು ಶ್ರೀಹರಿಯು ವರಾಹ ಅವತಾರವನ್ನೆತ್ತಿ ಸಂಹಾರ ಮಾಡಿದಾಗ ಅಪಾರ ಕ್ರೋಧದಿಂದ ವಿಷ್ಣುವಿನ ಮೇಲೆ ಹಗೆ ಸಾಧಿಸಲು ಹಿರಣ್ಯಕಶಿಪು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸು ಮಾಡಿ ವರ ಬೇಡುತ್ತಾನೆ.

ಅಮರತ್ವದ ವರ ಪಡೆಯಲು ಸಾಧ್ಯವಿಲ್ಲದುದರಿಂದ ತಣ್ಣಗೆ ಹಗಲಾಗಲೀ ಮಧ್ಯಾಹ್ನ ದಲ್ಲಾಗಲಿ ರಾತ್ರಿಯಲ್ಲಾಗಲೀ ಮೃಗ ಪಕ್ಷಿ ಜಂತುಗಳಿಂದ ಆಗಲಿ ಯಕ್ಷ ಕಿನ್ನರ ಮಾನವ ದೇವತೆಗಳಿಂದಾಗಲಿ ಮನೆಯ ಒಳಗಾಗಲೀ ಹೊರಗಾಗಲೀ ಯಾವುದೇ ಆಯುಧಗಳಿಂದಾಗಲೀ ಸಾವು ಬಾರದಿರಲಿ ಎಂದು ವರ ಬೇಡುತ್ತಾನೆ. ಬ್ರಹ್ಮನ ವರಪ್ರಸಾದದಿಂದ ಗರ್ವಿತನಾದ ಹಿರಣ್ಯಕಶಿಪುವಿನ ಅಟ್ಟಹಾಸ ಮೇರೆ ಮೀರುತ್ತದೆ.

ರಾಜ್ಯದ ಎಲ್ಲರೂ ತನ್ನನ್ನೇ ದೇವರೆಂದು ಪೂಜಿಸಬೇಕೆಂದು ಆಜ್ಞೆ ಮಾಡುತ್ತಾನೆ .ಹರಿ ಭಕ್ತರನ್ನು ಹಿಂಸಿಸುತ್ತಾನೆ .ಹಿರಣ್ಯ ಕಶಿಪುವಿನ ಪತ್ನಿ ಕಯಾದು ಅವನು ತಪಸ್ಸಿಗೆ ಹೋಗುವ ವೇಳೆಯಲ್ಲಿ ಗರ್ಭಿಣಿಯಾಗಿರುತ್ತಾಳೆ.
ನಾರದರು ಅವಳಿಗೆ ಆಶ್ರಯ ನೀಡುತ್ತಾರೆ .ಶ್ರೀ ಹರಿಯ ಮಹಿಮೆಗಳನ್ನು ಕತೆಯ ರೂಪದಲ್ಲಿ ಅವಳಿಗೆ ಹೇಳುತ್ತಾರೆ. ಗರ್ಭಸ್ಥ ಶಿಶು ಇದನ್ನೆಲ್ಲ ಆಲಿಸುತ್ತದೆ .ಜನಿಸಿದ ಗಂಡು ಮಗುವಿಗೆ ಪ್ರಹ್ಲಾದ ನೆಂದು ನಾಮಕರಣ ಮಾಡುತ್ತಾರೆ .

ಪ್ರಹ್ಲಾದನು ಶ್ರೀಹರಿಯ ಮಹಾ ಭಕ್ತನಾಗುತ್ತಾನೆ .ಸದಾ ಹರಿಸ್ಮರಣೆ ಮಾಡುತ್ತಿರುತ್ತಾನೆ .ಮಗನ ಹರಿಭಕ್ತಿಯನ್ನು ಕಂಡು ಕ್ರೋಧಾವಿಷ್ಟನಾಗಿ ಹಿರಣ್ಯಕಶಿಪು ಮಗನ ಮನ ಬದಲಿಸಲು ವ್ಯರ್ಥ ಪ್ರಯತ್ನ ಮಾಡುತ್ತಾನೆ . ಅದು ಅಸಾಧ್ಯವಾದಾಗ ಮಗನನ್ನೇ ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ . ಭಕ್ತನಾದ ಪ್ರಹ್ಲಾದನನ್ನು ಶ್ರೀಹರಿಯು ರಕ್ಷಿಸುತ್ತಾನೆ . ಶ್ರೀಹರಿಯನ್ನು ಹುಡುಕಲು ಅಸಾಧ್ಯವಾದಾಗ ಹಿರಣ್ಯಕಶಿಪು ಮಗನನ್ನು ಹರಿಯ ನೆಲೆಯಲ್ಲಿ ಎಂದು ಕೇಳಿದಾಗ ಪ್ರಹ್ಲಾದನು ಅಣುರೇಣು ತೃಣ ಕಾಷ್ಠದಲ್ಲಿ ಎಲ್ಲೆಲ್ಲೂ ಭಗವಂತ ನಿರುವನೆಂದು ನುಡಿಯುತ್ತಾನೆ.

ಆಗ ಹಿರಣ್ಯಕಶಿಪು ಅರಮನೆಯ ಕಂಬವೊಂದನ್ನು ತೋರಿಸಿ ಶ್ರೀಹರಿ ಇಲ್ಲಿರುವನೇ ಎಂದು ಕೇಳುತ್ತಾನೆ ಅಹುದೆಂದು ಪ್ರಹ್ಲಾದನು ನುಡಿದಾಗ ಅಸುರನು ತನ್ನ ಗಧೆಯಿಂದ ಪ್ರಹಾರ ಮಾಡುತ್ತಾನೆ .ಆಗ ಮಹಾವಿಷ್ಣುವು ಕ್ರೋಧಿತರನ್ನಾಗಿ ಆಗ ಮಹಾ ವಿಷ್ಣುವು ಕ್ರೋಧದಿಂದ ಆ ಕಂಬದ ಮೇಲೆ ಪ್ರಹಾರ ಮಾಡುತ್ತಾನೆ ಅರ್ಧ ಮಾನವ ಅರ್ಧ ಮೃಗ ಶರೀರಿಯಾಗಿ ನರಸಿಂಹ ಅವತಾರದಲ್ಲಿ ಕಂಬದಿಂದ ಹೊರಬಂದು ಅವತಾರದಲ್ಲಿ ಅರ ಮನೆಯ ಹೊಸ್ತಿಲಮೇಲೆ ಕುಳಿತು ಸಂಧ್ಯಾ ಸಮಯದಲ್ಲಿ ತನ್ನ ನಖಗಳಿಂದ     ಅಸುರನ ಒಡಲನ್ನು ಬಗೆದು ಕರುಳ ಮಾಲೆಯ ಹಾಕಿಕೊಳ್ಳುತ್ತಾನೆ .ಅಲ್ಲಿಗೆ ಹಿರಣ್ಯಕಶಿಪುವಿನ ಸಂಹಾರವಾಗಿ ಪ್ರಹ್ಲಾದನ ರಕ್ಷಣೆಯಾಗುತ್ತದೆ .

ಭರತ ಖಂಡದಲ್ಲಿ ಧರ್ಮಕ್ಕೆ ಚ್ಯುತಿಬಂದಾಗ ನಾನು ಅವತರಿಸಿ ಧರ್ಮವನ್ನು ಸ್ಥಾಪಿಸುತ್ತೇನೆ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನುಡಿದಿದ್ದಾನೆ . ಅದರಂತೆಯೇ ಸತ್ಯ ಯುಗದಿಂದ ಇಂದಿನವರೆಗೂ ಭಗವಂತನ ಅವತಾರ ವಾಗುತ್ತಲೇ ಇದೆ .

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಅನೇಕ ನರಸಿಂಹ ದೇವಾಲಯಗಳಿವೆ.
ಮೇಲುಕೋಟೆ, ಯಾದಗಿರಿ ಗುಡ್ಡ ,ಧೇನುಗಿರಿ, ಅಹೋಬಿಲ , ಝರ್ ನ ನರಸಿಂಹಸ್ವಾಮಿ ಹೀಗೆ ಅನೇಕ ಕಡೆಗಳಲ್ಲಿ ಸ್ವಾಮಿಯ ಪುಣ್ಯ ಕ್ಷೇತ್ರಗಳಿವೆ . ಭಕ್ತರು ನರಸಿಂಹ ಜಯಂತಿಯಂದು ಭಗವಂತನನ್ನು ಸ್ಮರಿಸುತ್ತಾ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಾಧಿಸುತ್ತಾರೆ .ಶ್ರೀ ನಾರಸಿಂಹನ ಕೃಪೆಗೆ ಪಾತ್ರರಾಗುತ್ತಾರೆ .

 

ಶ್ರೀಮತಿ ಸುಜಾತ ಪ್ರಾಣೇಶ್, ಚಿತ್ರದುರ್ಗ 99861 53163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

ದರ್ಶನ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿರುವುದೇಕೆ ಗೊತ್ತಾ : ನಾಗಮಂಗಲದಲ್ಲಿ ಸತ್ಯ ಹೇಳಿದ ಚಾಲೆಂಜಿಂಗ್ ಸ್ಟಾರ್

ಮಂಡ್ಯ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಮೊದಲ ಹಂತದ ಚುನಾವಣೆಗೆ ಇನ್ನೆರಡು ದಿನ ಬಾಕಿ. ಎರಡನೇ ಹಳತದ ಚುನಾವಣೆಗೆ 13 ದಿನ ಬಾಕಿ ಇದೆ. ಹೀಗಿರುವಾಗ ಪಕ್ಷಗಳೆಲ್ಲಾ ಅಭ್ಯರ್ಥಿಗಳ ರವಾವಿ ಪ್ರಚಾರ

error: Content is protected !!