ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.15 : ಮಕ್ಕಳಲ್ಲಿ ಕ್ರೀಡೆ ಚೈತನ್ಯ ತುಂಬುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗುವಲ್ಲಿ ಕ್ರೀಡೆಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಚಿತ್ರದುರ್ಗ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್ ಹೇಳಿದರು.
ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ
ನಡೆದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ 2023-24ನೇ ಸಾಲಿನ ‘ವಾರ್ಷಿಕ ಕ್ರೀಡಾಕೂಟದ ವಿಶೇಷ ಆಹ್ವಾನಿತರಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷೀಯ ನುಡಿಗಳನ್ನು ಮಾತನಾಡಿದರು.
ವಿದ್ಯಾ ವಿಕಾಸ ಶಾಲೆಯು ವಿದ್ಯೆಯ ಜೊತೆಗೆ ಕ್ರೀಡೆಗಳಲ್ಲೂ ಆಸಕ್ತಿ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್ ಅವರು ಮಾತನಾಡುತ್ತಾ ಕ್ರೀಡೆಗಳು ಮಾನವನಿಗೆ ಅನಾದಿಕಾಲದಿಂದಲೂ ಸೃಜನಾತ್ಮಕ ಕೌಶಲ್ಯ ಬೆಳವಣಿಗೆಯಾಗುವಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವಲ್ಲಿ, ಶಿಸ್ತು ಬದ್ಧ ಜೀವನ ನಡೆಸುವಲ್ಲಿ, ಕ್ರಿಯಾತ್ಮಕ ಚಿಂತನೆಗಳು ಬೆಳೆಯುವಲ್ಲಿ, ಕ್ರೀಡೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿನಿಯರು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಮತಿ ಅನಿತಾ ಅವರ ನಿರ್ದೆಶನದಲ್ಲಿ ಟೇಕ್ವಾಡೋಗೆ ಸಂಬಂಧಿಸಿದ ವಿವಿಧ ಭಂಗಿಗಳನ್ನು ಚಾಕಚಕ್ಯತೆಯಿಂದ ಪ್ರದರ್ಶಿಸಿದರು. 6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ನೃತ್ಯ ನೋಡುಗರ ಗಮನ ಸೆಳೆಯಿತು.
ಕ್ರೀಡಾಕೂಟದ ಅಂಗವಾಗಿ ಶಾಲಾ ಪಥ ಸಂಚಲನ ಗಣ್ಯರಿಗೆ ಗೌರವ ವಂದನೆಗಳನ್ನು ಅರ್ಪಿಸಿತ್ತು. ಶಾಲೆಯ ವಿದ್ಯಾರ್ಥಿ ನಾಯಕಿ ಸಾಧನ ಜಿ.ಬಿ ನೇತೃತ್ವದಲ್ಲಿ ಕ್ರೀಡಾ ಪ್ರತಿಜ್ಞೆಯನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೆಗೆದುಕೊಂಡರು.
ಕ್ರೀಡಾಕೂಟದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಎನ್.ವಾಸುದೇವ ರಾಮ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದ ಸಾದಿಕ್ ಉಲ್ಲಾ ಇವರುಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
2 ರಿಂದ 10ನೇ ತರಗತಿ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ ವಿಜಯ ಕುಮಾರ್, ಸಂಸ್ಥೆಯ ಅಕಾಡೆಮಿಕ್ ಅಡ್ಮಿನಿಸ್ಟ್ರೇಟರ್ ಡಾ|| ಸ್ವಾಮಿ ಕೆ.ಎನ್. ಮುಖ್ಯ ಶಿಕ್ಷಕರಾದ ಸಂಪತ್ ಕುಮಾರ್.ಸಿ.ಡಿ, ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಪೋಷಕರು. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೃಷಾ ಮತ್ತು ತಂಡದವರು ಪ್ರಾರ್ಥಾನಾ ಗೀತೆಯನ್ನು ಹಾಡಿದರು. ಶ್ರೀಮತಿ ಯಶೋಧ ಸ್ವಾಗತಿಸಿದರು. ಶ್ರೀ ಶಂಕರ್ ವಾರ್ಷಿಕ ಕ್ರೀಡಾ ವರದಿಯನ್ನು ಓದಿದರು. ಸೈಯದ್ ಖಾದರ್ ಬಾಷಾ ಅವರು ವಂದಿಸಿದರು. ತಿಪ್ಪೇಸ್ವಾಮಿ ಎನ್.ಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 25 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…