ಚಿತ್ರದುರ್ಗದ ಶ್ರೀ ಅಹೋಬಲ‌ ಟಿವಿಎಸ್ ಕಂಪನಿಯು ಜನರಿಗೆ ಉತ್ತಮ ಸೇವೆ ನೀಡುತ್ತಿದೆ : ಸಚಿವ ಬಿ.ಶ್ರೀರಾಮುಲು

suddionenews
2 Min Read

ಚಿತ್ರದುರ್ಗ, (ಜೂ.11) : ನಗರದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ನಲ್ಲಿ ಟಿವಿಎಸ್ ಕಂಪನಿ ಹೊಸ ನೂತನ‌ ಮಾದರಿಯ ಎನ್ಟರ್ಕ್ 125 ಎಕ್ಸ್ಟಿ ಸ್ಕೂಟರ್ ಬಿಡುಗಡೆಯನ್ನು ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.‌ನವೀನ್ ಬಿಡುಗಡೆಗೊಳಿಸಿದರು.

ಪರಿಶಿಷ್ಟ ವರ್ಗಗಗಳ‌ ಕಲ್ಯಾಣ ಮತ್ತು ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ಇನ್ಟರ್ಕ್ 125 ಎಕ್ಸ್ಟಿ ಸ್ಕೂಟರ್ ಗೆ ಗ್ರಾಹಕರಿಗೆ ಕೀ ವಿತರಿಸಿ ಮಾತನಾಡಿ ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಅತಿ ವೇಗದ ಚಾಲನೆ ಮಾಡಬಾರದು. ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್ ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದೆ.

ಟಿವಿಎಸ್ ಕಂಪನಿಯು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದು ಇಂದು ಇನ್ಟರ್ಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅತ್ಯಂತ ಗಟ್ಟಿ ಮತ್ತು ಬಾಳಿಕೆ ಬರುವ ಬೈಕ್ ಮತ್ತು ಸ್ಕೂಟಿಯನ್ನು ಟಿವಿಎಸ್ ಕಂಪನಿ ಗ್ರಾಹಕರಿಗೆ ನೀಡುತ್ತಿದೆ.

ಚಿತ್ರದುರ್ಗ ಶ್ರೀ ಅಹೋಬಲ‌ ಟಿವಿಎಸ್ ಕಂಪನಿಯ ಪ್ರಾರಂಭೋತ್ಸವ ಸಂದರ್ಭಗಳಲ್ಲಿ ಬರಲು ಆಗಿರಲಿಲ್ಲ. ಆದ ಕಾರಣ ಇಂದು ಆಗಮಿಸಿದ್ದು ಶ್ರೀ ಅಹೋಬಲ‌ ಟಿವಿಎಸ್ ಕಂಪನಿಯ ಮಾಲೀಕ‌ ಅರುಣ್ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದರು.

ಶ್ರೀ ಅಹೋಬಲ ಟಿವಿಎಸ್ ಮಾಲೀಕರಾದ ಅರುಣ್ ಮಾತನಾಡಿ ಡಿಜಿಟಲ್ ಡಿಸ್ಪ್ಲೇ ಮೊಬೈಲ್ ಕನೆಕ್ಟ್ ಮಾಡಿಕೊಳ್ಳುವ ನೂತನ ವಾಹನ ಇದಾಗಿದೆ.ನೂತನ ಎಂಟರ್ಕ್ 125 ಹೊಚ್ಚ ಹೊಸ ತಂತ್ರಜ್ಞಾನವನ್ನು ಟಿವಿಎಸ್ ಕಂಪನಿ ಸದಾ ಗ್ರಾಹಕರಿಗೆ ತಂತ್ರಜ್ಞಾನವನ್ನು ನೀಡಲು ಮುಂಚೂಣಿಯಲ್ಲಿದೆ. ಎಂಟರ್ಕ್ 125 ಸ್ಕೂಟಿಯಲ್ಲಿ ಜಿಪಿಎಸ್ ಮತ್ತು ಬ್ಲೂಟೂತ್ ಮೂಲಕ ಮೊಬೈಲ್ ಕನಕ್ಷನ್ ಮಾಡಿಕೊಂಡು ಎಸ್ಎಂಎಸ್ ನೋಡಬಹುದು, ಕಾರ್ ರೀತಿಯಲ್ಲಿ ಡಿಸ್ಪ್ಲೇ ವಾಹನಕ್ಕೆ ನೀಡಲಾಗಿದೆ.

ಗ್ರಾಹಕರು ನೂತನ ವಾಹನ ಮುಖಾಂತರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಪಿಎಸ್ ಹಾಕಿಕೊಂಡು ತಲುಪುವುದಕ್ಕೆ ಒಂದು ಉತ್ತಮ ಕೊರಿಯರ್ ಡೆಲಿವರಿ ಇವರಿಗೆ ಉತ್ತಮ ವಾಹನ ಎಂದು ಹೇಳಬಹುದು ಎಂದು ಮಾಲೀಕರು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಲಿಂಗಾರೆಡ್ಡಿ, ಮಾಜಿ ವಿಧಾನ ಸದಸ್ಯ ಪರಿಷತ್ ಸದಸ್ಯ ರಘು ಆಚಾರ್ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ್ ಕೆ. ಗ್ರಾಹಕರಿಗೆ ಉಚಿತ ವಾಚ್ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ  ಗ್ರಾಹಕರು , ಸಿಬ್ಬಂದಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *