ಚಿತ್ರದುರ್ಗ.ಜೂನ್.16: ಚಿತ್ರದುರ್ಗದ ಬಳಿಯ ಗುಡ್ಡದ ರಂಗವ್ವನಹಳ್ಳಿಯಲ್ಲಿರುವ ಚಿತ್ರದುರ್ಗ ಸರ್ಕಾರೀ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದಿನಾಂಕ 16 ಜೂನ್ 2026, ಮಂಗಳವಾರ ಬೆಳಗ್ಗೆ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿ.ಎ.ಎಸ್.ಎ.) ಹಾಗೂ ಚಿತ್ರದುರ್ಗ ಸರ್ಕಾರೀ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಸಿ.ಎಂ.ಸಿ.ಆರ್.ಐ.) ಈ ಮೂರೂ ಸಂಸ್ಥೆಗಳ ಸಹಯೋಗದಲ್ಲಿ ತಜ್ಞರ ವಿಶೇಷ ಉಪನ್ಯಾಸ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಮಹತ್ವದ ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಚಿತ್ರದುರ್ಗ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರೂ ಮತ್ತು ಚಿತ್ರದುರ್ಗ ಡಿಸ್ಟ್ರಿಕ್ಟ್ ಲೀಗಲ್ ಸರ್ವಿಸಸ್ ಅಥಾರಿಟಿಯ ಅಧ್ಯಕ್ಷರೂ ಆದಂತಹ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಜಿ.ಡಿ. ಮಹಾವರ್ಕರ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಎಂ.ಸಿ.ಆರ್.ಐ ನ ಡೀನ್ ಹಾಗೂ ನಿರ್ದೇಶಕರಾದ ಡಾ. ಯುವರಾಜ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗದ ಅಧ್ಯಕ್ಷರಾದ ರೋ. ದಿಲ್ಷದ್ ಉನ್ನೀಸಾರವರು ವಹಿಸಿದ್ದರು.
ವಿಶೇಷ ತಜ್ಞ ಉಪನ್ಯಾಸ ಕಾರ್ಯಕ್ರಮ ಸರಣಿಯ ಮೊದಲನೆಯ ಉಪನ್ಯಾಸದಲ್ಲಿ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ತಜ್ಞರೂ ಹಾಗೂ ಲಾತವ್ಯ ಟೆಕ್ನಾಲಜೀಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರೋ. ಶಶಿಧರ್ ರಾವ್ ಅವರು “ಎನ್ವಿಶನಿಂಗ್ ಗ್ಲೋಬಲ್ ಪಾಸಿಬಿಲಿಟೀಸ್ ಅಂಡ್ ಛಾಲೆಂಜಸ್ ಇನ್ ದಿ ಇರಾ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಎ.ಐ. ಇನ್ ಹೆಲ್ತ್ ಕೇರ್ ಅಂಡ್ ರೋಬೋಟಿಕ್ ಸರ್ಜರಿ” (ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಈ ಕಾಲಘಟ್ಟದ ಜಾಗತಿಕ ಸಾಧ್ಯತೆಗಳು ಹಾಗೂ ಸವಾಲುಗಳು – ಆರೋಗ್ಯ ಕ್ಷೇತ್ರ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ) ಎಂಬ ವಿಷಯದ ಬಗ್ಗೆ ಆಧುನಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ಶಾಸ್ತ್ರ ಈ ಎರಡೂ ಕ್ಷೇತ್ರಗಳ ಆಳವಾದ ಅಧ್ಯಯನ ಆಧಾರಿತವಾದ ಸವಿಸ್ತಾರವಾದಂತಹ ಉಪನ್ಯಾಸ ನೀಡಿದರು.
ಇದಾದ ನಂತರ ನಡೆದ ಎರಡನೆಯ ಉಪನ್ಯಾಸದಲ್ಲಿ ನವೀಕರಿಸಬಹುದಾದ ಸೌರಶಕ್ತಿ ಆಧಾರಿತ ಇಂಧನ ತಜ್ಞರು ಹಾಗೂ ಸೆಲ್ಕೋ ಸೋಲಾರ್ ಕಂಪನಿಯ ಉತ್ತರ ಕರ್ನಾಟಕ ವಿಭಾಗದ ವ್ಯವಸ್ಥಾಪಕರಾದ ರೋ. ಮಂಜುನಾಥ್ ಭಾಗವತ್ ಅವರು “ಎನ್ವಿರಾನ್ಮೆಂಟ್ ಫ್ರೆಂಡ್ಲಿ ಸಸ್ಟೈನಬಲ್ ಎನರ್ಜಿ For ಸ್ಟೇಬಲ್ ಫ್ಯೂಚರ್ ಆಫ್ ಹ್ಯೂಮನ್ಕೈನ್ಡ್” (ಮಾನವಕುಲದ ಸ್ಥಿರ ಭವಿಷ್ಯಕ್ಕೆ ಪರಿಸರಸ್ನೇಹಿ ಸುಸ್ಥಿರ ಇಂಧನ) ಎಂಬ ವಿಷಯದ ಬಗ್ಗೆ ಅತ್ಯಂತ ಸವಿಸ್ತಾರವಾದ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗದ ಖಜಾಂಚಿಗಳಾದ ರೋ. ಶಿವರಾಮ್, ಕ್ಲಬ್ ನ ಸ್ಥಾಪನಾ ಅಧ್ಯಕ್ಷರಾದ ರೋ. ಗಾಯತ್ರಿ ಶಿವರಾಮ್, ಉಪಾಧ್ಯಕ್ಷರಾದ ರೋ. ಗುರುಮೂರ್ತಿ, ಬೋರ್ಡ್ ಆಫ್ ಡೈರೆಕ್ಟರ್ಸ್ ಸದಸ್ಯರಾದ ರೋ. ಶಂಕರಪ್ಪ, ಸಿ.ಎಂ.ಸಿ.ಆರ್.ಐ. ನ ಪ್ರಿನ್ಸಿಪಾಲ್ ಹಾಗೂ ಅರಿವಳಿಕೆ ವಿಭಾಗದ ತಜ್ಞರಾದ ಡಾ. ಮೇಘಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಡಾ. ವೇಣು, ಅನೇಕ ವಿಭಾಗಗಳ ಪ್ರಾಧ್ಯಾಪಕರುಗಳು, ಬೋಧಕರು, ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿ.ಎ.ಎಸ್.ಎ.) ಪಿ.ಎಲ್.ವಿ. ಸದಸ್ಯರುಗಳು ಸೇರಿದಂತೆ ಮೂರೂ ಸಂಸ್ಥೆಗಳ ಅನೇಕ ಗಣ್ಯಮಾನ್ಯರು, ಆಹ್ವಾನಿತರು ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









