Connect with us

Hi, what are you looking for?

ಕ್ರೀಡಾ ಸುದ್ದಿ

ಐಪಿಎಲ್‌ 13 : ಶಮಿ ಅಬ್ಬರಕ್ಕೆ ತತ್ತರಿಸಿದ ದೆಹಲಿ

sharana samskruthi ustav 2020_suddione banner 1

ದುಬೈ, ಸುದ್ದಿಒನ್,( ಸೆ.20) : ಐಪಿಎಲ್‌ನ 13 ನೇ ಆವೃತ್ತಿ ಅಂಗವಾಗಿ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಲವಿಲ ಒದ್ದಾಡುತ್ತಿದೆ.ಕೇವಲ 13 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಶಿಖರ್ ಧವನ್ ಮೊದಲ ವಿಕೆಟ್‌ಗೆ ಪೆವಿಲಿಯನ್‌ಗೆ ಸೇರಿಕೊಂಡರೆ, ನಂತರದ ನಾಲ್ಕು ರನ್ ಗಳ ಅಂತರದಲ್ಲಿ ಎರಡು ವಿಕೆಟ್ ಕಳೆದುಕೊಂಡಿದೆ. ಅನಗತ್ಯ ರನ್‌ಗಾಗಿ ಧವನ್ ರನ್‌ ಔಟ್ ಆದರೆ,
ಪೃಥ್ವಿ ಷಾ (5) ಮತ್ತು ಹೆಟ್‌ಮೇಯರ್ (7) ಅವರನ್ನು ಮೊಹಮ್ಮದ್ ಶಮಿ ಪೆವಿಲಿಯನ್‌ಗೆ ಕಳುಹಿಸಿದರು.

ಶಮಿ ಎಸೆದ ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಪೃಥ್ವಿ ಷಾ ಔಟಾದರೆ, ಅದೇ ಓವರ್ ನ ಕೊನೆಯ ಎಸೆತದಲ್ಲಿ ಹೆಟ್‌ಮೇಯರ್ ಕೂಡ ಪೆವಿಲಿಯನ್ ಕಡೆ ನಡೆದರು.

ಎರಡನೇ ಓವರ್‌ನಲ್ಲಿ ಧವನ್ ಡಕೌಟ್ ಆದರು. ಆ ನಂತರ ಶಮಿ ಎಸೆದ ಒಂದೇ ಓವರ್‌ನಲ್ಲಿ ದೆಹಲಿ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು.
ಟಾಸ್ ಗೆದ್ದ ಕಿಂಗ್ಸ್ ಪಂಜಾಬ್ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ದೆಹಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌ಗೆ ಇಳಿಯಿತು. ಆರಂಭದಿಂದಲೂ ಸ್ವಲ್ಪ ಹಿಂಜರಿಕೆಯಿಂದ ಬ್ಯಾಟಿಂಗ್ ಆರಂಬಿಸಿದ ದೆಹಲಿ ಸತತವಾಗಿ ಮೂರು ವಿಕೆಟ್ ಕಳೆದುಕೊಂಡಿತು. ಇತ್ತೀಚಿನ ಪಂದ್ಯದಲ್ಲಿ ದೆಹಲಿಯು ಪ್ರೇಕ್ಷಕರ ನೆಚ್ಚಿನ ತಂಡವಾಗಿದೆ. ಈ ಒತ್ತಡದಲ್ಲಿ ವಿಕೆಟ್‌ಗಳನ್ನು ರಕ್ಷಿಸುವತ್ತ ಗಮನ ಹಾರಿಸಬೇಕಾಗಿದೆ. ಇದು ಈ ಆವೃತ್ತಿಯ ಎರಡನೇ ಪಂದ್ಯವಾಗಿದೆ. ಉಭಯ ತಂಡಗಳ ಸಾಮರ್ಥ್ಯದ ದೃಷ್ಟಿಯಿಂದ ದೆಹಲಿಯೇ ಉತ್ತಮವಾಗಿದೆ.

ಪ್ರಸ್ತುತ, ದೆಹಲಿ ತಂಡದಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಈ ಆವೃತ್ತಿಯಲ್ಲಿ ದೆಹಲಿ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಅನುಭವ ಯುವ ಬೌಲರ್‌ಗಳಿಗೆ ಬಹಳ ಉಪಯುಕ್ತವಾಗಲಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ, ಕಗಿಸೊ ರಬಾಡಾ, ಕಿಮೋ ಪಾಲ್, ಮೋಹಿತ್ ಶರ್ಮಾ ಮತ್ತು ಕ್ರಿಸ್ ವೋಕ್ಸ್ ಇದ್ದಾರೆ. ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement. Scroll to continue reading.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಕ್ರೀಡಾ ಸುದ್ದಿ

ಮುಂಬೈ:  ಮುಂಬರುವ ಐಪಿಎಲ್ 2020 ರ ಸಮಯದಲ್ಲಿ ರಿಲಯನ್ಸ್ ಜಿಯೋ ಕ್ರಿಕೆಟ್ ಪ್ರಿಯರಿಗಾಗಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಜಿಯೋ ಕ್ರಿಕೆಟ್ ಪ್ಲಾನ್ ಹೆಸರಿನಲ್ಲಿ 499 ಮತ್ತು 777 ರೂ ಪ್ಯಾಕ್‌ಗಳನ್ನು...