ಹನ್ನೊಂದು ದಿನಗಳ ಶರಣ ಸಂಸ್ಕೃತಿ ಉತ್ಸವಕ್ಕೆ ಮುರುಘಾ ಮಠ ಸಜ್ಜು ; ಯಾವ ದಿನ ಯಾವ ಕಾರ್ಯಕ್ರಮ, ಇಲ್ಲಿದೆ ಸಂಪೂರ್ಣ ಮಾಹಿತಿ !

suddionenews
2 Min Read

ಸುದ್ದಿಒನ್, ಚಿತ್ರದುರ್ಗ, (ಅ.01) : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಅಕ್ಟೋಬರ್ 8 ರಿಂದ 18 ರವರೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವ ಮತ್ತು ಶರಣಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ‘ಶರಣ ಸಂಸ್ಕೃತಿ ಉತ್ಸವ- 2021’ ರ ಲೋಗೋ ಮತ್ತು ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಅಕ್ಟೋಬರ್ 8 ರಂದು ಬೈಕ್ ರ್ಯಾಲಿ, ರಾಜ್ಯಮಟ್ಟದ ಜನಪದ ಕಲೆಗಳ ಸ್ಪರ್ಧೆ, ಚಲನಚಿತ್ರೋತ್ಸವ ಉದ್ಘಾಟನೆ ಹಾಗೂ ರಾಷ್ಟçಮಟ್ಟದ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಪುರುಷರ ತಂಡಗಳಾದ ಇಂಡಿಯನ್ ಬ್ಯಾಂಕ್ ಚೆನ್ನೈ, ಇಂಡಿಯನ್ ರೈಲ್ವೆ ದೆಹಲಿ, ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ತಮಿಳುನಾಡು, ಓಎನ್‌ಜಿಸಿ ಗುವಾಹಟಿ, ಹರಿಯಾಣ ರಾಜ್ಯ ತಂಡ, ಬಿಪಿಸಿಎಲ್ ಕೊಚ್ಚಿನ್, ಕೆಎಸ್‌ಇಟಿ ತಂಡ ಕೇರಳ ಮತ್ತು ಕರ್ನಾಟಕ ತಂಡ ಬೆಂಗಳೂರು ಹಾಗು ಮಹಿಳೆಯರ ತಂಡಗಳಾದ ಇಂಡಿಯನ್ ರೈಲ್ವೆ ದೆಹಲಿ, ತಮಿಳುನಾಡು ತಂಡ, ಕೆಎಸ್‌ಇಟಿ ಕೇರಳ, ಕರ್ನಾಟಕ ತಂಡ ಬೆಂಗಳೂರು, ಕೇರಳ ಪೊಲೀಸ್ ತಂಡ, ಎಸ್‌ಆರ್‌ಎಂ. ಯೂನಿವರ್ಸಿಟಿ ತಂಡ ತಮಿಳುನಾಡು ತಂಡಗಳು ಭಾಗವಹಿಸಲಿವೆ. ರಾಷ್ಟ್ರಮಟ್ಟದ ಆಹಾರಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಯೂತ್‌ಫೆಸ್ಟಿವಲ್ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಅಕ್ಟೋಬರ್ 9 ರಂದು ರಾಜ್ಯಮಟ್ಟದ ಕೋಲಾಟ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿ,

ಅಕ್ಟೋಬರ್ 10 ರಂದು ದಕ್ಷಿಣ ರಾಜ್ಯಗಳ ಮೌಂಟೆನ್ ಬೈಕ್ರ್ಯಾ ಲಿ, ರಾಜ್ಯಮಟ್ಟದ ಭಜನೆ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿ,

ಅಕ್ಟೋಬರ್ 11 ರಂದು ಚಿತ್ರದುರ್ಗ ಸ್ಥಳೀಯ ಮಹಿಳೆಯರ ಕ್ರೀಡಾಕೂಟ, ವಾಲಿಬಾಲ್ ಪಂದ್ಯಾವಳಿ,

ಅಕ್ಟೋಬರ್ 12 ರಂದು ರಾಜ್ಯಮಟ್ಟದ ಶ್ವಾನಪ್ರದರ್ಶನ ಮತ್ತು ಸ್ಪರ್ಧೆ, ಸ್ವಾತಂತ್ರ್ಯಧ ಅಮೃತ ಮಹೋತ್ಸವ, ಬಸವಕೇಂದ್ರ ಪದಾಧಿಕಾರಿಗಳ ಸಮಾವೇಶ, ಕ್ರೀಡಾಕೂಟ ಮತ್ತು ಆಹಾರ ಮೇಳ ಸಮಾರೋಪ ಸಮಾರಂಭಗಳು ನಡೆಯಲಿವೆ.

ಅಕ್ಟೋಬರ್ 13 ರಂದು ಸಾಲುಮರದ ತಿಮ್ಮಕ್ಕ ಬಸವತತ್ವ ಧ್ವಜಾರೋಹಣ ನೆರವೇರಿಸುವರು. ಸಹಜ ಶಿವಯೋಗ, ಕೃಷಿಮೇಳ ಮತ್ತು ಕೈಗಾರಿಕಾ ವಸ್ತುಪ್ರದರ್ಶನ, ಮುರುಘಾಶ್ರೀ ಹಾಗು ಭರಮಣ್ಣನಾಯಕಶೌರ್ಯ ಪ್ರಶಸ್ತಿ ಪ್ರದಾನ,

ಅಕ್ಟೋಬರ್ 14 ರಂದು ಮಹಿಳಾಗೋಷ್ಠಿ, ಸಿಪಿಆರ್ ತರಬೇತಿ ಆರೋಗ್ಯಮೇಳ ಸಮಾರೋಪ, ಯುವಮೇಳ,

ಅಕ್ಟೋಬರ್ 15 ರಂದು ಸಹಜಶಿವಯೋಗ, ಶರಣಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳ, ಮಕ್ಕಳ ಮೇಳ.

ಅಕ್ಟೋಬರ್ 16 ರಂದು ಸಹಜಶಿವಯೋಗ, ಜಯದೇವ ಜಂಗೀಕುಸ್ತಿ, ಶರಣದಂಪತಿಗಳಿಗೆ ಗೌರವಾರ್ಪಣೆ, ವಿಚಾರಗೋಷ್ಠಿ ಏರ್ಪಡಿಸಲಾಗಿದೆ.

ಅಕ್ಟೋಬರ್ 17 ರಂದು ಸಹಜಶಿವಯೋಗ, ಲಿಂ.ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 28ನೇ ಸ್ಮರಣೋತ್ಸವ, ಪಂಡಿತ್ ರಾಜೀವ್ ತಾರಾನಾಥ್ ಮತ್ತು ಡಾ. ಕೆ. ಕಸ್ತೂರಿ ರಂಗನ್ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ.

ಅಕ್ಟೋಬರ್ 18 ರಂದು ವಿಶ್ವಕಲ್ಯಾಣಾರ್ಥವಾಗಿ ಸಾವಿರಾರು ಮಠಾಧೀಶರಿಂದ ಲಿಂಗಪೂಜೆ, ಸರ್ವಜನಾಂಗದ ಮಠಾಧೀಶರ ಸಮಾವೇಶ ಹಾಗೂ ಸಂಜೆ 5.30 ಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಗುರುವಂದನೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಸವಭೂಷಣ ಪ್ರಶಸ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್  19 ರಂದು ಮಧ್ಯಾಹ್ನ 3 ಕ್ಕೆ ಉಳವಿಯ ಶಾಖಾ ಶ್ರೀ ಮುರುಘಾಮಠದಲ್ಲಿ ಮಠಾಧೀಶರ ಚಿಂತನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಉತ್ಸವದ ಗೌರವಾಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಕಾರ್ಯಾಧ್ಯಕ್ಷ ಕೆ.ಎಸ್.ನವೀನ್, ಖಜಾಂಚಿ ಎ.ಜೆ.ಪರಮಶಿವಯ್ಯ, ಪದಾಧಿಕಾರಿಗಳಾದ ಎಲ್.ಬಿ.ರಾಜಶೇಖರ್, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಪಟೇಲ್ ಶಿವಕುಮಾರ್, ಮಹಡಿ ಶಿವಮೂರ್ತಿ, ಕೆಇಬಿ ಷಣ್ಮುಖಪ್ಪ, ವಿಶ್ವನಾಥಯ್ಯ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *