Connect with us

Hi, what are you looking for?

ಪ್ರಮುಖ ಸುದ್ದಿ

ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆ ಚೆನ್ನೈ ಅಥವಾ ಗೋವಾಕ್ಕೆ ಸೋನಿಯಾ ಸ್ಥಳಾಂತರ..?

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಚಳಿಗಾಲ ಆರಂಬವಾಗಿರುವ ಹಿನ್ನೆಲೆ ಇದು ಇನ್ನೂ ವಿಪರೀತವಾಗಲಿದೆ. ಹೀಗಾಗಿ ಸೋನಿಯಾಗಾಂಧಿ ಅವರನ್ನು ಕೆಲ ದಿನಗಳ ಕಾಲ ಇತರೆ ನಗರಗಳಿಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.. ಈ ಹಿನ್ನೆಲೆ ಸೋನಿಯಾ ಗಾಂಧಿ ಅವರನ್ನು ಗೋವಾ ಇಲ್ಲವೆ ಚೆನ್ನೈಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪಕ್ಷದ ಮೂಲವನ್ನು ತಿಳಿಸಿದೆ.

ನವದೆಹಲಿ ವಾಯು ಮಾಲಿನ್ಯದಿಂದಾಗಿ ಅವರಿಗೆ ಅಸ್ತಮಾ ಹಾಗೂ ಎದೆ ನೋವು ಹೆಚ್ಚಾಗಿದೆ. ಹೀಗಾಗಿ ನಗರವನ್ನು ಬಿಟ್ಟು ಬೇರೆಡೆಗೆ ಅವರನ್ನು ಸ್ಥಳಾಂತರಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೋನಿಯಾ ಗಾಂಧಿ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಎದೆಯ ಸೋಂಕು ಹಾಗೆಯೇ ಇದ್ದು ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕು ಕಡಿಮೆಯಾಗಿಲ್ಲದೆ ಇರಲು ದೆಹಲಿಯಲ್ಲಿನ ವಾಯುಮಾಲಿನ್ಯ ಕಾರಣವೆಂದು ಮೂಲಗಳು ಉಲ್ಲೇಖಿಸಿದೆ.

ದೆಹಲಿಯಲ್ಲಿನ ವಾಯುಮಾಲಿನ್ಯವು ಸೋನಿಯಾ ಅವರ ಆಸ್ತಮಾ ಮತ್ತು ಹೃದಯದ ಆರೋಗ್ಯ ಸ್ಥಿತಿಯನ್ನು ಮತಷ್ಟು ಉಲ್ಬಣಗೊಳಿಸಿದೆ. ಹಾಗಾಗಿ ಇದೀಗ ಅವರು ದೆಹಲಿಯಿಂದ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ವೈದ್ಯರು ಸೂಚಿಸಿದ್ದಾರೆ.

ಕಳೆದ . ಜುಲೈ 30 ಸಂಜೆ ಸೋನಿಯಾ ಗಾಂಧಿಯನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೆಪ್ಟೆಂಬರ್ 12 ರಂದು, ಅವರು ತಮ್ಮ ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಕೆಲವು ದಿನಗಳವರೆಗೆ ವಿದೇಶಕ್ಕೆ ಹೋಗಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ನವದೆಹಲಿ : ರೈತರು 100 ಕಿ.ಮೀ ಟ್ರಾಕ್ಟರ್ ಪೆರೇಡ್ ನಡೆಸಲು ರ್ಯಾಲಿಗೆ ದೆಹಲಿ ಪೊಲೀಸರು ಅವಕಾಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿಯ ಗಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದು, ಗುರುವಾರ...

ಪ್ರಮುಖ ಸುದ್ದಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಹೊಸ ವರ್ಷಕ್ಕೆ ಪಕ್ಷ ಘೋಷಿಸುವುದಾಗಿಯೂ ತಿಳಿಸಿದ್ದರು. ಆದರೆ ಇದೀಗ ಅವ್ರು ರಾಜಕೀಯದಿಂದ ಹಿಂದೆ ಸರಿದು ಮಹತ್ವದ ಘೋಷಣೆ ಮಾಡಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ, ಸುದ್ದಿಒನ್ : ಇದು ಕೋವಿಡ್ ನಾಮ ಸಂವತ್ಸರ. ಹೆಸರೇ ಸೂಚಿಸುವಂತೆ, 2020 ಎಲ್ಲರಲ್ಲೂ ಕರೋನ ಭಯವನ್ನು,  ನಡುಕವನ್ನು ಉಂಟು ಮಾಡಿದ ವರ್ಷ ಇದು. ಆದರೆ, ರಾಜಕೀಯವಾಗಿ ಮಾತ್ರ ಈ ವರ್ಷ ವರ್ಣರಂಜಿತ....

ಪ್ರಮುಖ ಸುದ್ದಿ

ಚೈನ್ನೈ : ಸೂಪರ್ ಸ್ಟಾರ್ ತಲೈವಾ ರಜನಿಕಾಂಂತ್ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಪೊಲೊ...

ಪ್ರಮುಖ ಸುದ್ದಿ

ನವದೆಹಲಿ : 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಿದರು. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಧಾನ್ ಮಂತ್ರಿ ಕಿಸಾನ್...

ಪ್ರಮುಖ ಸುದ್ದಿ

ಚೆನ್ನೈ : ಮಗುವಿನಂತ ಮನಸ್ಸಿನ ದಿವಂಗತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಈಗ ಚಾಕ್ಲೇಟ್ ರೂಪದಲ್ಲಿ ಅವತರಿಸಿದ್ದಾರೆ. ಪುದುಚೇರಿಯ ಅಂಗಡಿ ಮಾಲೀಕರೊಬ್ಬರು ಎಸ್ ಪಿ ಬಿ ಸ್ಮರಣಾರ್ಥ 5.8 ಅಡಿ ಎತ್ತರ 339 ಕೆ.ಜಿ....

ಪ್ರಮುಖ ಸುದ್ದಿ

ಚೆನ್ನೈ: ಬ್ರಿಟನ್ ನಲ್ಲಿ ನಿದ್ದೆಗೆಡಿಸಿರುವ ಹೊಸ ಕರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಬ್ರಿಟನ್ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದಂಥ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ :ಹುಟ್ಟುಹಬ್ಬ ಆಚರಿಸಿಕೊಂಡ ಒಂದು ದಿನದ ನಂತರ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಹಿರಿಯ ಪತ್ರಕರ್ತ ಮೋತಿಲಾಲ್ ವೋರಾ (93) ನಿಧನರಾಗಿದ್ದಾರೆ. ಭಾನುವಾರ ರಾತ್ರಿ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾಗೆ ಇನ್ನೇನು ಲಸಿಕೆ ಸಿಕ್ಕೆ ಬಿಡ್ತು ಅನ್ನೋ ಸಂತಸದಲ್ಲಿದ್ದ ಜನರಿಗೆ ಬ್ರಿಟನ್ ನಲ್ಲಿ ಹರಡುತ್ತಿರುವ ಹೊಸ ಕೋವಿಡ್ ತಲೆ ನೋವಾಗಿ ಪರಿಣಮಿಸಿದೆ. ಬ್ರಿಟನ್ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಶೇಕಡ 70 ಹೆಚ್ಚು...

error: Content is protected !!