Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಆಧ್ಯಾತ್ಮಿಕ ಹಾಗೂ ವಾಸ್ತವಿಕ ಹೊಳಪು ನೀಡುವ ಶರಣ ಸಂಸ್ಕೃತಿ ಉತ್ಸವ

Facebook
Twitter
Telegram
WhatsApp

 

ವಿಶೇಷ ಲೇಖನ : ನಿರಂಜನ ದೇವರಮನೆ ಸಾಹಿತಿಗಳು, ಚಿತ್ರದುರ್ಗ. ಮೊ : ಮೊ: 9449022069

ಭಾರತೀಯ ಸಮಾಜೋ-ಧಾರ್ಮಿಕ ಇತಿಹಾಸ ಪರಂಪರೆಯಲ್ಲಿ ಕರ್ನಾಟಕ ಚರಿತ್ರೆಯ ಹನ್ನೆರಡನೆ ಶತಮಾನದ ಕಾಲಘಟ್ಟ ಅತ್ಯಂತ ಮಹತ್ವಪೂರ್ಣವಾದದ್ದು. ಆ ಕಾಲದ ವಿಚಾರಶಕ್ತಿ ಆಧ್ಯಾತ್ಮಿಕ ಉನ್ನತಿ, ಸಾಮಾಜಿಕ ಆಂದೋಲನ ಇಡೀ ಜಗತ್ತಿಗೆ ಶರಣರು ಸಾರಿದ ಧರ್ಮ-ಸಮಾಜ ಕ್ರಾಂತಿಯ ಕಾಂತಿಯ ಕಿರಣಗಳು.

ಇಂಥ ಶರಣ ಧರ್ಮ- ಸಂಸ್ಕೃತಿ ಪರಂಪರೆಯನ್ನು ತಮ್ಮದಾಗಿಸಿಕೊಂಡಿರುವ ಚಿತ್ರದುರ್ಗ ಶೂನ್ಯಪೀಠ ಪರಂಪರೆಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಸದಾ ಬಹುಮುಖಿಯಾಗಿ ತನ್ನ ವಿಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಪ್ರಸ್ತುತ ಶೂನ್ಯ ಪೀಠಾಧ್ಯಕ್ಷರೂ ಹಾಗೂ ತ್ರಿವಿಧ ದಾಸೋಹಿಗಳೂ ಆದ ಡಾ| ಶಿವಮೂರ್ತಿ ಮುರುಘಾಶರಣರು ತಮ್ಮ ಪೀಠ ಪರಂಪರೆಯನ್ನು ಆಧುನಿಕತೆಗೆ ತಕ್ಕಂತೆ ಸಂಯೋಜಿಸಿಕೊಂಡು ಶ್ರೀ ಮಠದ ಅಸ್ಮಿತೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಶ್ರೀಗಳು ಬಸವಧರ್ಮ ಮತ್ತು ಶರಣ ಸಂಸ್ಕೃತಿಯ ಸಾರ್ವಕಾಲಿಕ ಸತ್ಯಗಳನ್ನು ಈ ನಾಡಿಗೆ ಅನಾವರಣಗೊಳಿಸುವ ಮುಖೇನ ಅದರ ಅಖಂಡತೆಯನ್ನು ಎತ್ತಿ ಹಿಡಿದಿದ್ದಾರೆ.

ಅಲ್ಲದೆ ಪರಂಪರೆಯೊಂದು ಸಮಕಾಲೀನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಡೆದಲ್ಲಿ ಅದು ಹೆಚ್ಚು ಅರ್ಥಪೂರ್ಣವಾಗಬಲ್ಲದು ಎಂಬುದನ್ನು ತಿಳಿದು ಐತಿಹಾಸಿಕ ಪ್ರಜ್ಞೆ, ಪರಂಪರೆಯ ಅರಿವು, ಸಮಕಾಲೀನ ಸಂದರ್ಭ ಹಾಗೂ ಪೂರ್ಣ ದೃಷ್ಟಿಯೊಂದಿಗೆ ಭಕ್ತರ ಭಾವನೆಗಳನ್ನು ಗ್ರಹಿಸಿ ತಮ್ಮ ಮಠದ ಶರಣ ಸಂಸ್ಕೃತಿ ಉತ್ಸವವನ್ನು ಜಾತ-ಮತ-ಪಂಥಗಳ ಮೇರೆಯನ್ನು ದಾಟಿ ಸಮಾಜೋ-ಧಾರ್ಮಿಕ ಮತ್ತು ಭಾವೈಕ್ಯದ ಆದರ್ಶ ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.


ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಡ್ಡುಗಟ್ಟಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಆಧ್ಯಾತ್ಮಿಕ ಹಾಗೂ ವಾಸ್ತವಿಕ ಹೊಳಪು ನೀಡುವ ಮುಖೇನ ಅವುಗಳನ್ನು ಕಾರ್ಯಗತಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣ ಸಂಸ್ಕೃತಿ ಉತ್ಸವ ನಡೆಸುವುದು ವಿಶೇಷವಾಗಿರುತ್ತದೆ.

ಇಂಥ ಅಪರೂಪದ ಶರಣ ಸಂಸ್ಕೃತಿ ಉತ್ಸವ ಡಾ| ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವದೊಂದಿಗೆ ಅಕ್ಟೋಬರ್ 08 ರಿಂದ 18 ರ ವರೆಗೆ ಅತ್ಯಂತ ವೈವಿದ್ಯತೆ, ಸಡಗರ-ಸಂಭ್ರಮಗಳಿಂದ ಜರುಗುತ್ತಿದೆ.

ಪ್ರತಿನಿತ್ಯ ಮಾನಸಿಕ ಪರವಶತೆಯನ್ನು ತಂದುಕೊಡುವ “ಸಹಜ ಶಿವಯೋಗ’ ದಂಥ ಪ್ರಾತ್ಯಕ್ಷಕೆಯನ್ನು ಏರ್ಪಡಿಸಲಾಗಿದೆ. ಮನಸ್ಸಿನ ಕಸಿವಿಸಿ, ಭಾವನೆಗಳ ದ್ವಂದ್ವ, ಬುದ್ದಿ ವಿಕಾರಗಳಂತವುಗಳನ್ನು ದೂರಮಾಡಿ “ದಯೆಯೇ ಧರ್ಮದ ಮೂಲ ಮತ್ತು ಮಾನವೀಯತೆಯೇ ನಿಜವಾದ ಸಂಸ್ಕೃತಿ ಎಂಬುದನ್ನು ಶ್ರೀ ಶರಣರು ತೋರಿಸಿಕೊಡುತ್ತಾರೆ.

ದೇಸೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ “ರಾಜ್ಯಮಟ್ಟದ ಜಾನಪದ ಕಲಾ ಮೇಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.”
ವೀರಗಾಸೆ, ಕೋಲಾಟ, ಭಜನೆ ಜಾನಪದ ಹಾಡು ಮತ್ತು ಕುಣಿತ ಮುಂತಾದ ಪ್ರದರ್ಶನಗಳು ಇಂದಿನ ಪೀಳಿಗೆಗೆ ಜಾನಪದದ ಅರಿವು ಮೂಡಿಸಿ ವಿಕೃತಿ ಸಂಸ್ಕೃತಿಯನ್ನು ದೂರ ಮಾಡಲು ತುಂಬಾ ಸಹಕಾರಿಯಾಗಿವೆ.

ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮಗಳಂಥ ಆರ್ಥಿಕ ರಂಗಗಳ ಪ್ರಗತಿ ಮತ್ತು ಉನ್ನತಿಯ ಮುಖೇನ ಜನತೆಯ ಬದುಕಿನ ಸುಧಾರಣೆ ಕುರಿತು, ವಸ್ತುಪ್ರದರ್ಶನ ಮತ್ತು ಬಯಲು ಸೀಮೆಯ ಅಭಿವೃದ್ಧಿ ಸಮಗ್ರ ಚಿಂತನೆಗೆ ಶರಣರ ಕೊಡುಗೆ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಮಹಿಳೆ ಮತ್ತು ಮಕ್ಕಳ ಗೋಷ್ಠಿ ಹಾಗೂ ಯುವಗೋಷ್ಠಿ ಹಾಗೂ ವಿಚಾರ ಗೋಷ್ಠಿಗಳನ್ನೂ ಸಹ ಏರ್ಪಡಿಸಿ, ಅದರಲ್ಲಿ ಶ್ರೀ ಡಾ| ಶಿವಮೂರ್ತಿ ಮುರುಘಾ ಶರಣರ ಚಿಂತನೆ ಮತ್ತು ಪ್ರಯೋಗಶೀಲತೆಯನ್ನು ಅನಾವರಣಗೊಳಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಅದ್ವಿತೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ಶ್ರೀ ಮುರುಘಾಮಠದ ಪ್ರಶಸ್ತಿಗಳಾದ ಮುರುಘಾಶ್ರೀ, ಶರಣಶ್ರೀ ಹಾಗೂ ಬಸವಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಈಸಾಲಿನಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಡಾ| ಕೆ.ಕಸ್ತೂರಿ ರಂಗನ್, ಹೆಸರಾಂತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಮುಂತಾದವರು ಆಯ್ಕೆಯಾಗಿರುವುದು ವಿಶೇಷವಾಗಿದೆ.

ಜನತೆಯ ಮನಸ್ಸಿಗೆ ಮುದ ನೀಡುವ ಪ್ರಸಿದ್ಧ ಗಾಯಕ-ಕಲಾವಿದರುಗಳಿಂದ ಸಂಗೀತ-ಸಾಂಸ್ಕøತಿಕ ಕಾರ್ಯಕ್ರಮಗಳು ಅತ್ಯಂತ ವೈವಿಧ್ಯಮಯವಾಗಿ ಪ್ರದರ್ಶನಗೊಳ್ಳುತ್ತವೆ.

ಈ ಉತ್ಸವದಲ್ಲಿ ಶ್ರೀ ಶರಣರು ರಚಿಸಿರುವ ಮೂರು ನಾಟಕಗಳು ಮತ್ತು ಅವರ ಹಲವು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ವಚನಗಾಯನ, ಚಿತ್ರಕಲಾ ಪ್ರದರ್ಶನ, ವಚನ ಕಮ್ಮಟ ಪರೀಕ್ಷೆಯ ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ, ಸಾಕು ಪ್ರಾಣಿಗಳ ಪ್ರದರ್ಶನ, ಜಾನಪದ ಕಲಾ ಮೆರವಣಿಗೆ, ರಾಜವಂಶಸ್ಥರ ಭಕ್ತಿ ಸಮರ್ಪಣೆ, ಶೂನ್ಯ ಪೀಠಾರೋಹಣ, ಪ್ರಾಚೀನ ಹಸ್ತ ಪ್ರತಿಗಳ ಮೆರವಣಿಗೆ, ಜಯದೇವ ಜಂಗೀಕುಸ್ತಿ, ಹಿರಿಯ ಸ್ವಾಮೀಜಿಗಳ ಸ್ಮರಣೋತ್ಸವ ಹಾಗೂ ಗುರುವಂದನಾ ಮುಂತಾದ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.
ಇದೇ ಸಂದರ್ಭದಲ್ಲಿ ಶ್ರೀ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವ ನಿಮಿತ್ತ ಬೃಹತ್ ಶಿಲಾಮಂಟಪದ ಪುನರ್ ನಿರ್ಮಾಣ ಹಾಗೂ ಇತರೆ ಕಟ್ಟಡಗಳು ಲೋಕಾರ್ಪಣೆಗೊಳ್ಳಲಿವೆ.

ಈ ಉತ್ಸವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವಿಶೇಷ ರಾಷ್ಟ್ರೀಯ ಪ್ರೇಮವನ್ನು ಪ್ರತಿಬಿಂಬಿಸುವ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ. ಈ ಉತ್ಸವದಲ್ಲಿ ರಾಷ್ಟ್ರದ ನಾನಾ ಕಡೆಯಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ದಾಸೋಹದ ಭಕ್ಷ್ಯಬೋಜನದ ವ್ಯವಸ್ಥೆ ಮಾಡಲಾಗಿದೆ.

ಈ ನಾಡಿನ ಇತಿಹಾಸದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಮುಖೇನ ನಡೆದ ಸಮಾಜೋ-ಧಾರ್ಮಿಕ-ಸಾಹಿತ್ಯಿಕ – ಸಾಂಸ್ಕೃತಿಕ ಚಳುವಳಿಯ ಶರಣರ ಕಾಲಮಾನವನ್ನು ಮತ್ತೊಮ್ಮೆ ನೆನಪಿಸುತ್ತ ಈ ದಿನಮಾನಗಳಿಗೆ ಇಂಥ ಚಳುವಳಿ ಪ್ರಸ್ತುತ ಮತ್ತು ಅನಿವಾರ್ಯವೆಂಬ ಸಂದೇಶ ಈ ಉತ್ಸವದಲ್ಲಿ ಹರಿದಾಡುವ ಮುಖೇನ ಆರೋಗ್ಯಪೂರ್ಣ, ಸಮಷ್ಟಿ, ಸಾತ್ವಿಕ, ಸತ್ವಪೂರ್ಣ ಸಮಸಮಾಜದ ರಚನೆಗೆ ವೇದಿಕೆಯಾಗಿ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ.

-ನಿರಂಜನ ದೇವರಮನೆ ಸಾಹಿತಿಗಳು,
ಚಿತ್ರದುರ್ಗ.
ಮೊ: 9449022069

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟ | ಏಪ್ರಿಲ್ 4ರ ವರೆಗೆ ನಾಮಪತ್ರ ಸ್ವೀಕಾರ

ಚಿತ್ರದುರ್ಗ. ಮಾರ್ಚ್. 28: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರ ಆಯ್ಕೆಗೆ ಮಾರ್ಚ್.28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.‌ ನಂ.18 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ

SRH ವಿರುದ್ಧ ಮುಂಬೈ ಇಂಡಿಯನ್ ಸೋಲು: ನಾಯಕ ಕೊಟ್ಟ ಸ್ಪಷ್ಟನೆ ಏನು..?

  ನಿನ್ನೆ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಖಾಮುಖಿಯಾಗಿದ್ದವು. ಆದರೆ ನಿನ್ನೆಯ ಐಪಿಎಲ್ ರೋಚಕ ಪಂದ್ಯದಲ್ಲಿ ಮುಂಬೈ ಮಣಿಸಿ ಎಸ್ ಆರ್ ಹೆಚ್ ಭರ್ಜರಿ ಗೆಲುವು ಸಾಧಿಸಿದೆ. 31 ರನ್

ಹಿರಿಯೂರಿನಲ್ಲಿ ಅಧಿಕಾರಿಗಳ ಭರ್ಜರಿ ಬೇಟೆ | 5 ಕೆಜಿ ಚಿನ್ನ ವಶ

  ಸುದ್ದಿಒನ್, ಹಿರಿಯೂರು, ಮಾರ್ಚ್. 28  : ನಗರದಲ್ಲಿ ದಾಖಲೆಯಿಲ್ಲದೆ ಸಂಗ್ರಹಿಸಿಟ್ಟಿದ್ದ 5. 250 ಗ್ರಾಂ,‌(5 kg. 250 gms) 18 ಕ್ಯಾರೆಟ್ ಚಿನ್ನವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಸಿ.

error: Content is protected !!