ಇಂದು ಕಿಚ್ಚನಿಗೆ ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸೆಲೆಬ್ರೆಟಿಗಳು, ಅಭಿಮಾನಿಗಳು ಶುಭ ಹಾರೈಸಿತ್ತಿದ್ದಾರೆ.
ಅಷ್ಟೇ ಅಲ್ಲೆ ದೇಶಕ್ಕೆ ಹೆಮ್ಮೆ ತಂದ ಚಿನ್ನದ ಹುಡುಗ ಕೂಡ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇದಕ್ಕೆ ಫುಲ್ ಖುಷಿಯಾದ ಕಿಚ್ಚ ಸುದೀಪ್ ನೀರಜ್ ಚೋಪ್ರಾಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ವಿಕ್ರಾಂತ ರೋಣದ ಡೆಡ್ ಮ್ಯಾನ್ ಆ್ಯಂಥಮ್ ವಿಡಿಯೋ ರಿಲೀಸ್ ಆಗಿದೆ. ಈ ವಿಡಿಯೋದಲ್ಲಿ ಕಿಚ್ಚ ಸಖತ್ ಸ್ಟೈಲಿಶ್ ಆಗಿ ಕಾಣ್ತಾ ಇದ್ದು, ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.
ಅಷ್ಟೇ ಅಲ್ಲ ನಿರ್ದೇಶಕ, ಬರಹಗಾರ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಕೂಡ ಸಾಂಗೊಂದನ್ನ ರಿಲೀಸ್ ಮಾಡಿದ್ದು, ಸುದೀಪ್ ಬಗ್ಗೆ ಗುಣಗಾನ ಮಾಡಿದ್ದಾರೆ.